ಬೆಂಗಳೂರು: ರಾಷ್ಟ್ರೀಯ(National) ಬಸವ ಸೈನ್ಯದ(Basavasainya) ಸಂಸ್ಥಾಪಕ(Founder) ಅಧ್ಯಕ್ಷ(President) ಶಂಕರಗೌಡ ಎಸ್. ಬಿರಾದಾರ(Shankargouda S Biradar) ಬೆಂಗಳೂರಿನಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ(Prakash Rathod) ಅವರನ್ನು ಭೇಟಿ ಮಾಡಿ ಕೃತೃಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ತಿನಲ್ಲಿ ಬುಧವಾರ ಪ್ರಕಾಶ ರಾಠೋಡ ಅವರು ಶೂನ್ಯವೇಳೆಯಲ್ಲಿ ಮಾತನಾಡಿ, ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಗ್ರಹಿಸಿದ್ದರು. ಆಗ ಉತ್ತರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲಕುಮಾರ, ವಿಜಯಪುರ ಜಿಲ್ಲಾಡಳಿತ ಪ್ರಸ್ತಾವನೆ ಕಳುಹಿಸಿದರೆ ಪರಿಶೀಲಿಸುವುದಾಗಿ ಉತ್ತರಿಸಿದ್ದರು.
ಇದಕ್ಕೂ ಮುನ್ನ ನ್ಯಾಯವಾದಿ ರವಿ. ರಾಠೋಡ್ ಹಾಗೂ ಮಹಾರಾಷ್ಟ್ರ ರಾಜ್ಯ ರಾಷ್ಟ್ರೀಯ ಬಸವ ಸೈನ್ಯದ ಅಧ್ಯಕ್ಷರಾದ ರಾಮ ನಾಯಕ ಅವರ ಜೊತೆ ಸೇರಿ ಶಂಕರಗೌಡ ಎಸ್. ಬಿರಾದಾರ ಪ್ರಕಾಶ ರಾಠೋಡ ಅವರನ್ನು ಭೇಟಿ ಮಾಡಿ ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಜಯಂತಿ ಆಚರಿಸಲು ಒತ್ತಾಯಿಸಬೇಕು ಎೞದು ಮನವಿ ಮಾಡಿದ್ದರು. ತಮ್ಮ ಮನವಿಗೆ ಪ್ರಕಾಶ ರಾಠೋಡ ಸ್ಪಂದಿಸಿದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.