ವಿಜಯಪುರ: ಶ್ರೀಹಲಗಣೇಶ ಪ್ರಕಾಶನದ ಹೆಮ್ಮೆಯ ಪ್ರಕಟಣೆ ಶ್ರೀಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ನಗರದಲ್ಲಿ ಮಾರ್ಚ್ 27ರಂದು ನಡೆಯಲಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಮತ್ತು ಪಂಚಾಂಗಕರ್ತ ಗುರುರಾಜ ಆಚಾರ್ಯ ಹೆರಕಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಂದು ರವಿವಾರ ಬೆ. 10ಕ್ಕೆ ವಿಜಯಪುರ ನಗರದ ಪಿಡಿಜೆ ಹೈಸ್ಕೂಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪಾಂಡುರಂಗ ಆಚಾರ್ಯ ಜಾಲಿಹಾಳ, ಮಧ್ವಾಚಾರ್ಯ ಮೊಕಾಶಿ, ಭೀಮಾಚಾರ್ಯ ಗೋಠೆ, ಕನ್ನೂರು ಆಶ್ರಮದ ಶ್ರೀಕೃಷ್ಣ ಸಂಪಗಾವಕರ ಭಾಗವಹಿಸಲಿದ್ದಾರೆ. ಪಿಡಿಜೆ ಹೈಸ್ಕೂಲ್ ಚೇರ್ಮನ್ ಶ್ರೀಕೃಷ್ಣ ಬಿ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಯಶವಂತರಾಯಗೌಡ ಪಾಟೀಲ, ಡಾ. ದೇವಾನಂದ ಚವ್ಹಾಣ, ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಪಲ್ಲಕ್ಕಿ ರಾಧಾಕೃಷ್ಣ, ಹುಬ್ಬಳ್ಳಿಯ ಸಮೀರಾಚಾರ್ಯ ಮಣ್ಣೂರ, ಹೋಟೆಲ ಉದ್ಯಮಿ ಬಾಬುಗೌಡ ಬಿರಾದಾರ, ಧಾರವಾಡ ಬಿಗ್ ಮಿಶ್ರಾ ಪೇಡಾದ ಮಾಲೀಕ ಸಂಜಯ ಮಿಶ್ರಾ
ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲದೇ, ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಕಳೆದ 10 ವರ್ಷಗಳಿಂದ ಶ್ರೀಸಾಕ್ಷಿ ಪಂಚಾಂಗವನ್ನು ಪ್ರಕಟಿಸುತ್ತಿರುವ ಹಲಗಣೇಶ ಪ್ರಕಾಶನದ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಶ್ರೀ ಭಾಸ್ಕರಾಚಾರ್ಯ ಕ್ಯಾಲೆಂಡರ್ ಪ್ರಕಟಿಸಿ 50000 ಪ್ರತಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಗೋಪಾಲ ನಾಯಕ ಮತ್ತು ಗುರುರಾಜ ಆಚಾರ್ಯ ಹೆರಕಲ ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಎನ್. ಎಂ. ಬಿರಾದಾರ ಗೋವಿಂದ ದೇಶಪಾಂಡೆ, ಗಿರೀಶ ನರಗುಂದ, ಪ್ರೇಮ ಮುಂತಾದವರು ಉಪಸ್ಥಿತರಿದ್ದರು.