ವಿಜಯಪುರ: ನಿವೃತ್ತಿಯ(Retired) ನಂತರವೂ ಇಬ್ಬರು(Two) ಹಿರಿಯರು(Senior) ಟಿ ಇ ಇ(TEE) ಪರೀಕ್ಷೆ(Exam) ಬರೆಯುವ ಮೂಲಕ ಯುವಕರೂ ಮೆಚ್ಚುವ ಸಾಧನೆ ಮಾಡಿದ್ದಾರೆ.
ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿ ಇ ಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ.ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋ ದಿಂದ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿದ್ದು ಐದನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಿಂದಗಿ ಆರ್.ಡಿ.ಪಾಟೀಲ ಪಿ.ಯು.ಕಾಲೇಜಿನ ನಿವೃತ್ತ ಉಪನ್ಯಾಸಕ 66 ವರ್ಷದ ಪರಸಪ್ಪ ಮಡಿವಾಳರ ಇಂಗ್ಲೀಷ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಮಾದರಿಯಾಗಿದ್ದಾರೆ.
ನಿವೃತ್ತಿ ಜೀವನದಲ್ಲಿಯೂ ಜ್ಞಾನಾರ್ಜನೆಗಾಗಿ ಇಬ್ಬರೂ ಹಿರಿಯರು ವಿದ್ಯಾರ್ಜನೆಯನ್ನು ಮುಂದುವರೆಸಿರುವುದಕ್ಕೆ ಇಗ್ನೋ ಕೇಂದ್ರದ ಸಂಯೋಜಕರಾದ ಡಾ. ಮಂಜುನಾಥ ಕೋರಿ, ಪ್ರಾಚಾರ್ಯ ಡಾ. ಭಾರತಿ ವೈ. ಖಾಸನೀಸ, ಸಂಸ್ಥೆಯ ಆಡಳಿತಾಧಿಕಾರಿಗಳು ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.