ಆಧುನಿಕ ಭಗೀರಥನ ಸಹಾಯ ಹಸ್ತ- ನನಸಾಗುತ್ತಿದೆ ವೈದ್ಯನಾಗುವ ಕಡುಬಡವ ವಿದ್ಯಾರ್ಥಿಯ ಕನಸು

ವಿಜಯಪುರ: ಆಧುನಿಕ ಭಗೀರಥ(Adhunika Bhagiratha), ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(Campaign Committee Chairman) ಎಂ. ಬಿ. ಪಾಟೀಲ(M B Patil) ಬಡವರಿಗೆ ಸಹಾಯ ಹಸ್ತ(Help) ಚಾಚುವಲ್ಲಿ ಸದಾ ಸಿದ್ಧಹಸ್ತರು.  ಕಳೆದ ಹಲವು ದಿನಗಳ ಹಿಂದೆ ನೀಟ್ ಪಾಸಾಗಿ ಎಂಬಿಬಿಎಸ್ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಅವರು ಕೋರ್ಸ್ ಮುಗಿಸುವ ತನಕ ಪೂರ್ಣ ಆರ್ಥಿಕ ನೆರವನ್ನು ನೀಡುವ ಮೂಲಕ ಜಗಮೆಚ್ಚುವ ಕೆಲಸ ಮಾಡಿದ್ದರು.

ಎಂ. ಬಿ. ಪಾಟೀಲ ಈಗ ಮತ್ತೆ ಇಂಥದ್ದೆ ಪ್ರತಿಭಾವಂತ ಬಡ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.  , 25- ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಮತ್ತೋಬ್ಬ ವೈದ್ಯಕೀಯ ವಿದ್ಯಾರ್ಥಿಗೆ ನೆರವಾಗುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯ ಕಲಕೇರಿಯ ವಿದ್ಯಾರ್ಥಿ ದೇವಿಂದ್ರ ಶಂಕರೆಪ್ಪ ರಕ್ಕಸಗಿ ಪಿಯುಸಿ ಪರೀಕ್ಷೆಯಲ್ಲಿ ಶೇ. 89.60 ಅಂಕಗಳಿಸಿ ನೀಟ್ ಪರೀಕ್ಷೆ ಪಾಸಾಗಿದ್ದಾನೆ. ಅಲ್ಲದೇ, ಬೆಳ್ತಂಗಡಿಯ ಪ್ರಸನ್ನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ಸೀಟು ಪಡೆದಿದ್ದಾನೆ.  ಆದರೆ, ಕಡು ಬಡತನ ಈ ವಿದ್ಯಾರ್ಥಿಯ ಓದಿಗೆ ಅಡ್ಡಿಯಾಗಿತ್ತು. ವೈದ್ಯನಾಗಲು ವಿದ್ಯಾಭ್ಯಾಸಕ್ಕೆ ಅಗತ್ಯವಾಗಿದ್ದ ಹಣ ಹೊಂದಿಸಲು ಸಾಧ್ಯವಾಗದೆ ಈ ಕುಟುಂಬ ಸಂಕಷ್ಟದಲ್ಲಿತ್ತು. ಈ ವಿದ್ಯಾರ್ಥಿಯ ತಂದೆ ಶಂಕರೆಪ್ಪ ರಕ್ಕಸಗಿ ಟ್ರ್ಯಾಕ್ಟರ್ ಚಾಲಕನಾಗಿದ್ದು, ತಾಯಿ ಮಲ್ಲಮ್ಮ ಕೂಲಿ ಕೆಲಸ ಮಾಡುತ್ತಾರೆ. ಈ ವಿದ್ಯಾರ್ಥಿಗೆ ಬಿಎಎಂಎಸ್ ಓದಲು ಹಣಕಾಸಿನ ತೊಂದರೆ ವಿಷಯ ತಿಳಿದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರು ನೆರವಿಗೆ ಧಾವಿಸಿದ್ದು, ಬಡ ವಿದ್ಯಾರ್ಥಿ ವೈದ್ಯನಾಗಬೇಕೆಂಬ ಕನಸು ನನಸಾಗಲು ಸಹಾಯಹಸ್ತ ಚಾಚಿದ್ದಾರೆ.

ಎಂ ಎಲ್ ಸಿ ಸುನೀಲಗೌಡ ಪಾಟೀಲ ಬಡವಿದ್ಯಾರ್ಥಿ ದೇವಿಂದ್ರ ಶಂಕರೆಪ್ಪ ರಕ್ಕಸಗಿಗೆ ಚೆಕ್ ನೀಡಿ, ಶುಭ ಕೋರಿದರು

ಎಂ. ಬಿ. ಪಾಟೀಲ ಅವರ ಸೂಚನೆ ಹಿನ್ನೆಲೆಯಲ್ಲಿ ಇಂದು ಬಿ ಎಲ್ ಡಿ ಇ ಸಂಸ್ಥೆಯ ಅಧಿಕಾರಿಗಳು ವಿದ್ಯಾರ್ಥಿಯನ್ನು ವಿಜಯಪುರಕ್ಕೆ ಆಹ್ವಾನಿಸಿ, ಬಿಎಎಂಎಸ್ ಪದವಿ ಪೂರ್ಣಗೊಳಿಸಲು ಅಗತ್ಯವಾಗಿರುವ ಒಟ್ಟು ರೂ. 8.87 ಲಕ್ಷ ಹಣಕಾಸಿನ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.  ಇದು ಬಿಎಎಂಎಸ್ ಕೋರ್ಸಿ ಪೂರ್ಣಗೊಳಿಸಲು ಅಗತ್ಯವಾಗಿರುವ ಕಾಲೇಜಿನ ಫೀ, ಹಾಸ್ಟೇಲ್ ಫೀ, ಪಠ್ಯಪುಸ್ತಕಗಳ ಖರ್ಚನ್ನು ಒಳಗೊಂಡಿದೆ.

ಅದರಂತೆ, ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ವಿದ್ಯಾರ್ಥಿ ದೇವೀಂದ್ರ ಶಂಕರೆಪ್ಪ ರಕ್ಕಸಗಿಗೆ ಬಿಎಎಂಎಸ್ ಮೊದಲ ವರ್ಷಕ್ಕೆ ಅಗತ್ಯವಾಗಿರುವ ರೂ. 2.32 ಲಕ್ಷದ ಚೆಕ್ ವಿತರಿಸಿ, ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ತಮ್ಮ ಸಹೋದರ ಎಂ. ಬಿ. ಪಾಟೀಲ ಅವರು ಬಡವರ ಪಾಲಿಗೆ ಸದಾ ನೆರವು ನೀಡುತ್ತಿದ್ದು, ಈ ಹಿಂದೆಯೂ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಅಗತ್ಯವಾಗಿರುವ ರೂ. 16 ಲಕ್ಷ ಮತ್ತು ರೂ. 6.50 ಲಕ್ಷ ಹಣಕಾಸಿನ ನೆರವು ನೀಡಿದ್ದಾರೆ.  ಈ ಸಲ ಬಿಎಎಂಎಸ್ ವಿದ್ಯಾರ್ಥಿ ದೇವೀಂದ್ರ ಶಂಕರೆಪ್ಪ ರಕ್ಕಸಗಿ ಅವರಿಗೂ ನೆರವು ನೀಡುತ್ತಿದ್ದು, ಮೊದಲ ವರ್ಷಕ್ಕೆ ಅಗತ್ಯವಾಗಿರುವ ಹಣದ ಚೆಕ್‍ನ್ನು ಈಗ ವಿತರಿಸಿರುವುದಾಗಿ ತಿಳಿಸಿದರು.

ಡಾಕ್ಟರ್ ಆಗಬೇಕೆಂಬ ಕನಸು ನನಸಾಗುತ್ತಿರುವುದಕ್ಕೆ ವಿದ್ಯಾರ್ಥಿ ದೇವಿಂದ್ರ ಶಂಕರೆಪ್ಪ ರಕ್ಕಸಗಿ ಸಂತಸ ವ್ಯಕ್ತಪಡಿಸಿದ್ದು, ತನ್ನಂತ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಎಂ. ಬಿ. ಪಾಟೀಲ ಬಡವರ ಬಂಧುವಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ವೈದ್ಯನಾಗಬೇಕೆಂಬ ಕನಸನ್ನು ಅವರು ನನಸು ಮಾಡುತ್ತಿದ್ದಾರೆ. ಅವರಿಗೆ ಎμÉ್ಟೀ ಕೃತಜ್ಞತೆ ಸಲ್ಲಿಸಿದರೂ ಸಾಲದು. ಅವರು ನೀಡಿರುವ ಹಣಕಾಸಿನ ನೆರವನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶ್ರೇಣಿಯಲ್ಲಿ ಬಿಎಎಂಎಸ್ ಪಾಸು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಯ ತಂದೆ ಶಂಕರೆಪ್ಪ ರಕ್ಕಸಗಿ ಕೂಡ ಈ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದು, ತನ್ನ ಮಗ ಬುದ್ದಿವಂತನಿದ್ದಾನೆ. ಆದರೆ, ಕಿತ್ತು ತಿನ್ನುವ ಬಡತನದಿಂದಾಗಿ ಆತನ ಕನಸು ನನಸು ಮಾಡುವುದು ನಮಗೆ ಕಷ್ಟವಾಗಿತ್ತು. ಎಂ. ಬಿ. ಪಾಟೀಲ ಅವರು ನಮಗೆ ನೆರವಾಗುತ್ತಿದ್ದಾರೆ.  ಅವರಿಗೆ ಎμÉ್ಟೀ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಚೆಕ್ ವಿತರಣೆ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಕಚೇರಿ ಅಧೀಕ್ಷಕರಾದ ಎಸ್. ಎ. ಬಿರಾದಾರ(ಕನ್ನಾಳ) ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌