ಬಸವ ನಾಡಿನಲ್ಲಿ ಭೂಕಂಪ ಪ್ರಕರಣ- ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು- ಕೇಂದ್ರ ಬಿಂದು ಎಲ್ಲಿ? ಎಷ್ಟು ಆಳದಲ್ಲಿ ಗೊತ್ತಾ?

ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ( ಭೂಮಿ ಕಂಪಿಸಿದ(Earthquake) ಅನುಭವವಾಗಿದೆಈ ಭೂಕಂಪದ ತೀವ್ರತೆ ಮತ್ತು ಕೇಂದ್ರ ಬಿಂದು ರಾಜ್ಯ ವಿಪತ್ತು ನಿರ್ವಹಣೆ ಕೇಂದ್ರದಲ್ಲಿ(Epicentre) ದಾಖಲಾಗಿದೆ.

 ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.  ಈ ಭೂಕಂಪದ ಕೇಂದ್ರ ಬಿಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶ್ಚಿಮೋತ್ತರ ಭಾಗದಲ್ಲಿ ಪತ್ತೆಯಾಗಿದೆ.  ಭೂಮಿಯಿಂದ ಸುಮಾರು 10 ಕಿ. ಮೀ. ಆಳದಲ್ಲಿ ಈ ಭೂಕಂಪನ ಸಂಭವಿಸಿದೆ.

ಇದು ಲಘು ಭೂಕಂಪವಾಗಿದ್ದು, ಕೇಂದ್ರ ಬಿಂದುವಿನಿಂದ ಏಳು ಕಿ. ಮೀ. ವ್ಯಾಪ್ತಿಯಲ್ಲಿ ಅನುಭವಕ್ಕೆ ಬರುತ್ತದೆ.  ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಂಗಳೂರಿನಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.

ಇದನ್ನು ಓದಿ:

ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಜನರಲ್ಲಿ ತಳಮಳ

 

ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಾನಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು.  ಆದರೆ, ಇದು ಭೂಕಂಪವೋ ಅಥವಾ ಇನ್ನಾವುದೇ ಘಟನೆ ಸಂಭವಿಸಿದೆಯೋ ಎಂಬ ಆತಂಕದಲ್ಲಿ ಜನರಿದ್ದರು.  ಈಗ ಇದು ಲಘು ಭೂಕಂಪ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

 

 

Leave a Reply

ಹೊಸ ಪೋಸ್ಟ್‌