ಮಗನ ಚಿಕಿತ್ಸೆಗಾಗಿ ಮತಾಂತರಕ್ಕೆ ಮುಂದಾದ ಬಸವ ನಾಡಿನ ದಂಪತಿ- ಇವರಿಗೆ ಸಹಾಯ ಮಾಡಬೇಕಾದರೆ ಇಲ್ಲಿದೆ ಮಾಹಿತಿ

ವಿಜಯಪುರ: ಈ ಕುಟುಂಬಕ್ಕೆ(Family) ಬಡತನ(Poverty) ಎಂಬುದು ಶಾಪವಾಗಿ ಪರಿಣಮಿಸಿದೆ.  ಇದರಿಂದ ಬೇಸತ್ತ ದಂಪತಿ(Couple) ಪರಿಪರಿಯಾಗಿ ನೆರವು(Help) ಕೇಳಿದರೂ(Requedt) ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ಕೈಗೊಂಡಿರವವ ನಿರ್ಧಾರ(Decision) ಎಂಥವರ ಮನಸ್ಸನ್ನೂ ಮರಗಿಸುವಂತಿದೆ. 

ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ  ಈರಣ್ಣ ನಾಗೂರ ಮತ್ತು ಸವಿತಾ ನಾಗೂರ ಕುಟುಂಬದ ಹೃದಯವಿದ್ರಾವಕ ಸ್ಟೋರಿ.  ಸಂತೋಷವಾಗಿರಬೇಕಿರುವ ಕುಟುಂಬವಿಗ ತಮ್ಮ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಯಾರು ತಮಗೆ ಸಹಾಯ ಮಾಡುತ್ತಾರೋ ಅವರ ಧರ್ಮಕ್ಕೆ ಮತಾಂತರವಾಗಲು ಮುಂದಾಗಿದೆ.

ಈರಣ್ಣ ನಾಗೂರ ಢಾಭಾವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದಾರೆ.  ಇವರ ಪತ್ನಿ ಸವಿತಾ ನಾಗೂರ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.  ಎರಡು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹೊಂದಿರುವ ಈ ಕುಟುಂಬ ಈಗ ಕಳೆದ ಎರಡೂವರೆ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದೆ. ಮೂರು ವರ್ಷದ ಮಗನಿಗೆ ಕಾಣಿಸಿಕೊಂಡಿರುವ ಅಪರೂಪದ ಕಾಯಿಲೆ ಥಲಸ್ಸಿಮಿಯಾ ಅಂದರೆ ರಕ್ತಹೀನತೆ ಈ ಕುಟುಂಬ ಕಣ್ಣೀರು ಹಾಕುವಂತೆ ಮಾಡಿದೆ.

ಈ ರೋಗದಿಂದಾಗಿ ಮಗುವಿನ ಮುಖ, ಕಣ್ಣುಗಳು, ಬಾಯಿಗೆ ಇನ್ನಿಲ್ಲದ ಕಾಟ ಕೊಡುತ್ತಿದೆ.  ಮಗ ಕಾರ್ತಿಕ್ ನಿಗೆ ಪ್ರತಿ ತಿಂಗಳು ರಕ್ತ ಹಾಕಿಸಬೇಕಿದ್ದು, ಈ ದಂಪತಿ ಈಗಾಗಲೇ 32 ಬಾರಿ ರಕ್ತ ಹಾಕಿಸಿದ್ದಾರೆ.  ಅಲ್ಲದೇ, ಈವರೆಗೆ ರೂ. 2 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.  ಈಗ ಪ್ರತಿಬಾರಿ ರಕ್ತ ಬದಲಾಯಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  ರಕ್ತ ಸಂಬಂಧಿಗಳಲ್ಲಿ ವಿವಾಹವಾದರೆ ಈ ಕಾಯಿಲೆ ಹೆಚ್ಚಾಗಿ ಕಂಡು ಬರುಲ ಈ ಕಾಯಿಲೆ ಇವರನ್ನು ಹೈರಾಣಾಗಿಸಿದೆ.

ಪ್ರತಿ ಬಾರಿ ರಕ್ತ ಹಾಕಿಸಲು ಐದರಿಂದ ಆರು ಸಾವಿರ ರೂಪಾಯಿ ಖರ್ಚು ಮಾಡಬೇಕು.  ಎರಡು ಹೆಣ್ಣು ಮಕ್ಕಳ ಶಾಲೆ, ಮತ್ತಿತರೆ ಖರ್ಚು ತಮಗೆ ಹೊರೆಯಾಗುತ್ತಿದೆ.  ಈಗಾಗಲೇ ವಿಜಯಪುರ, ಬೆಳಗಾವಿ, ಬೆಂಗಳೂರು, ಮಣಿಪಾಲ ಸೇರಿದಂತೆ ಹಲವಾರು ಅಲೆದಾಡಿದರೂ ಮಗ ಗುಣಮುಖನಾಗಿಲ್ಲ.  ಈ ರೋಗ ನಿವಾರಿಸಲು ಬೋನ್ ಮ್ಯಾರೋ ಆಪರೇಷನ್ ಮಾಡಿಸಲು ರೂ. 10 ಲಕ್ಷ ಅಗತ್ಯವಾಗಿದ್ದು, ಹಣ ಹೊಂದಿಸಲಾಗದೆ ದಿಕ್ಕು ತೋಚದಂತಾಗಿದೆ.  ಮಗನ ಮುಂದಿನ ಭವಿಷ್ಯ ಹೇಗೆ ಎನ್ನೊ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ ಎನ್ನತ್ತಾರೆ ಮಗುವಿನ ತಂದೆ ಈರಣ್ಣ ನಾಗೂರ.

ಪ್ರತಿ ತಿಂಗಳು ಖರ್ಚು ಮಾಡಿ ಸಾಕಷ್ಟು ಜನರ ಬಳಿ ನೆರವು ಯಾಚಿಸಿದರೂ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ತಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ.  ಯಾರು ನಮಗೆ ಸಹಾಯ ಮಾಡುತ್ತಾರೋ ಅವರ ಧರ್ಮಕಮಕೆ ಮತಾಂತರವಾಗುತ್ತೇವೆ ಎಂದು ಹಿಂದೂ ಧರ್ಮಕ್ಕೆ ಸೇರಿರುವ ಈರಣ್ಣ ನಾಗೂರ ತಿಳಿಸಿದ್ದಾರೆ.

ಸರಕಾರದ ಯಾವುದೇ ಯೋಜನೆಗಳು ಮಗನಿಗೆ ಐದು ವರ್ಷ ಪೂರ್ಣವಾಗದ ಹಿನ್ನೆಲೆಯಲ್ಲಿ ಸಿಗುತ್ತಿಲ್ಲ.  ಹೀಗಾಗಿ ಬೇರೆ ಧರ್ಮದವರು ಮಗಬ ಚಿಕಿತ್ಸೆಗೆ ನೆರವಾದರೆ ಈಡಿ ಕುಟುಂಬ ಮತಾಂತರ ಹೊಂದುವ ನಿರ್ಣಯ ಕೈಗೊಂಡಿದ್ದೇವೆ.  ಒಂದು ವೇಳೆ ಯಾರಾದರೂ ಹಿಂದೂಗಳು ಸಮಾಯ ಮಾಡಿದರೆ, ಇದೇ ಧರ್ಮದಲ್ಲಿ ಮುಂದುವರೆಯಲೂ ನಿರ್ಧರಿಸಿದ್ದೇವೆ.  ದಯಮಾಡಿ ತಮ್ಮ ಮಗನ ಜೀವ ಉಳಿಸಲು ಹೃದಯವಂತರು, ಮಾನವೀಯತೆ ಉಳ್ಳವರು ಮುಂದೆ ಬನ್ನಿ ಎಂದು ಈ ಕುಟುಂಬ ಅಂಗಲಾಚುತ್ತಿದೆ.

ಈ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಲು ಇಚ್ಥಿಸುವವರು ಈ ಕೆಳಿಗಿನ ಬ್ಯಾಂಕ್ ಅಕೌಂಟಿಗೆ ಹಣ ಹಾಕಬಹುದಾಗಿದೆ.

 

ಈರಣ್ಣ ಭೀಮಶಿ ನಾಗುರ

ಖಾತೆ ಸಂಖ್ಯೆ: 32736341211

IFSC Code: SBIN0000728

ಶಾಖೆ: ಬಸವನ ಬಾಗೇವಾಡಿ

Gpay Or PhonePe: 8431011589

Leave a Reply

ಹೊಸ ಪೋಸ್ಟ್‌