ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸಿಂದಗಿ(Sindagi) ತಾಲೂಕಿನಲ್ಲಿ ಕಾರ್ಮಿಕ(Labour) ಇಲಾಖೆ(Department) ಅಧಿಕಾರಿಗಳು ದಿಢೀರ್(Raid) ಧಾಳಿ ನಡೆಸಿ ಇಬ್ಬರು ಕಿಶೋರ ಕಾರ್ಮಿಕರನ್ನು(ಬಾಲ ಕಾರ್ಮಿಕರು)(Children) ರಕ್ಷಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿದರು.. ಬಳಿಕ ಮಾತನಾಡಿದ ಸಿಂದಗಿ ವೃತ್ತದ ಲೇಬರ್ ಇನ್ಸಪೆಕ್ಟರ್ ಜಗದೇವಿ ಸಜ್ಜನ, ಬಾಲ ಕಾರ್ಮಿಕ ಪದ್ದತಿಯು ಅನಿಷ್ಠ ಪದ್ದತಿಗಳಲ್ಲೊಂದಾಗಿದೆ. ಇದರ ನಿರ್ಮೂಲನೆಗೆ ಕೇವಲ ಒಬ್ಬ ವ್ಯಕ್ತಿ ಅಥವಾ ಇಲಾಖೆ ಶ್ರಮಿಸಿದರೆ ಸಾಲದು. ಸಾರ್ವಜನಿಕರ ಹಾಗೂ ನಾನಾ ಇಲಾಖೆಗಳು ಕೈಜೋಡಿಸಬೇಕು ಎಂದು ಹೇಳಿದರು.
ಈ ದಾಳಿಯಲ್ಲಿ ಸಿಂದಗಿ ತಾಲೂಕು ತನಿಖಾ ತಂಡದ ಸದಸ್ಯರು ಸೇರಿದಂತೆ ಸಿಂದಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರುದ್ರಗೌಡ ಪಾಟೀಲ, ಸಿಂದಗಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ ಗೂಡರು, ಶಿಕ್ಷಣ ಇಲಾಖೆ ಅಧಿಕಾರಿ ಎಚ್.ಎಂ. ಬಡಿಗೇರ, ರೇಷ್ಮೆ ಇಲಾಖೆ ಅಧಿಕಾರಿ ಎಸ್. ಎಸ್. ಲಮಾಣಿ, ಪೋಲಿಸ ಅಧಿಕಾರಿ ಎ. ಕೆ. ಮಲಭಾಗಿ, ಆರ್. ಬಿ. ರಾಂಪೂರ, ಎಸ್. ಎಸ್. ಕಾರವಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ನೀಲಮ್ಮಾ ಖೇಡಗಿ ಮತ್ತು ಪಾರ್ವತಿ ಶಿವನಾಳ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.