ವಿಜಯಪುರ: ಗ್ರಾಮೀಣ(Rural) ಕುಡಿಯುವ(Drinking) ನೀರು(Water) ಮತ್ತು ನೈರ್ಮಲ್ಯ ವಿಭಾಗದಡಿ ಬರುವ ಜಿಲ್ಲಾ ಜಲ ಪರೀಕ್ಷಣಾ(District Water Testing) ಪ್ರಯೋಗಾಲಯಕ್ಕೆ(Lab) ವಿಜಯಪುರ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ(Rahul Shinde) ನೀಡಿ, ಪರಿಶೀಲನೆ ನಡೆಸಿದರು.
ಪ್ರಯೋಗಾಲಯದ ಎಲ್ಲಾ ದಾಖಲಾತಿಗಳನ್ನು ಹಾಗೂ ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯದ ರಾಸಾಯನಿಕ ತಜ್ಞರಿಂದ ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಯೋಗಾಲಯದ ಎಲ್ಲ ವಿಷಯಗಳನ್ನು ಪ್ರಯೋಗಾಲಯದ ಉಸ್ತುವಾರಿ ರವೀಂದ್ರ ಆಸಂಗಿ ಮಾಹಿತಿ ನೀಡಿದರು. ಜಿಲ್ಲಾ ಪ್ರಯೋಗಾಲಯವು ನ್ಯಾಶನಲ್ ಅಕ್ರೆಡಿಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬರೇಶನ್ ಲ್ಯಾಬೋರೇಟರಿಸ್‍ನಿಂದ ಮಾನ್ಯತೆಯನ್ನು ಪಡೆದುಕೊಂಡಿರುವುದಕ್ಕೆ ರಾಹುಲ ಶಿಂಧೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಯೋಗಾಲಯದ ರಾಸಾಯನಿಕ ತಜ್ಞರುಗಳಾದ ಲಕ್ಷ್ಮಣ ಶಿರವಾಳ, ಭವ್ಯಶ್ರೀ ಬಗಲಿ ಮತ್ತೀತರ ಸಿಬ್ಬಂದಿ ಉಪಸ್ಥಿತರಿದ್ದರು.