ಖಾಲಿಯಿರುವ ಆಂಗ್ಲಭಾಷೆ ಶಿಕ್ಷಕರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ

ವಿಜಯಪುರ: ರಾಜ್ಯದ(State) ನಾನಾ ಜಿಲ್ಲೆಗಳಲ್ಲಿ(Various Districts) ಖಾಲಿ ಇರುವ(Vacant) ಆಂಗ್ಲಭಾಷೆ(English) ಶಿಕ್ಷಕರ(Teachers) ಹುದ್ದೆಗಳನ್ನು(Posts) ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ವಿಜಯಪುರದಲ್ಲಿ ನಿರುದ್ಯೋಗ ಯುವಜನ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಜಯಪುರ ನಗರದ ಜೋಡಗುಮ್ಮಟದಿಂದ ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ  ಬೃಹತ್ ಪ್ರತಿಭಟನಾ ಜಾಥಾ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಡಿಡಿಪಿಐ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.

ಆಂಗ್ಲಭಾಷೆ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ನಿರುದ್ಯೋಗ ಯುವಜನ ಹೋರಾಟ ಸಮಿತಿ ಜಾಥಾ ನಡೆಸಿತು

ಈ ಸಂದರ್ಭದಲ್ಲಿ ಮಾತನಾಡಿದ ನಿರುದ್ಯೋಗ ಯುವ ಜನ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಉದ್ಯೋಗಾಕಾಂಕ್ಷಿಗಳಾದ ಶಿವರಾಜ ನಾಗರಳ್ಳಿ, ಶ್ರವಣಕುಮಾರ, ಪಲ್ಲವಿ ಕೊಡೇಕಲಠ, ಅರ್ಚನಾ, ವೀರಮ್ಮ, ಚಿನ್ನುಸ್ವಾಮಿ, ಅಭಿಲಾಷ, ರಮೇಶ ಹೆಗಡೆ, ದಶವಂತ, ಉಮೇಶ ಮುಂತಾದವರು, ರಾಜ್ಯ ಸರಕಾರವು 15000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಆದರೆ, ಈ ಅಧಿಸೂಚನೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಕೇವಲ 1500 ಹುದ್ದೆಗಳನ್ನು ನೀಡಿರುವುದು ಅಮಾನವೀಯ ಮತ್ತು ಅನ್ಯಾಯ ಮಾಡಿದಂತಾಗಿದೆ.  ಸರಕಾರದ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ 58 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ.  ಆದರೆ ಸರಕಾರ ಕೇವಲ 15000 ಹುದ್ದೆಗಳನ್ನು ಭರ್ತಿ ಮಾಡುವುದು ನಾಚಿಕೆಗೇಡಿತನ.  ಅದರಲ್ಲೂ 10 ಸಾವಿರಕ್ಕೂ ಹೆಚ್ಚು ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳು ಖಾಲಿ ಇವೆ.  ಸರಕಾರ ಕೇವಲ 1500 ಆಂಗ್ಲಭಾಷೆ ಶಿಕ್ಷಕರನ್ನು ಭರ್ತಿಗೆ ಮುಂದಾಗಿರುವುದು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿಂತಾಗಿದೆ ಎಂದು ಆರೋಪಿಸಿದರು.  ಈ ಕೂಡಲೇ ಸರಕಾರ ಮಧ್ಯಸ್ಥಿಕೆ ವಹಿಸಿ ಖಾಲಿ ಇರುವ ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು.  ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನಾ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಶ್ರೀಕಾಂತ, ಸುಹಾಸಿನಿ, ಶಿಲ್ಪಾ, ವೀರಮ್ಮ, ಸಂಗಮ್ಮ, ಹೇಮಾ, ಅನಿತಾ, ಆಶಾ, ಉಮೇಶ, ರತ್ನಾ, ಪವಿತ್ರಾ, ವಿಠ್ಠಲ, ಶಿವರಾಜ, ಶಿವು ಮುಂತಾದವರು ಭಾಗವಹಿಸಿದ್ದರು.

 

Leave a Reply

ಹೊಸ ಪೋಸ್ಟ್‌