ಗ್ರಾ. ಪಂ. ಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ನಿಗದಿತ ಗುರಿ ಸಾಧಿಸಲು ಜಿ. ಪಂ. ಸಿಇಓ ರಾಹುಲ ಶಿಂಧೆ ಸೂಚನೆ

ವಿಜಯಪುರ: ಪ್ರಸಕ್ತ ಆರ್ಥಿಕ(Financial Year) ವರ್ಷದಲ್ಲಿ ಕರ ವಸೂಲಾತಿ(Tax Collection), ನಿಗದಿತ(Fixed) ಗುರಿಯನ್ನು(Target) ತಲುಪಬೇಕು(Reach) ಎಂದು ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ(CEO Rahil Shindhe) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ನಾನಾ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ನಂತರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಸಿಂದಗಿ ತಾಲೂಕಿನ ನಾನಾ ಗ್ರಾ. ಪಂ. ಗಳಿಗೆ ಭೇಟಿ ನಿಡಿದ ಜಿ. ಪಂ. ಸಿಇಓ ರಾಹುಲ ಶಿಂಧೆ

ನಿಗದಿತ ಗುರಿಗೆ ತಕ್ಕಂತೆ ಪ್ರತಿಶತ ನೂರರಷ್ಟು ಸಾಧನೆ ಮಾಡಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದ ಮಾನವ ದಿನಗಳ ಸೃಜನೆಗೆ ನಿಗದಿ ಪಡಿಸಿದ ಗುರಿಯನ್ನು ಮುಟ್ಟಬೇಕು. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಳವಾಗಬೇಕು ಎಂದು ಅವರು ಸೂಚನೆ ನೀಡಿದರು.

ಎಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿತ ಪ್ರಗತಿ ಸಾಧಿಸಲು ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕಗಳ ಮೂಲಕ ಕುಡಿಯುವ ನೀರನ್ನು ಪೂರೈಸಬೇಕು ಎಂದು ರಾಹುಲ ಶಿಂಧೆ ಸೂಚನೆ ನೀಡಿದರು.

ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಎಲ್ಲ ಕೊಠಡಿಗಳನ್ನು ವೀಕ್ಷಿಸಿದರು. ಶಾಲಾ ಮಕ್ಕಳ ಹಾಜರಾತಿ, ಶಾಲೆಯ ಸ್ವಚ್ಛತೆ ಕುರಿತು ಅವಲೋಕನ ನಡೆಸಿದರು. ಶಾಲಾ ಬಿಸಿಯೂಟದ ಅಡುಗೆ ಕೋಣೆಯನ್ನು ವೀಕ್ಷಿಸಿದರು. ನಂತರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕ್ಯಾಶ್‍ಬುಕ್‍ಗಳನ್ನು ಪರಿಶೀಲಿಸಿದರು.

ಸಿಂದಗಿ ತಾಲೂಕ ಪಂಚಾಯಿತಿ ಕಾರ್ಯಾಲಯದಲ್ಲಿ ದೇವರ ಹಿಪ್ಪರಗಿ, ಸಿಂದಗಿ ಮತ್ತು ಆಲಮೇಲ ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಮಹಿಳಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ಮೈಸೂರು ಎಸ್. ಐ. ಆರ್. ಡಿ. ಅವರಿಂದ ಸಾಮಥ್ರ್ಯ ಅಭಿವೃದ್ಧಿ ತರಬೇತಿ ನಡೆಯಿತು. ಈ ತರಬೇತಿಗೆ ಭೇಟಿ ನೀಡಿ ಅವರು, ಮಹಿಳಾ ಜನ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಮಹಿಳೆಯರ ಪರವಾಗಿ ಕುಟುಂಬದ ಬೇರೆ ಸದಸ್ಯರು ಕರ್ತವ್ಯಗಳಲ್ಲಿ ಭಾಗವಹಿಸಬಾರದು. ಖುದ್ದಾಗಿ ಮಹಿಳಾ ಪ್ರತಿನಿಧಿಗಳೇ ಆಡಳಿತ ಕಾರ್ಯಗಳಲ್ಲಿ ತೊಡಗಬೇಕು. ಸರಕಾರದ ಆಶಯದಂತೆ ಮಹಿಳಾ ಸಬಲೀಕರಣ ಮಾಡಬೇಕು ಎಂದು ಜಿ. ಪಂ. ಸಿಇಓ ತಿಳಿಸಿದರು.

ಬಳಿಕ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಎಲ್ಲ ಸಿಬ್ಬಂದಿ ಜೊತೆ ಮಾಹಿತಿ ವಿನಿಮಯ ಮತ್ತು ಪರಸ್ಪರ ಪರಿಚಯವನ್ನು ಮಾಡಿಕೊಂಡರು.

ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ಸಹಾಯಕ ನಿರ್ದೆಶಕರು ನಿತ್ಯಾನಂದ ಯಲಗೋಡ, ಎಂ. ವಿ. ನಾರಾಯಣಪುರ, ತಾಲೂಕ ಪಂಚಾಯತಿಯ ಎಲ್ಲ ಸಿಬ್ಬಂದಿ ಮತ್ತು ನರೇಗಾ ತಾಂತ್ರಿಕ ವರ್ಗ, ತಾಲೂಕ ಐಇಸಿ ಸಂಯೋಜಕರು ಹಾಗೂ ಆಡಳಿತ ಸಹಾಯಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌