ಕನ್ಡಡ ಭಾಷೆಯಲ್ಲಿ ವೃತ್ತಿಪರ ಕೋರ್ಸುಗಳನ್ನು ಸೃಷ್ಠಿಸಿ ಉದ್ಯೋಗದಲ್ಲಿ ಶೇ. 5 ರಷ್ಟು ಮೀಸಲಾತಿ ನೀಡಿ- ಕಸಾಸ ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಮೇಲಿನಮಠ

ವಿಜಯಪುರ: ಕನ್ನಡ ಭಾಷೆಯಲ್ಲಿ(Kannada Language) ವೃತ್ತಿಪರ ಕೋರ್ಸುಗಳನ್ನು(Professional Courses) ಸೃಷ್ಠಿಸಿ ಶೇ. 5 ರಷ್ಯು ಉದ್ಯೋಗಳನ್ನು(Jobs) ಕನ್ನಡ ಮಾಧ್ಯಮದವರಿಗೆ(Kannada Medium) ಉದ್ಯೋಗದಲ್ಲಿ ಮೀಸಲಾತಿ(Job Reservation) ನೀಡಬೇಕು.  ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಭುವನೇಶ್ವರಿ ಮೇಲಿನಮಠ(ಮಲ್ಲಿಕಾರ್ಜುನಮಠ)(Bhuvaneshwari Melinamath) ಹೇಳಿದ್ದಾರೆ.

ವಿಜಯಪುರ ನಗರದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ

 

 

ವಿಜಯಪುರದಲ್ಲಿ ಆರಂಭವಾಗಿರುವ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಕಂಪ್ಯೂಟರ ಕನ್ನಡತಿ ಎಂದೇ ಹೆಸರಾಗಿರುವ ಅವರು, ಮಕ್ಕಳನ್ನು ಬಾಲ್ಯದಿಂದಲೇ ಆಂಗ್ಲ ಭಾಷೆಯ ಶಾಲೆಗಳಿಗೆ ಕಳುಹಿಸಿದರೆ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಲು ಕಷ್ಟವಾಗುತ್ತದೆ.  ಅಷ್ಟೇ ಅಲ್ಲ, ಇದರಿಂದ ಕನ್ನಡ ಭಾಷೆ ಅಭಿವೃದ್ಧಿಯಾಗಲು ಹಿನ್ನಡೆಯಾಗುತ್ತದೆ ಎಂದು ಹೇಳಿದರು.

ಮಕ್ಕಳಿಂದ ಹಿಡಿದು ಯುವಕರವರೆಗೆ ಅಂದರೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಕನ್ನಡ ಭಾಷೆಯಲ್ಲಿ ಪಠ್ಯಕ್ರಮ ಇರುವಂತಾಗಬೇಕು ಎಂದು ಹೇಳಿದ ಅವರು, ತಾಂತ್ರಿಕ ಕ್ಷೇತ್ರದಲ್ಲಿರುವ ಕ್ಲಿಷ್ಟಕರ ಶಬ್ದಗಳಿಗೂ ತಾವು ಕನ್ನಡ ರೂಪ ನೀಡಲು ತಾವು ಕೈಗೊಂಡ ಸಂಶೋಧನೆಯನ್ನು ವಿವರವಾಗಿ ಮಾಹಿತಿ ನೀಡಿದರು

ಕನ್ನಡ ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಈ ಭಾಷಯನ್ನು ಗಣಕೀಕರಣ ದೃಷ್ಠಿಕೋನದಿಂದ ತುಲನೆ ಮಾಡಬೇಕು.  ಈ ಕೆಲಸ ಬಹಳ ವಿಸ್ತಾರವಾಗಿದೆ.  ಆದ್ದರಿಂದ ಹಂಪಿಯಲ್ಲಿ ಕನ್ನಡ ‘ಭಾಷೆಗಾಗಿಯೇ ಇರುವ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟೆಶನಲ್ ಲಿಂಗ್ವೆಸ್ಟಿಕ್ಸ್ ಎಂಬ ವಿಭಾಗ ತೆರೆಯಬೇಕು.  ಬಂಗಾಳಿ, ಹಿಂದಿ ಭಾಷೆಗಳಲ್ಲಿ ಈಗಾಗಲೇ ಈ ದಿಸೆಯಲ್ಲಿ ಕೆಲಸಗಳು ನಡೆಯುತ್ತಿವೆ.  ಚೀನಾ, ಮತ್ತು ಜಪಾನ್ ದೇಶಗಳಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಅಲ್ಲಿಯ ಭಾಷೆಯಲ್ಲಿಯೇ ಕಲಿಸಲಾಗುತ್ತದೆ.  ಇದರಿಂದ ವಿಷಯಗಳು ಅವರಿಗೆ ಮನದಟ್ಟಾಗುತ್ತವೆ ಎಂದು ಭುವನೇಶ್ವರ ಮೇಲಿನಮಠ ಹೇಳೀದರು.

ಕನ್ನಡ ಅನ್ನ, ನೀರಿನ ಭಾಷೆಯಾಗಬೇಕು.  ಆನಂದದ ಭಾಷೆಯಾಗಬೇಕು.  ಆಟವಾಡುತ್ತ ಕಥೆ ಕೇಳುತ್ತಾ ಚಿತ್ರಮಾಲಿಕೆಯ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು. ಆ ಮೂಲಕ ಕನ್ನಡದ ಕಲಿಕಾಸಕ್ತಿಯನ್ನು ಹೆಚ್ಚಿಸಬೇಕಾದ ಕೆಲಸ ಆಗಬೇಕಿದೆ ಎೞದು ಅವರು ತಿಳಿಸಿದರು.

ಆಂಗ್ಲಭಾಷೆಯಲ್ಲಿ ಹಲವು ಶಬ್ದಗಳಿಂದ ಕೂಡಿದ ಒಂದು ನುಡಿಗಟ್ಟು ಕನ್ನಡದ ಒಂದು ಪದಕ್ಕೆ ಸಮವಾಗಿದೆ.  ನಾಲಿಗೆಗೆ ರುಚಿ ಇಲ್ಲದಿದ್ದಿದ್ದರೆ, ಯಾವ ತಿಂಡಿಯು ಸಿಹಿಸದು.  ಅದೇ ರೀತಿ ಶಬ್ದ ಸಾಹಿತ್ಯದ ಅಭಿರುಚಿ ಬೆಳೆಸಲು ಶಬ್ದಗಳು ಬೇಕು. ಶಬ್ದ ಶ್ರೀಮಂತಿಕೆ ಬೆಳೆದರೆ ಮಾತ್ರ ಸಾಹಿತ್ಯ ಹಿಡಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಅಂತಾರಾಷ್ಟ್ರೀಯ ಮಟ್ಟದ ವಚನ ಪಿತಾಮಹ .ಗು. ಹಳಕಟ್ಟಿ ಪ್ರಶಸ್ತಿ ಸ್ಥಾಪಿಸಬೇಕು.  ರಾಷ್ಟ್ರಮಟ್ಟದ ನಾಟಕ ರಂಗದ ಶ್ರೀರಂಗ ಪ್ರಶಸ್ತಿ ನೀಡಬೇಕು.  ರಾಜ್ಯ ಮಟ್ಟದ ಮಧುರಚೆನ್ನರ ಕಾವ್ಯ ಪ್ರಶಸ್ತಿ ನೀಡಬೇಕು.  ಈ ಭಾಗದ ಸಮಗ್ರ ಅಭಿವೃದ್ಧಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ರೂಪಿಸಬೇಕು ಭುವನೇಶ್ವರ ಮೇಲಿನಮಠ(ಮಲ್ಲಿಕಾರ್ಜುನಮಠ) ತಿಳಿಸಿದರು.

ಇದಕ್ಕೂ ಮುನ್ನ ಸಾರೋಟದಲ್ಲಿ ಆಶೀನರಾದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ನಡೆಸಲಾಯಿತು.  ಈ ಮೆರವಣಿಗೆಯ ಮುಂದೆ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಕರಡಿ ಕುಣಿತ, ಕರಡಿ ಮಜಲು, ಡೊಳ್ಳು ಕುಣಿತ, ಹಲಗೆ ನಿನಾದ, ಮಹಿಳೆಯರ ಕೋಲಾಟದ ಜೊತೆಗೆ ತಾಯಿ ಭುವನೇಶ್ವರಿಯ ಹಿರಿಮೆ ಸಾರುವ ಉದ್ಘೋಷಗಳು ಗಮನ ಸೆಳೆದವು.  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಡಾ. ಭುವನೇಶ್ವರಿ ಮೇಲಿನಮಠ ಅವರು, ಮೆರವಣಿಗೆಯುದ್ಧಕ್ಕೂ ಕೈ ಜೋಡಿಸುತ್ತ ಕೃತಜ್ಞತೆ ಸಲ್ಲಿಸಿದ್ದು ಗಮನ ಸೆಳೆಯಿತು.  ಸಾಹಿತ್ಯಾಸಕ್ತರು ಸಮ್ಮೇಳನಾಧ್ಯಕ್ಷರಿಗೆ ಪುಷ್ಪವಷ್ಟಿಯ ಮೂಲಕ ಗೌರವ ಸಲ್ಲಿಸುತ್ತಿದ್ದ ದೃಶ್ಯ ಮೆರಗು ತಂದಿತು.

ವಿಜಯಪುರ ನಗರದ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ, ಗಾಂಧಿಚೌಕ್, ಬಸವೇಶ್ವರ ಚೌಕ್, ಅಂಬೇಡ್ಕರ ಚೌಕ್ ಮಾರ್ಗವಾಗಿ ಸಮ್ಮೇಳನ ನಡೆಯುವ ಸ್ಥಳ ಕಂದಗಲ್ ಹಣಮಂತರಾಯ ರಂಗ ಮಂದಿರ ತಲುಪಿತು.  ಅಲ್ಲಿ ನೆರೆದಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು ಸಮ್ಮೇಳನಾಧ್ಯಕ್ಷೆಯನ್ನು ಬರಮಾಡಿಕೊಂಡು ಅಭಿನವಪಂಪ ನಾಗಚಂದ್ರ ಪ್ರಧಾನ ವೇದಿಕೆ ಕರೆದೊಯ್ದರು.
ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಕರ್ನಾಟಕ ಸಾವಯವ ಬೀಜ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಚಾಲನೆ ನೀಡಿದರು.  ಕನ್ನೂರಿನ ಸೋಮನಾಥ ಶಿವಾಚಾರ್ಯರು, ಬುರಾಣಪೂರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮೆರವಣಿಗೆ ಸಮಿತಿ ಅ‘ಧ್ಯಕ್ಷ ರವಿ ಕಿತ್ತೂರ, ಬಿ. ಆರ್. ಚೌಕಿಮಠ, ಉಮೇಶ ವಂದಾಲ, ಅಡಿವೆಪ್ಪ ಸಾಲಗಲ, ಈರಣ್ಣ ಪಟ್ಟಣಶೆಟ್ಟಿ, ರಮೇಶ ಬಿದನೂರ, ಶಿವಾನಂದ ಕೆಲ್ಲೂರ, ಭಾರತಿ ಪಾಟೀಲ, ಪ್ರೊ. ಮಹಾದೇವ ರೆಬಿನಾಳ, ಡಿ. ಬಿ.  ನಾಯಕ, ಕೆ. ಸುನಂದಾ, ಅಂಬಾದಾಸ ಜೋಶಿ, ಶರಣಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌