ವಿಜಯಪುರ: ಆರೋಗ್ಯ(Health) ಮತ್ತು ಅಧಿಕಾರಕ್ಕಿಂತ(Power) ಜನಸೇವೆಯೇPublic Service) ಮುಖ್ಯ. ಹೈಕಮಾಂಡ(High Command) ಟಿಕೆಟ್(BJP Ticket) ನೀಡಲಿ, ಬಿಡಲಿ ಪಕ್ಷದ ಪರ ಕೆಲಸ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಮತ್ತು 2018ರಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಗೋಪಾಲ ಕಾರಜೋಳ(Gopal Karjol) ತಿಳಿಸಿದ್ದಾರೆ.
ಎರಡು ವರ್ಷಗಳ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾದಿಂದ ತಾವು ಪುನರ್ಜನ್ಮ ಪಡೆದು ಬಂದಿರುವುದಾಗಿ ತಿಳಿಸಿದರು.
ಎಲ್ಲರಿಗೂ ಗೊತ್ತಿರುವಂತೆ 2020ರಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಹಿರಿಯ ಪುತ್ರ ಗೋಪಾಲ ಕಾರಜೋಳ ಆರೋಗ್ಯದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದರು. ಅಂದಿನಿಂದ ಈವರೆಗೆ ದೈಹಿಕವಾಗಿ ಜನಸಂಪರ್ಕದಿಂದ ದೂರವಿದ್ದ ಗೋಪಾಲ ಕಾರಜೋಳ ಈಗ ಬಹಿರಂಗವಾಗಿ ಜನಸೇವೆಗೆ ಮುಂದಾಗಿದ್ದಾರೆ.
ವಿಜಯಪುರದಲ್ಲಿಬಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಗೊತ್ತಿರುವಂತೆ ಒಂದೂವರೆ ವರ್ಷಗಳ ವರ್ಷಗಳ ಕಾಲ ಜೀವನ್ಮರಣದ ಹೋರಾಟ ನಡೆಸಿ ವಿಜಯಪುರಕ್ಕೆ ಮರಳಿ ಬಂದಿದ್ದೇನೆ. ದೇವರ ಕೃಪೆ ಮತ್ತು ಹಿರಿಯರ ಪುಣ್ಯದಿಂದ ಪುನರ್ಜನ್ಮ ಪಡೆದು ತಮ್ಮೆಲ್ಲರ ಮುಂದೆ ಬಂದಿದ್ದೇನೆ ಎಂದು ತಿಳಿಸಿದರು.
ತಾವು ಅನಾರೋಗ್ಯದಿಂದ ತೊಂದರೆಯಲ್ಲಿದ್ದಾಗ ನಾಗಠಾಣ ಮತಕ್ಷೇತ್ರದ ಜನತೆ ತೋರಿದ ಪ್ರೀತಿ, ಮಾಡಿದ ಪ್ರಾರ್ಥನೆಯಿಂದ ಗುಣಮುಖನಾಗಿ ಬದುಕಿ ಬಂದಿದ್ದೇನೆ. ಕೊರೊನಾ ಸೋಂಕಿತನಾಗಿ ಎರಡೂವರೆ ತಿಂಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಅದನ್ನು ಪ್ರಹ್ಞಾಹೀನ ಅಂತಾರೋ ಅಥಚಾವ ಕೋಮಾ ಎನ್ನುತ್ತಾರೋ ಎಂಬುದು ನನಗೆ ಗೊತ್ತಿಲ್ಲ. ಆ ಎರಡೂವರೆ ತಿಂಗಳ ಅವಧಿಯಲ್ಲಿ ಏನಾಗಿದೆ ಎಂಬುದು ನನಗೆ ಏನೂ ನೆನಪಿಲ್ಲ. ವೈದ್ಯರು ಹೇಳುವಂತೆ, ಅವರು ಮಾತನಾಡಿದರೆ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದೆ. ವೈದ್ಯರು ಹೇಳುವ ಪ್ರಕಾರ ಎರಡು ದೊಡ್ಡ ಶಸ್ತ್ರಚಿಕಿತ್ಸೆ ನಡೆದ ಬಳಿಕ ಜ್ಞಾಪಕ ಶಕ್ತಿ ಮರಳುತ್ತೋ ಅಥವಾ ಇಲ್ಲವೋ ಎಂಬುದು ವೈದ್ಯರಿಗೂ ಸ್ಪಷ್ಟವಿರಲಿಲ್ಲ. ದೇವರ ದಯೆಯಿಂದ ಸ್ಮರಣಶಕ್ತಿ ಮರಳಿದೆ. 36 ದಿನಗಳಿಗಿಂತಲೂ ಹೆಚ್ಚು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ಸ್ಮರಣಶಕ್ತಿ ಇರುವುದಿಲ್ಲ ಎಂಬ ಮಾತು ವೈದ್ಯಕೀಯ ಲೋಕದಲ್ಲಿದೆ. ಆದರೆ, ದೇವರ ದಯೆ, ಜನರ ಆಶೀರ್ವಾದದಿಂದ ಅದನ್ನು ಮೆಟ್ಟಿ ಗುಣಮುಖನಾಗಿ ಬಂದಿದ್ದೇನೆ ಎಂದು ಗೋಪಾಲ ಕಾರಜೋಳ ತಿಳಿಸಿದರು.
ಆರೋಗ್ಯ ಅಧಿಕಾರಕ್ಕಿಂತ ನನಗೆ ಜನಸೇವೆ ಮುಖ್ಯ. ಕೈಲಾದಷ್ಟು ಜನರ ಸೇವೆ ಮಾಡುತ್ತೇನೆ. ಕಳೆದ ಸುಮಾರು ಒಂಬತ್ತು ತಿಂಗಳಿಂದ ದೂರವಾಣಿ ಮೂಲಕವೇ ನಾಗಠಾಣ ಮತಕ್ಷೇತ್ರದ ಜನರ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಬಿಜೆಪಿ ಟಿಕೆಟ್ ವಿಚಾರ
ನಾಗಠಾಣ ಮತಕ್ಷೇತ್ರದಿಂದ ಟಿಕೆಟ್ ಕೊಡುವುದು ಬಿಡುವಯದು ಬಿಜೆಪಿ ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಯಾರಿಗೆ ಕೊಡುತ್ತಾರೆ, ಅವರ ಪರವಾಗಿ ಕೆಲಸ ಮಾಡುತ್ತೇನೆ. ಸದಾ ನಾಗಠಾಣ ಮತಕ್ಷೇತ್ರ ಜನರ ಸೇವೆ ಮಾಡುತ್ತಿರುತ್ತೇನೆ. ಮತಕ್ಷೇತ್ರದ ಜನರಬಪ್ರೀತಿ ಸದಾ ನನ್ನೊಂದಿಗೆ ಇದೆ. ಬಿಜೆಪಿ ಟಿಕೆಟ್ ಕೊಡಲಿ ಬಿಡಲಿ ಸದಾ ನಾಗಠಾಣ ಮತಕ್ಷೇತ್ರದ ಜನತೆಗಗಿ ನನ್ನ ಸೇವೆಯನ್ನು ಮುಡಿಪಾಗಿ ಇಡುತ್ತೇನೆ
ಕಳೆದ ಚುನಾವಣೆಯಲ್ಲಿ 53500 ಜನ ನನಗೆ ಮತ ಹಾಕಿದ್ದಾರೆ. ಅವರ ಋಣವನ್ನು ಎಂದೂ ಮರೆಯಲು, ತೀರಿಸಲು ಸಾಧ್ಯವಿಲ್ಲ. 2018ರಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಹಿದ್ದ ಕಾರಣ ಮತದಾನಕ್ಕೆ ಕೇವಲ 15 ದಿನಗಳಿರುವಾಗ ಕೊನೆ ಘಳಿಗೆಯಲ್ಲಿ ನನಗೆ ಟಿಕೆಟ್ ಸಿಕ್ಕಿತ್ತು. ಹೀಗಾಗಿ ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಲು ಕಷ್ಟವಾಗಿ ಹಿನ್ನಡೆಯಾಗಿದೆ. ಈ ಬಾರಿ ಯಾರಿಗೇ ಟಿಕೆಟ್ ಕೊಡಲಿ. ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಪ್ರಚಾರ ಕೈಗೊಳ್ಳಲು ಮತ್ತು ನಾಗಠಾಣ ಮತಕ್ಷೇತ್ರದ ಜನರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಕಳೆದ ಬಾರಿ ಪಕ್ಷ ನನೆಗೆ ಅವಕಾಶ ನೀಡಿದೆ. ಈ ಬಾರಿ ಟಿಕೆಟ್ ಕೊಡಲಿ ಅಥವಾ ಬಿಡಲಿ. ಜನಸೇವೆ ಮುಂದುವರಿಸುತ್ತೇನೆ. ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಗೋಪಾಲ ಕಾರಜೋಳ ಸ್ಪಷ್ಟಪಡಿಸಿದರು.
ನಾಗಠಾಣ ಮತಕ್ಷೇತ್ರ ಕಡೆಗಣನೆ ಆರೋಪ ನಿರಾಧಾರ
2018ರಲ್ಲಿ ಮತದಾರರು ತಮ್ಮ ಮಗನ ಸೋಲಿಸಿದ ಹಿನ್ನೆಲೆಯಲ್ಲಿ ನಾಗಠಾಣ ಮತಕ್ಷೇತ್ರಕ್ಕೆ ಸಚಿವ ಗೋವಿಂದ ಕಾರಜೋಳ ಅನುದಾನ ಸಿಗದಂತೆ ಮಾಡುತ್ತಿದ್ದಾರೆ ಎಂದು ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಆರೋಪ ನಿರಾಧಾರ. ಆರೋಪ ಮಾಡುವವರು ಆಧಾರ ಸಮೇತ ಹೇಳಲಿ. ಮುಂದಿನ ಬಾರಿ ನಾನು ದಾಖಲಾತಿಗಳೊಂದಿಗೆ ಬರುತ್ತೇನೆ. ಅವರೂ ಬರಲಿ. ರಾಜ್ಯ ಸರಕಾರದಿಂದ ನಾಗಠಾಣ ಮತಕ್ಷೇತ್ರಕ್ಕೆ ಎಷ್ಟೆಲ್ಲ ಅನುದಾನ ಬಿಡುಗಡೆಯಾಗಿದೆ ಎಂಬುದನ್ನು ನಾನು ತೋರಿಸುತ್ತೇನೆ. ಜನಪ್ರತಿನಿಧಿಯಾದವರು ಹೋರಾಟ ಮಾಡಿ ಸರಕಾರದಿಂದ ಅನುದಾನ ತರಬೇಕು ಎಂದು ಅವರು ಸವಾಲು ಹಾಕಿದರು.
ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆ
ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಂಬಂಧಿಸಿದಂತೆ ನಾಗಠಾಣ ಮತ್ತು ಇಂಡಿ ಮತಕ್ಷೇತ್ರಗಳ ಜನರು ನೀರಾವರಿ ಸಚಿವರನ್ನು ಭೇಟಿಯಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ಕುರಿತು ಅನುದಾನ ಬಿಡುಗಡೆಯಾಗಿದೆ. ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ಅವರು ಅವರು ತಿಳಿಸಿದರು.
ಇನ್ನು ಮುಂದೆ ವಿಜಯಪುರದಲ್ಲಿ ಇರುವೆ
ಇನ್ಮುಂದೆ ವಿಜಯಪುರದಲ್ಲಿ ಇರುತ್ತೇನೆ. ಜನಸಂಪರ್ಕದಲ್ಲಿ ನಿರತನಾಗಿ ಇರುತ್ತೇನೆ. ಅನಾರೋಗ್ಯದ ನಡುವೆಯೂ ಕಳೆದ ಒಂಬತ್ತು ತಿಂಗಳಿಂದ ಮೊಬೈಲ್ ಮೂಲಕ ಜನರ ಸಂಪರ್ಕದಲ್ಲಿದ್ದೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂದು ಗೋಪಾಲ ಕಾರಜೊಳ ಸ್ಪಷ್ಡಪಡಿಸಿದರು.
ಈ ಸಂದರ್ಭದಲ್ಲಿ ಉಮೇಶ ಕಾರಜೋಲ, ವಿನೋದ ಮಣೂರ, ಕುಮಾರ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.