ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಿರೇಗೌಡರ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮುಜುಮದಾರ, ಅಸಿಸ್ಟಂಟ್ ಎಂಜಿನಿಯರ್ ರವಿ ಪವಾರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಟಿಯು ಪರೀಕ್ಷೆಯಲ್ಲಿ ಚಿನ್ನದ ಪದಕ ಸೇರಿ ಐದು ಸ್ಥಾನ
ವಿಜಯಪುರ: ವಿಜಯಪುರದ(Vijayapura) ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ(Secab Engineering Collage) ವಿದ್ಯಾರ್ಥಿಗಳು(Students) ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(Belagavi Vishweshwarayya Technical University) ನಡೆಸಿದ ಪರೀಕ್ಷೆಯಲ್ಲಿ ಚಿನ್ನದ ಪದಕ(Gold Medal) ಸೇರಿ ಐದು ರ್ಯಾಂಕ್ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಸ್ನಾತಕೋತ್ತರ ಎಂ.ಟೆಕ್ ವಿಭಾಗದ ಪರೀಕ್ಷೆಯಲ್ಲಿ ಕಂಪ್ಯೂಟರ್ ನೆಟವರ್ಕ್(ಎಸ್ ಸಿ ಎನ್ )ಎಂಜಿನಿಯರಿಂಗ್ ವಿಭಾಗದಲ್ಲಿ ಬೀಬೀ ಆಯೇಶಾ ಹುಂಡೇಕಾರ ಚಿನ್ನದ ಪದಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಪೂಜಾ ಶೇರಖಾನೆ ಮೂರನೇ ಸ್ಥಾನ ಪಡೆದಿದ್ದಾರೆ. ಮಶೀನ್ ಡಿಸೈನ್(ಎಂ ಎಂ ಡಿ) […]
ಸಿಂದಗಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿಢೀರ್ ದಾಳಿ- ಇಬ್ಬರು ಬಾಲ ಕಾರ್ಮಿಕರ ರಕ್ಷಣೆ
ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸಿಂದಗಿ(Sindagi) ತಾಲೂಕಿನಲ್ಲಿ ಕಾರ್ಮಿಕ(Labour) ಇಲಾಖೆ(Department) ಅಧಿಕಾರಿಗಳು ದಿಢೀರ್(Raid) ಧಾಳಿ ನಡೆಸಿ ಇಬ್ಬರು ಕಿಶೋರ ಕಾರ್ಮಿಕರನ್ನು(ಬಾಲ ಕಾರ್ಮಿಕರು)(Children) ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿದರು.. ಬಳಿಕ ಮಾತನಾಡಿದ ಸಿಂದಗಿ ವೃತ್ತದ ಲೇಬರ್ ಇನ್ಸಪೆಕ್ಟರ್ ಜಗದೇವಿ ಸಜ್ಜನ, ಬಾಲ ಕಾರ್ಮಿಕ ಪದ್ದತಿಯು ಅನಿಷ್ಠ ಪದ್ದತಿಗಳಲ್ಲೊಂದಾಗಿದೆ. ಇದರ ನಿರ್ಮೂಲನೆಗೆ ಕೇವಲ ಒಬ್ಬ ವ್ಯಕ್ತಿ ಅಥವಾ ಇಲಾಖೆ ಶ್ರಮಿಸಿದರೆ ಸಾಲದು. ಸಾರ್ವಜನಿಕರ ಹಾಗೂ ನಾನಾ ಇಲಾಖೆಗಳು ಕೈಜೋಡಿಸಬೇಕು ಎಂದು ಹೇಳಿದರು. […]
ಬಸವ ನಾಡಿನಲ್ಲಿ ಹೋಳಿ ಸಂಭ್ರಮ- ಕಾಮಣ್ಮನ ಮೂರ್ತಿ ದಹಿಸಿ ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ ಮಲ್ಲಯ್ಯನ ಭಕ್ತರು- ಹಾಡು ಹೇಳಿ ರಂಜಿಸಿದ ಮಾಜಿ ಸಚಿವ
ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ಬಣ್ಣಗಳ ಹಬ್ಬ ಹೋಳಿ(Colour Festival Holi) ಸಂಭ್ರಮ ಮನೆ ಮಾಡಿದೆ. ಹೋಳಿ ಹಬ್ಬದ ಅಂಗವಾಗಿ ಆಚರಿಸಲಾಗುವ ಕಾಮಣ್ಣನ(Kamanna) ಮೂರ್ತಿ ದಹನ ಕಾರ್ಯಕ್ರಮ(Idol Brun Programme) ಜಿಲ್ಲಾದ್ಯಂತ ತಡರಾತ್ರಿಯವರೆಗೆ ವಿಜೃಂಭಣೆಯಿಂದ ನಡೆಯಿತು. ಗಲ್ಲಿಗಲ್ಲಿಗಳಿಂದ ಹಿಡಿದು ಹಳ್ಳಿಯಿಂದ(Vijjages) ನಗರ ಪ್ರದೇಶಗಳ(Cities) ವರೆಗೆ ನಡೆದ ಆಚರಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೋಂಡರು. ಮಕ್ಕಳಿಂದ ಹಿಡಿದು ಯುವಕರು ಮತ್ತು ಹಿರಿಯರೂ ಕೂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಗುರುವಾರ ತಡರಾತ್ರಿಯವರೆಗೆ ನಾನಾ ಕಡೆಗಳಲ್ಲಿ ಹೋಳಿಯನ್ನು ಆಚರಿಸಲಾಯಿತು. […]