ಮೊಸರ ನಾಡಿನಲ್ಲಿ ಹೋಳಿ ಆಚರಣೆಯಲ್ಲಿ ಬಣ್ಣದಲ್ಲಿ ಮಿಂದೆದ್ದು ಕುಣಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ

ವಿಜಯಪುರ: ಜನರ ಮನಸ್ಸನ್ನು ರಂಗು ರಂಗೀನವಾಗಿಸುವ ಹಬ್ಬ ಹೋಳಿ ಹುಣ್ಣಿಮೆ.  ಈ ಹುಣ್ಣಿಮೆಯಾದ ಎರಡು ದಿನಗಳ ನಂತರ ಬಸವ ನಾಡು ವಿಜಯಪುರ ಜಿಲ್ಲೆಯ ಮೊಸರ ನಾಡು ಕೊಲ್ಹಾರದಲ್ಲಿ ಈ ಬಾರಿ ನಡೆದ ಬಣ್ಣದಾಟ ಗಮನ ಸೆಳೆಯಿತು.

ಆಲಮಟ್ಟಿ ಜಲಾಷಯ ನಿರ್ಮಾಣದಿಂದ ಮುಳುಗಡೆಯಾಗಿರುವ ಹಳೆಯ ಕೊಲ್ಹಾರದಲ್ಲಿ ಈ ಹಿಂದೆ ಪರಂಪರಾಗತವಾಗಿ ಯಾವುದೇ ಭೇದ ಭಾವವಿಲ್ಲದೇ ಎಲ್ಲರೂ ಕೂಡಿಕೊಂಡು ಸಂಭ್ರಮದಿಂದ ಹೋಳಿ ಹಬ್ಬದ ಬಣ್ಣದಾಟ ಆಡುತ್ತಿದ್ದರು.  ಆದರೆ, ಕಳೆದ ಹಲವು ವರ್ಷಗಳಿಂದ ಸಾಮೂಹಿಕವಾಗಿ ನಡೆಯುವ ಈ ಆಚರಣೆಗೆ ಮರೆಯಾಗಿತ್ತು.

ಮೊಸರ ನಾಡು ಕೊಲ್ಹಾರದಲ್ಲಿ ನಡೆದ ಹೋಳಿ ಹಬ್ಬದ ಬಣ್ಣದಾಟದಲ್ಲಿ ಪಾಲ್ಗೋಂಡ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ

ಈ ಬಾರಿ ಕೊಲ್ಹಾರ ಪಟ್ಟಣದಲ್ಲಿ ನಡೆದ ಕಲರಫುಲ್ ಹೋಳಿ ಹಬ್ಬದಾಚರಣೆಗೆಯಲ್ಲಿ ಮಕ್ಕಳು, ಯುವಕರು, ಹಿರಿಯರೆನ್ನದೇ ಎಲ್ಲ ವಯೋಮಾನದವರು ಪಾಲ್ಗೋಂಡರು.  ಕಿವಿ ಗಡಚಿಕ್ಕುವ ಡಿಜೆ ಶಬ್ದದಲ್ಲಿ ಸಂಗೀತ ಹೊರ ಹೊಮ್ಮುತ್ತಿದ್ದರೆ, ಈ ಸಂಗೀತಕ್ಕೆ ಯುವ ಸಮೂಹ ಹೆಜ್ಜೆ ಹಾಕುತ್ತಿದ್ದರು.  ಎಲ್ಲರ ಬಟ್ಟೆ, ಮುಖ, ಕೈ ಕಾಲುಗಳು ಬಣ್ಣಮಯವಾಗಿದ್ದು, ಎಲ್ಲೆಡೆ ಬಣ್ಣದ ವಾತಾವರಣ ಉಂಟಾಗಿತ್ತು.

ಬಹುವರ್ಷಗಳ ನಂತರ ನಡೆಯುತ್ತಿದ್ದ ಈ ಬೃಹತ್ ಹೋಳಿ ಆಚರಣೆಗೆ ಪಾಲ್ಗೋಳ್ಳಲು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಬೈಕಿನಲ್ಲಿ ಆಗಮಿಸಿ ಗಮನ ಸೆಳೆದರು.  ಇವರು ಬಣ್ಣದಾಟದ ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಯುವಕರು ತಮ್ಮ ಹೆಗಲ ಮೇಲೆ ಎತ್ತಿಕೊಂಡು ಕುಣಿದಾಡಿದರು.  ಮಾಜಿ ಸಚಿವರೂ ಕೂಡ ಯುವಕರ ಹೆಗಲ ಮೇಲೆ ಕುಳಿತು ಕೈ ಅಲುಗಾಡಿಸುತ್ತ ಆನಂದಿಸಿದರು.  ನಂತರ ಅವರನ್ನು ಹೊತ್ತುಕೊಂಡು ವೇದಿಕೆಗೆ ಕರೆ ತಂದಾಗ ಅಲ್ಲಿ ಮುಂಚೆಯೇ ನೆರೆದಿದ್ದ ಯುವಕರು ಸಂಗಣ್ಣ ಕೆ. ಬೆಳ್ಳುಬ್ಬಿ ಅವರ ತಲೆಯಿಂದ ಪಾದದ ವರೆಗೂ ಬಣ್ಣ ಹಾಕುವ ಮೂಲಕ ಖುಷಿ ಪಟ್ಟರು.  ಈ ಸಂದರ್ಭದಲ್ಲಿ ಮಾಜಿ ಸಚಿವರೂ ಕೂಡ ಫುಲ್ ಖುಷ್ ಆಗಿ ಡ್ಯಾನ್ಸ್ ಮಾಡಿದರು.

 

 

ಬಳಿಕ ಮಾತನಾಡಿದ ಅವರು, ಹೋಳಿ ಹಬ್ಬದ ಬಣ್ಣದಾಚರಣೆಗೆ ಜೈ, ಬಣ್ಣದಾಟಕ್ಕೆ ಜೈ,  ರಂಗೀನ ಓಕುಳಿಗೆ ಜೈ ಎಂದು ಘೋಷಣೆ ಹಾಕಿದರು.  ಕೊಲ್ಹಾರ ಪಟ್ಟಣದಲ್ಲಿ ಹೊಸ ಅಲೆ ಶುರುವಾಗಿದೆ.  ಹಿರಿಯರು ಯುವಕರು ಸೇರಿ ಪರಸ್ಪರ ಬಣ್ಮ ಹಚ್ಚಿ ಸಂಭ್ರಮಿಸಿದ್ದಾರೆ.  ಇದು ನಮ್ಮ ದೇಶದ ಪರಂಪರೆ, ಹೋಳಿ ಹಬ್ಬ.  ಹಿಂದೂಸ್ತಾನದ ಪರಂಪರೆ,  ರತಿ ಮನ್ಮಥರನ್ನು ದಹನ ಮಾಡಿ ಕಾಮಣ್ಣನ ದಹನ ಮಾಡಿ ಮರುದಿನ ಮತ್ತು ರಂಗಪಂಚಮಿ ದೇಶಾದ್ಯಂತ ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯುವ ಹಬ್ಬ ಇದಾಗಿದೆ ಎಂದು ಹೇಳಿದರು.

ಅಲ್ಲದೇ, ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ ಅವರು, ಹಳೆಯ ಕೊಲ್ಹಾರದಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಊರು ಮುಳುಗಡೆಗೂ ಮುನ್ನು ರೀತಿ ಹಬ್ಬ ಆಚರಿಸಲಾಗುತ್ತಿತ್ತು.  ಕೆಲವು ಅನಿರೀಕ್ಷಿತ ಘಟನೆಗಳಿಂಗ ಆ ಆಚರಣೆ ಬಂದ್ ಆಗಿತ್ತು.  ಎಲ್ಲರೂ ಭೇದಭಾವ ಮರೆತು ಬೆರೆಯುವುದು ಮರೆಯಾಗಿತ್ತು.  ಈಗ ಮತ್ತೆ ದ್ಯಾಮವ್ವ ದೇವಿ, ಯಲ್ಲಮ್ಮ ದೇವಿಯ ಆಶೀರ್ವಾದದಿಂದ ಹಳೆಯ ಊರಿನ ಗ್ರಾಮ ದೇವತೆ ಆಶೀರ್ವಾದದಿಂದ ಹಳೆಯ ಗ್ರಾಮದಲ್ಲಿದ್ದ ಆಚರಣೆಯಲಿದ್ದ ವೈಭವವನ್ನು ಈಗ ಮರುಜೀವ ನೀಡಲಾಗಿದೆ.  ಇದಕ್ಕೆ ಎಲ್ಲರಿಗೂ ಧನ್ಯವಾದಗಳು.  ಈ ಹಬ್ಬ ಎಲ್ಲರೂ ಕೂಡಿಕೊಂಡು ಮಾಡುವ ಹಬ್ಬ.  ಶಾಂತಿಯಿಂದ, ಖುಷಿಯಿಂದ ಮಾಡುವ ಹಬ್ಬ.  ಮುಂದಿನ ದಿನಗಳಲ್ಲಿಯೂ ಇದೇ ರೀತಿ ಪ್ರೀತಿ ವಿಶ್ವಾಸದಿಂದ ನಡೆಯಲಿ.  ನಾನೂ ಕೂಡ ಈ ಹಬ್ಬದಲ್ಲಿ ಭಾಗವಹಿಸಿ ಸಂತಸ ಪಟ್ಟಿದ್ದೇನೆ.  ಬಹಳ ದಿನಗಳ ನಂತರ ಬಣ್ಣ ಆಡಿದ್ದಿಲ್ಲ.  ಯಾರೂ ಬಣ್ಣ ಹಚ್ಚಿಕೊಂಡಿರಲ್ಲ.  ಮೈತುಂಬ ಬಣ್ಣ ಹಚ್ಚಿಕೊಂಡು ಮನಸ್ಸಿನ ತುಂಬ ಖುಷಿ ಪಟ್ಟಿದ್ದೇವೆ.  ಮನಸ್ಸಿನಲ್ಲಿಯೂ ಎಲ್ಲ ರೀತಿಯ ಬಣ್ಣಗಳು ಕೂಡಿವೆ.  ಮನಸ್ಸು ಕೂಡ ಕಲರ್‌ಫುಲ್ ಆಗಿವೆ.  ಜೀವನ ಎಂದರೆ ಕೇವಲ ಬಟ್ಟೆ ಮಾತ್ರವಲ್ಲ ಮನಸ್ಸು ಕೂಡ ಬಣ್ಣದಿಂದ ಕೂಡಿರಬೇಕು.  ಯಾವತ್ತೂ ಏನೇ ಬರಲಿ, ಕಷ್ಟ, ಸುಖ ಬರಲಿ.  ಏನೇ ಬಂದರೂ ಬಣ್ಣ ಹಚ್ಚಿಕೊಂಡು ಕುಣಿದಾಡುವ ವಾರ್ಷಿಕ ಹಬ್ಬದಂದು ನೋವು ನಲಿವುಗಳನ್ನು ಸಹಿಸಿಕೊಂಡು ಹಬ್ಬದ ಖುಷಿ ನಿತ್ಯ ಜೀವನದಲ್ಲಿ ಕಲರ್ ಫುಲ್ ಆಗಿರಬೇಕು.  ಬಣ್ಣ ನೋಡಿದರೆ ಖುಷಿಯಾಗುತ್ತದೆ ಎಂದು ಹೇಳಿದರು.

ಒಟ್ಟಾರೆ, ಕೊಲ್ಹಾರ ಪಟ್ಟಣದಲ್ಲಿ ನಡೆದ ಹೋಳಿ ಹುಣ್ಣಿಮೆ ಬಣ್ಣದಾಟ ಅಲ್ಲಿ ನೆರದವರ ಬಟ್ಟೆಗಳನ್ನು ಮಾತ್ರವಲ್ಲ ಮನಗಳನ್ನೂ ಕಲರಫುಲ್ ಆಗಿಸಿದ್ದಂತೂ ಸುಳ್ಳಲ್ಲ.

Leave a Reply

ಹೊಸ ಪೋಸ್ಟ್‌