ವಿಜಯಪುರ: ಕರುಳಿನ ಕುಡಿಯ ಚಿಕಿತ್ಸೆಗೆ ಪರದಾಡುತ್ತಿದ್ದ ದಂಪತಿಗೆ ನೆರವಾಗುವ ಮೂಲಕ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಈರಣ್ಣ ನಾಗೂರ ಮತ್ತು ಸವಿತಾ ದಂಪತಿಯ ಮೂರು ವರ್ಷದ ಮಗುವಿಗೆ ಥಲ್ಸಿಮಿಯಾ ಅಂದರೆ ರಕ್ತಹೀನತೆ ಕಾಯಿಲೆಯಿದ್ದು, ತಮ್ಮ ಮಗನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿದ್ದರು. ಈ ಮಾಹಿತಿ ತಿಳಿದ ಎಂ. ಬಿ. ಪಾಟೀಲ ಅವರು ಕೂಡಲೇ ಸ್ಪಂದಿಸಿದ್ದಾರೆ.
ಈ ವರದಿಯನ್ನೂ ಓದಿ:
ಮಗನ ಚಿಕಿತ್ಸೆಗಾಗಿ ಮತಾಂತರಕ್ಕೆ ಮುಂದಾದ ಬಸವ ನಾಡಿನ ದಂಪತಿ- ಇವರಿಗೆ ಸಹಾಯ ಮಾಡಬೇಕಾದರೆ ಇಲ್ಲಿದೆ ಮಾಹಿತಿ
ಈ ಬಾಲಕನಿಗೆ ಪ್ರತಿ ತಿಂಗಳು ಹೊಸ ರಕ್ತ ಹಾಕುವ ಅವಶ್ಯಕತೆಯಿದೆ. ಈಗಾಗಲೇ 32 ಬಾರಿ ರಕ್ತ ಹಾಕಿಸಲಾಗಿದೆ. ಪ್ರತಿಬಾರಿ ರಕ್ತ ಬದಲಾಯಿಸಲು ಮತ್ತು ಔಷಧಿಗಾಗಿ ಐದಾರು ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಡಾಬಾದಲ್ಲಿ ಕೆಲಸ ಮಾಡುವ ಈರಣ್ಣ ನಾಗೂರ ಮತ್ತು ಕೂಲಿ ಕೆಲಸ ಮಾಡುವ ಸವಿತಾ ನಾಗೂರ ಅವರಿಗೆ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಎಂ. ಬಿ. ಪಾಟೀಲ್ ಅವರು ಮಗುವಿನ ಚಿಕಿತ್ಸೆ ಒದಗಿಸಲು ಮುಂದಾಗಿದ್ದಾರೆ. ಅಲ್ಲದೇ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತೆ ಮತ್ತು ಸಂಶೋಧನ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಬಿ ಎಲ್ ಡಿ ಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್. ಎಸ್ ಮುಧೋಳ ಹಾಗೂ ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್ ವಿ. ಕುಲಕರ್ಣಿ ಅವರಿಗೆ ಕರೆ ಮಾಡಿ ಬಾಲಕನ ಪೋಷಕರನ್ನು ತಕ್ಷಣ ಸಂಪರ್ಕಿಸಿ ಚಿಕಿತ್ಸೆಗೆ ಅಗತ್ಯವಿರುವ ಸಕಲ ರೀತಿಯ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ಎಂ. ಬಿ. ಪಾಟೀಲ ಅವರಿಂದ ಸೂಚನೆ ಬಂದ ತಕ್ಷಣ ಈರಣ್ಣ ನಾಗೂರ ಅವರನ್ನು ಸಂಪರ್ಕಿಸಿದ ಡಾ ಆರ್. ಎಸ್ ಮುಧೋಳ ಮತ್ತು ಡಾ ಆರ್. ವಿ. ಕುಲಕರ್ಣಿ ಕೂಡಲೇ ವಿಜಯಪುರಕ್ಕೆ ಬರುವಂತೆ ತಿಳಿಸಿದ್ದಾರೆ.
ತಮ್ಮ ಮಗನಿಗೆ ಉಚಿತ ಚಿಕಿತ್ಸೆ ದೊರೆಯುವ ಮಾಹಿತಿ ತಿಳಿದ ತಕ್ಷಣ ನಾಗೂರ ದಂಪತಿ ಬಿ ಎಲ್ ಡಿ ಇ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಗ ಖುದ್ದು ಹಾಜರಿದ್ದ ಡಾ ಆರ್. ಎಸ್. ಮುಧೋಳ ಮತ್ತು ಅಸ್ಪತ್ರೆ ಆರ್ ಎಂ ಓ ಡಾ. ಅಶೋಕ ಥರಡಿ, ಚಿಕ್ಕಮಕ್ಕಳ ತಜ್ಞ ಡಾ. ಎಂ. ಎಂ. ಪಾಟೀಲ ಅವರಿಂದ ತಪಾಸಣೆ ನಡೆಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಅμಅಷ್ಟೇ ಅಲ್ಲ, ಡಾ. ಆರ್. ಎಸ್ ಮುಧೋಳ ನಾಗೂರ ದಂಪತಿಯನ್ನು ಭೇಟಿ ಮಾಡಿ, ಮಗುವಿಗೆ ನಮ್ಮ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ. ಇಲ್ಲಿಯೇ ಪ್ರತಿ ತಿಂಗಳು ರಕ್ತ ಬದಲಾವಣೆ ಮಾಡುತ್ತೇವೆ. ಬೇರೆ ಅಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ. ಆರ್. ಎಸ್. ಮುಧೋಳ ಅವರು, ನಾಗೂರ ದಂಪತಿಯ ಪುತ್ರನ ಪರಿಸ್ಥಿತಿ ತಿಳಿದು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀ¯ ಅವರು ಕೂಡಲೇ ಸ್ಪಂದಿಸಲು ಸೂಚನೆ ನೀಡಿದ್ದಾರೆ. ಅದರಂತೆ ಮೂರು ವರ್ಷದ ಮಗುವನ್ನು ನಮ್ಮ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದೇವೆ. ಮಗುವಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ. ರಕ್ತ ಬದಲಾವಣೆ ಮಾಡುತ್ತೇವೆ. ಔಷಧಿಯನ್ನು ಕೂಡ ಉಚಿತವಾಗಿ ಒದಗಿಸುತ್ತೇವೆ. ಮಗುವಿಗೆ ಅಗತ್ಯವಾಗಿರುವ ಶಸ್ತ್ರಚಿಕಿತ್ಸೆ ಮತ್ತಿತರ ಹೆಚ್ಚಿನ ಚಿಕಿತ್ಸೆಗಳ ಕುರಿತು ನಮ್ಮ ವೈದ್ಯರು ಬೆಂಗಳೂರಿನಲ್ಲಿರುವ ತಜ್ಞ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತೇವೆ. ಮಗುವನ್ನು ಗುಣಪಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಬಾಲಕನ ತಂದೆ ಈರಣ್ಣ ನಾಗೂರ ಮಾತನಾಡಿ, ತಮ್ಮ ಮಗನ ಕಾಯಿಲೆಯ ಕುರಿತ ವರದಿಗೆ ಎಂ. ಬಿ. ಪಾಟೀಲ ಸರ್ ಸ್ಪಂದಿಸಿ ನಮಗೆ ನೆರವಾಗುತ್ತಿದ್ದಾರೆ. ನಮ್ಮ ಮಗನ ಚಿಕಿತ್ಸೆ ಕುರಿತು ಆತಂಕದಲ್ಲಿದ್ದ ನಮ್ಮ ಪರಿಸ್ಥಿತಿಯನ್ನು ತಿಳಿದು ಎಂ. ಬಿ. ಪಾಟೀಲ ಸರ್ ನಮಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿದ್ದಾರೆ. ಅಲ್ಲದೆ ಮಗುವಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾನಾ ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದ ನಮಗೆ ಎಂ ಬಿ. ಪಾಟೀಲ ಸರ್ ಧೈರ್ಯ ತುಂಬಿ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ. ಅವರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿರುವ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಅμÉ್ಟೀ ಅಲ್ಲ, ಇಲ್ಲಿನ ವೈದ್ಯರೂ ಕೂಡ ಕಾಳಜಿಯಿಂದ ಸ್ಪಂದಿಸಿದ್ದಾರೆ. ನಮಗೆ ಧೈರ್ಯ ಬಂದಿದೆ. ನಾನು ನನ್ನ ಮಗನಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸುತ್ತೇನೆ. ಬೇರೆಲ್ಲೂ ಹೋಗಲ್ಲ. ನಮಗೆ ಸ್ಪಂದಿಸಿದÀವರೆಗೆ ಒಳ್ಳೆಯದಾಗಲಿ ಎಂದು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಏಕನಾಥ ಜಾಧವ ಮಗುವಿಗೆ ಅಗತ್ಯವಿರುವ ರಕ್ತ, ಔಷಧಿ ಮತ್ತೀತರ ಸೌಲಭ್ಯಗಳನ್ನು ಒದಗಿಸಿದ್ದಾರೆ.
ಒಟ್ಟಾರೆ ಮಗನ ಚಿಕಿತ್ಸೆಗೆ ಪರದಾಡುತ್ತಿದ್ದ ನಾಗೂರ ದಂಪತಿಗೆ ಎಂ. ಬಿ. ಪಾಟೀಲ ಅವರು ಚಿಕಿತ್ಸೆ ನೀಡಲು ಮುಂದಾಗುವ ಮೂಲಕ ಮತ್ತೋಮ್ಮೆ ಹೃದಯ ವೈಶಾಲ್ಯತೆ ತೋರಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.