ವಿಜಯಪುರ: ವಿಜಯಪುರದ(Vijayapura) ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ(Secab Engineering Collage) ವಿದ್ಯಾರ್ಥಿಗಳು(Students) ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(Belagavi Vishweshwarayya Technical University) ನಡೆಸಿದ ಪರೀಕ್ಷೆಯಲ್ಲಿ ಚಿನ್ನದ ಪದಕ(Gold Medal) ಸೇರಿ ಐದು ರ್ಯಾಂಕ್ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಸ್ನಾತಕೋತ್ತರ ಎಂ.ಟೆಕ್ ವಿಭಾಗದ ಪರೀಕ್ಷೆಯಲ್ಲಿ ಕಂಪ್ಯೂಟರ್ ನೆಟವರ್ಕ್(ಎಸ್ ಸಿ ಎನ್ )ಎಂಜಿನಿಯರಿಂಗ್ ವಿಭಾಗದಲ್ಲಿ ಬೀಬೀ ಆಯೇಶಾ ಹುಂಡೇಕಾರ ಚಿನ್ನದ ಪದಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಇದೇ ವಿಭಾಗದಲ್ಲಿ ಪೂಜಾ ಶೇರಖಾನೆ ಮೂರನೇ ಸ್ಥಾನ ಪಡೆದಿದ್ದಾರೆ. ಮಶೀನ್ ಡಿಸೈನ್(ಎಂ ಎಂ ಡಿ) ವಿಭಾಗದಲ್ಲಿ ಶ್ರೀಧರ ಬಾಂಡೆ ದ್ವಿತೀಯ, ರಾಜಶೇಖರ ಸಜ್ಜನ ನಾಲ್ಕನೆಯ ಹಾಗೂ ವೈಷ್ಣವಿ ಘಟ್ಟೆನ್ನವರ 6ನೇ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ಇದೇ ಕಾಲೇಜಿನ ಎಂಟು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದರು.
ಕಾಲೇಜಿನ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಎಸ್. ಎ, ಪುಣೇಕರ, ಕಾರ್ಯದರ್ಶಿ ಎ. ಎಸ್, ಪಾಟೀಲ ಹಾಗೂ ಪ್ರಾಚಾರ್ಯ ಡಾ. ಅಬುಲ್ ಹಸನ ಖಾದ್ರಿ ಅಭಿನಂದಿಸಿದ್ದಾರೆ.