ವಿಜಯಪುರ: ಕರ್ನಾಟಕ(Karnataka) ರಾಜ್ಯ(State) ಅಕ್ಕಮಹಾದೇವಿ(Akkamahadevi) ಮಹಿಳಾ(Women) ವಿಶ್ವವಿದ್ಯಾಲಯ(University) ಮಾರ್ಚ್ 7 ರಿಂದ 10ರ ವರೆಗೆ ನಡೆಸಿದ ಬಿ. ಎಡ್. ನಾಲ್ಕನೆ ಸೆಮಿಸ್ಟರ್(B. ED Fourth Semister) ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಪರೀಕ್ಷೆಗಳು ನಡೆದು 10 ದಿನಗಳೊಳಗೆ ಮೌಲ್ಯಮಾಪನ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಫಲಿತಾಂಶವು ರಾಜ್ಯ ಸರಕಾರದ ಶಿಕ್ಷಕರ ನೇಮಕಾತಿ ಬಯಸುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ತುಂಬಾ ಅನುಕೂಲವಾಗಲಿದೆÉ. ಇದೊಂದು ಐತಿಹಾಸಿಕ ಫಲಿತಾಂಶವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮತ್ತು ಕುಲಸಚಿವ ಎಂ.ಎನ್.ಚೋರಗಸ್ತಿ ಅವರ ಮಾರ್ಗದರ್ಶನದಲ್ಲಿ ಈ ಮೌಲ್ಯಮಾಪನ ಕಾರ್ಯ ನಡೆಸಲಾಗಿತ್ತು. ಮೌಲ್ಯಮಾಪನ ಕಾರ್ಯದಲ್ಲಿ ಅವಿರತವಾಗಿ ದುಡಿದ ಬಿ. ಎಡ್. ಬಿಓಇ ಚೇರಮನ್ ಡಾ. ವಿಷ್ಣು ಶಿಂದೆ ಮತ್ತು ಮೌಲ್ಯಮಾಪನ ಉಪಕುಲಸಚಿವ ಡಾ. ಎ. ಬಿ. ಸುರಪುರ ಮತ್ತು ಪರೀಕ್ಷಾಂಗ ವಿಭಾಗಗಳ ಸಿಬ್ಬಂದಿಯನ್ನು ಪ್ರೊ. ರಮೇಶ ಕೆ. ಅವರು ಅಭಿನಂದಿಸಿದ್ದಾರೆ.