ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ಬಣ್ಣಗಳ ಹಬ್ಬ ಹೋಳಿ(Colour Festival Holi) ಸಂಭ್ರಮ ಮನೆ ಮಾಡಿದೆ. ಹೋಳಿ ಹಬ್ಬದ ಅಂಗವಾಗಿ ಆಚರಿಸಲಾಗುವ ಕಾಮಣ್ಣನ(Kamanna) ಮೂರ್ತಿ ದಹನ ಕಾರ್ಯಕ್ರಮ(Idol Brun Programme) ಜಿಲ್ಲಾದ್ಯಂತ ತಡರಾತ್ರಿಯವರೆಗೆ ವಿಜೃಂಭಣೆಯಿಂದ ನಡೆಯಿತು. ಗಲ್ಲಿಗಲ್ಲಿಗಳಿಂದ ಹಿಡಿದು ಹಳ್ಳಿಯಿಂದ(Vijjages) ನಗರ ಪ್ರದೇಶಗಳ(Cities) ವರೆಗೆ ನಡೆದ ಆಚರಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೋಂಡರು. ಮಕ್ಕಳಿಂದ ಹಿಡಿದು ಯುವಕರು ಮತ್ತು ಹಿರಿಯರೂ ಕೂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.
ಗುರುವಾರ ತಡರಾತ್ರಿಯವರೆಗೆ ನಾನಾ ಕಡೆಗಳಲ್ಲಿ ಹೋಳಿಯನ್ನು ಆಚರಿಸಲಾಯಿತು. ಮಕ್ಕಳು ಕದ್ದು ತಂದ ಕಟ್ಟಿಗೆ, ಮತ್ತಿತರ ದಹಿಸುವ ವಸ್ತುಗಳನ್ನು ಸಂಗ್ರಹಿಸಿ ದಹಿಸಲು ಸಿದ್ಧಪಡಿಸಿದ್ದರು. ವಿಜಯಪುರ ನಗರದ ನಾನಾ ಕಡೆಗಳಲ್ಲಿ ಹಿರಿಯರೂ ಕೂಡ ಹಲಗೆ ಬಾರಿಸಿ ಹಾಡು ಹೇಳುತ್ತ ಹೋಳಿ ಹಬ್ಬವನ್ನು ಆಸ್ವಾಧಿಸಿದರು. ತಮಗೆ ತಿಳಿದಂತೆ ತಾಳಮೇಳದಲ್ಲಿ ಹಲಗೆಯನ್ನು ಬಾರಿಸುತ್ತ ತಲ್ಲೀನರಾಗಿದ್ದರು.
ರಾತ್ರಿ ತಾವು ನಿಗದಿ ಪಡಿಸಿದ ಸಮಯ ಆಗುತ್ತಿದ್ದಂತೆ ಸಂಗ್ರಹಿಸಿ ಇಡಲಾಗಿದ್ದ ಕಟ್ಟಿಗೆ, ಕುಳ್ಳು, ಮತ್ತೀತರ ದಹಿಸುವ ವಸ್ತುಗಳ ಮಧ್ಯೆ ಕಾಮಣ್ಣನ ಮೂರ್ತಿಯನ್ನು ಇಟ್ಟರು. ಬಳಿಕ ನಾನಾ ಭಕ್ತರು ನೀಡಿದ್ದ ಹುರುಣದ ಹೋಳಿಗೆ, ಅನ್ನ, ಪಲ್ಯ, ಕುರುಕಲು ತಿಂಡಿಗಳ ನೈವೆದ್ಯವನ್ನು ಕಾಮಣ್ಣನಿಗೆ ಅರ್ಪಿಸಿದರು. ಅಲ್ಲದೇ, ಸಕ್ಕರೆ ಹಾರವನ್ನು ಕಾಮಣ್ಣನ ಮೂರ್ತಿಗೆ ಹಾಕಿ ನಂತರ ದಹನ ಮಾಡಿದರು. ಬಳಿಕ ಧಗಧಗನೆ ಉರಿಯುತ್ತಿದ್ದ ಬೆಂಕಿಯ ಸುತ್ತ ನಾಲ್ಕೈದು ಸುತ್ತು ಹಾಕುತ್ತ ಕಾಮಣ್ಣನ ಮೂರ್ತಿಯನ್ನು ದಹಿಸಿದ ಸಂಭ್ರಮದಲ್ಲಿ ಖುಷಿ ಪಟ್ಟರು.
ಕೊಲ್ಹಾರದಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಸಂಗಣ್ಣ ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಕಾಮದಹನ ಮತ್ತು ಹೋಳಿ ಹಬ್ಬದ ಆಚರಣೆ ನಡೆಯಿತು. ಈ ಈ ಸಂದರ್ಭದಲ್ಲಿ ಸಂಗಣ್ಣ ಕೆ. ಬೆಳ್ಳುಬ್ಬಿ ಹಾಡು ಹೇಳುವ ಮೂಲಕ ಹೋಳಿ ಹಬ್ಬದ ಸಂಭ್ರಮಕ್ಕೆ ಮೆರಗು ನೀಡಿದರು. ಈ ಪಟ್ಟಣದಲ್ಲಿ ಹುಣ್ಣಿಮೆಯಾದ ಎರಡನೇ ದಿನಕ್ಕೆ ಬಣ್ಣ ಆಡುವುದು ವಾಡಿಕೆಯಾಗಿದೆ.
ವಿಜಯಪುರ ನಗರದ ಜೋರಾಪುರ ಪೇಟೆಯಲ್ಲಿ ರಾತ್ರಿ ಕಾಮಣ್ಣನ ಮೂರ್ತಿಯ ದಹನವಾದ ಬಳಿಕ ಮಲ್ಲಯ್ಯನ ಭಕ್ತರು ಕಂಬಿಯನ್ನು ಹೊತ್ತು ನೆರೆ ರಾಜ್ಯದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳಿದರು. ಕಳೆದ ಸುಮಾರು 50 ವರ್ಷಗಳಿಂದ ಇಲ್ಲಿನ ಭಕ್ತರು ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದು, ಸುಮಾರು 550 ಕಿ. ಮೀ. ಸಂಚಾರ ಮಾಡುತ್ತಾರೆ ಮಾರ್ಗ ಮಧ್ಯದಲ್ಲಿ ನಾನಾ ಭಕ್ತರು ಪಾದಯಾತ್ರಿಗಳಿಗಾಗಿ ಅಲ್ಪೋಪಹಾರ, ಅನ್ನಪ್ರಸಾಸ ವ್ಯವಸ್ಥೆ ಮಾಡುತ್ತಾರೆ. ಯುಗಾದಿಯ ದಿನ ಈ ಭಕ್ತರು ಶ್ರೀಶೈಲ ಮಲ್ಲಯ್ಯನ ದರ್ಶನ ಪಡೆದು ಧನ್ಯತೆ ಅರ್ಪಿಸಿ ವಿಜಯಪುರಕ್ಕೆ ವಾಪಸ್ಸಾಗುವುದು ಇಲ್ಲಿನ ಸಂಪ್ರದಾಯವಾಗಿದೆ.