ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆದಾರರು ಪರವಾಣಿಗೆ ಪಡೆಯುವುದು ಕಡ್ಡಾಯ- ಪೌರಾಯುಕ್ತ ವಿಜಯ ಮೆಕ್ಕಳಕಿ

ವಿಜಯಪುರ: ಮಹಾನಗರ ಪಾಲಿಕೆಯ(Corporation) ವ್ಯಾಪ್ತಿಯಲ್ಲಿಯ(Limits) ಎಲ್ಲ ಉದ್ದಿಮೆದಾರರು(Businessmen) ಕರ್ನಾಟಕ(Karnataka) ಕಾರ್ಪೋರೇಷನ್ ಅಧಿನಿಯಮ-1976ರ ಸೆಕ್ಷನ್ 353ರ ಪ್ರಕಾರ ಉದ್ದಿಮೆ(Industry) ಪರವಾನಿಗೆಯನ್ನು(Licence) ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತರು ಇತರ ಸಿಬ್ಬಂದಿಯೊಂದಿಗೆ ಲಾಲ್ ಬಹಾದ್ದೂರ ಶಾಸ್ತ್ರಿ ಮಾರ್ಕೆಟ್ ಗೆ ಭೇಟಿ ನೀಡಿದರು

ಪೌರಾಯುಕ್ತರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯಾದ ಎಸ್. ಎಸ್. ಸುರ್ಕಿ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್(ಪರಿಸರ) ಅಶೋಕಕುಮಾರ ಮತ್ತು ಇತರ ಅಧಿಕಾರಿಗಳೊಂದಿಗೆ ವಿಜಯಪುರ ನಗರದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂರ್ಕೀಣದಲ್ಲಿರುವ 150 ಮಳಿಗೆಗಳಿಗೆ ಭೇಟಿ ನೀಡಿ, ಉದ್ದಿಮೆ ಪರವಾನಿಗೆ ಕುರಿತು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಉದ್ದಿಮೆ ಪರವಾನಿಗೆ ಪಡೆಯದ ಸುಮಾರು 15 ಮಳಿಗೆಗಳಿಗೆ ಬೀಗಮುದ್ರೆ ಹಾಕಿದರು.  ವಾಣಿಜ್ಯ ಸಂಕೀರ್ಣದಲ್ಲಿ ತಮಗೆ ನಿಗದಿ ಪಡಿಸಿದ ಮಳಿಗೆಗಳ ಅತೀಕ್ರಮಣ ಮಾಡದಂತೆ ಸೂಚಿಸಿ ಅತೀಕ್ರಮಣ ಮಾಡಿದ 6 ಅಂಗಡಿಗಳಿಗೆ ಸುಮಾರು ರೂ. 38 000 ದಂಡವನ್ನು ವಿಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರ್ಚ ಮಾಸಾಂತ್ಯದೊಳಗೆ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆಯಬೇಕು.  ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆದಾರರು ಪರವಾನಗೆ ಪಡೆಯಿದ್ದರೆ ಸೂಕ್ತ ದಂಡ ವಿಧಿಸುವುದು ಸೇರಿದಂತೆ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

One Response

Leave a Reply

ಹೊಸ ಪೋಸ್ಟ್‌