ಪಾರಂಪರಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ನಾನಾ ಪ್ರಾಚೀನ ಸ್ಮಾರಕಗಳಿಗೆ ಭೇಟಿ ನೀಡಿದ ಡಿಸಿ, ಪಿ ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲಾಡಳಿತ(Vijayapura District Administration) ಮತ್ತು ಪ್ರವಾಸೋದ್ಯಮ ಇಲಾಖೆ(Tourism Department) ಸಹಭಾಗಿತ್ವದಲ್ಲಿ(Collaboration) ಹೆರಿಟೆಜ್ ವಾಕ್ (ಪಾರಂಪರಿಕ ನಡಿಗೆ)(Heritage Walk) ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ(Deputy Commissioner) ಪಿ ಸುನೀಲ ಕುಮಾರ(P Sunil Kumar) ಮತ್ತು ಜಿ. ಪಂ. ಸಿಇಓ ರಾಹುಲ್ ಶಿಂದೆ ವಿಜಯಪುರ ನಗರದ ನಾನಾ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿದರು.

ವಿಜಯಪುರ ಹೊರ ವಲಯದ ತೊರವಿ ಬಳಿ ಇರುವ ಸಂಗೀತ ಮಹಲ್ ಗೆ ಭೇಟಿ ನೀಡಿದ ಡಿಸಿ, ಜಿ. ಪಂ. ಸಿಇಓ

ಮೊದಲಿಗೆ ತೊರವಿ ಬಳಿ ಇರುವ ಸಂಗೀತ ಮಹಲ್ ಗೆ ಭೇಟಿ ನೀಡಿದ ಅವರು ಪ್ರಾಚೀನ ಸ್ಮಾರಕ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.  ನಂತರ  ನಾರಿಮಹಲ್ , ನವರಸಪುರ ಮತ್ತು ಕೋಡೆ ಗೋಡೆಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿ. ಸುನೀಲ ಕುಮಾರ, ವಿಜಯಪುರವು ಒಂದು ಐತಿಹಾಸಿಕ ನಗರವಾಗಿದ್ದು, ಇಲ್ಲಿನ ನಾನಾ ಜಗತ್ಪ್ರಸಿದ್ಧ ಸ್ಮಾರಕಗಳ ಸಂರಕ್ಷಣೆಗೆ ಅವಶ್ಯಕ ಗಮನ ನೀಡಲಾಗುವುದು.  ಇದಕ್ಕಾಗಿ ಸರಕಾರದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೇ, ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸ್ಮಾರಕಗಳ  ವಿಶೇಷತೆ, ಇತಿಹಾಸ ಹಾಗೂ ಮಹತ್ವದ ಬಗ್ಗೆ  ಮಹಿಳಾ ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ಆನಂದ ಕುಲಕರ್ಣಿ, ಪ್ರಾದ್ಯಾಪಕ ಎಂ  ಎ, ಇನಾಮದಾರ ಮತ್ತು ಸಮಾಜ ಸೇವಕ ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ್ ಮಾಹಿತಿ ನೀಡಿದರು.

ವಿಜಯಪುರ ತಹಸೀಲ್ದಾರ ಸಿದ್ದರಾಯ ಭೋಸಗಿ,  ಸಿ. ರಾಜಶೇಖರ ಡಂಬಳ, ಬೋರಣ್ಣವರ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಇಲಾಖೆಯ ಡಿಟಿಸಿ  ಅನಿಲಕುಮಾರ ಬಣಜಿಗೇರ, ಜಗದೇವ ಗುಣಕಿ, ಇಗ್ನೋ ಪ್ರಾದೇಶಿಕ ನಿರ್ದೇಶಕ ವರದರಾಜನ, ಕೆ ಎಸ್ ಟಿ ಡಿ ಸಿ ವ್ಯವಸ್ಥಾಪಕ ಸುನಿಲಕುಮಾರ, ಹೆರಿಟೆಜ್ ಫೌಂಡೇಶನ್ ತಂಡ ಮತ್ತು ಡಿಎಸ್‌ಎಸ್ ಮುಖಂಡ ಅಡಿವೆಪ್ಪ ಸಾಲಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌