ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ(Tikota) ಪಟ್ಟಣದಲ್ಲಿ(Town) ರೂ. 62 ಲಕ್ಷ ರೂ. ವೆಚ್ಚದ 12 ನಾನಾ ಅಭಿವೃದ್ಧಿ(Development) ಕಾಮಗಾರಿಗಳಿಗೆ(Works) ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ(Member of Legislative Council) ಸುನೀಲಗೌಡ ಪಾಟೀಲ(Sunilgouda Patil) ಮಾ. 25 ರಂದು ಶುಕ್ರಚಾರ ಬೆ. 9ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ತಿಕೋಟಾ ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ಈ ಕಾರ್ಯಕ್ರಮ ನಡೆಯಲಿದೆ. ವಾರ್ಡ್ ನಂ. 3ರಲ್ಲಿ ತಾ.ಪಂ. ಕಾರ್ಯಾಲಯಕ್ಕೆ ಮಳೆನೀರು ಸುಗ್ಗಿ ನಿರ್ಮಾಣ, ನಾನಾ ವಾರ್ಡುಗಳಲ್ಲಿ ಮೋಟಾರ ಖರೀದಿಸಿ ಪೈಪಲೈನ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಅದೇ ರೀತಿ ವಾ. ನಂ.5ರಲ್ಲಿ ಮೋಟಾರ ಖರೀದಿಸಿ ಕುಡಿಯುವ ನೀರಿನ ಪೈಪಲೈನ ಅಳವಡಿಕೆ, ವಾ. ನಂ. 2 ಮತ್ತು 5 ರಲ್ಲಿ ವಿಠೋಬಾ ಗುಡಿ ಬಳಿ ಮತ್ತು ಬ್ರಾಹ್ಮಣರ ಓಣಿಯಲ್ಲಿ ಕುಡಿಯುವ ನೀರಿನ ಪೈಪಲೈನ ಅಳವಡಿಕೆ, ಪಟ್ಟಣದ ಘನತ್ಯಾಜ್ಯ ವಿಲೇವಾರಿಗಾಗಿ 50 ಎಚ್.ಪಿ. ಟ್ಯಾಕ್ಟರ್ ಮತ್ತು ಟ್ರೇಲರ್ ಖರೀದಿಸುವುದು. ನಾಲ್ಕು ಚಕ್ರದ ಆಟೋ ಟಿಪ್ಪರ ಖರೀದಿಸುವುದು. ವಾ. ನಂ. 2ರಲ್ಲಿ ವಿರಕ್ತಮಠದ ಹತ್ತಿರ ಮೋಟಾರ ಖರೀದಿಸಿ ಕುಡಿಯುವ ನೀರಿನ ಪೈಪಲೈನ ಅಳವಡಿಕೆ, ಪಟ್ಟಣದ ಘನತ್ಯಾಜ ವಿಲೇವಾರಿಗೆ 3 ಚಕ್ರದ ಆಟೋ ಟಿಪ್ಪರ್ ಖರೀದಿಸುವುದು, ಪೌರಕಾರ್ಮಿಕರ ಸುರಕ್ಷಾ ಪರೀಕರಗಳು ಮತ್ತು ಸಾಧನ ಸಾಮಗ್ರಿ ಖರೀದಿಸುವುದು, ತಹಸೀಲ್ದಾರ ಕಛೇರಿಯಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಿಸುವುದು, ಪಟ್ಟಣದ ನಾನಾ ವಾರ್ಡುಗಳಲ್ಲಿ ಎಸ್. ವಿ. ಹಾಗೂ ಎಲ್. ಇ. ಡಿ. ವಿದ್ಯುತ್ ದೀಪಗಳನ್ನು ಅಳವಡಿಸುವುದು ಹಾಗೂ ಶಿವಾಜಿ ವೃತ್ತ, ಲಕ್ಷ್ಮೀ ಗುಡಿ ಹತ್ತಿರ ಹಾಗೂ ಅಂಬೇಡ್ಕರ ವೃತ್ತದಲ್ಲಿ ಹೈಮಾಸ್ಕ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿಗಳಿಗೆ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಲ್ಲಿದ್ದಾರೆ.