ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಪೊಲೀಸರು(Police) ಮಾದಕ(Drugs) ವಸ್ತುಗಳನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ, ಉಪಆಯುಕ್ತ ಬಸವರಾಜ ಸಂದಿಗವಾ ಅವರ ಮಾರ್ಗದರ್ಶನದಲ್ಲಿ ಮಹದೇವಪುರ ಅಬಕಾರಿ ಇನ್ಸಪೆಕ್ಟರ್ ಎ. ಎ. ಮುಜಾವರ ನೇತೃತ್ವದಲ್ಲಿ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಲಾಗಿದೆ. ಓಲ್ಡ್ ಮದ್ರಾಸ್ ರಸ್ತೆಯ ಕೆ. ಆರ್. ಪುರಂ ಮಾರುಕಟ್ಟೆ ಹತ್ತಿರ ಕೇರಳ ಮೂಲದ ರೇನೆಟ್ ಜಾರ್ಜ್ ಅಬ್ರಹಾಂ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು. ಅಲ್ಲದೇ, ಆತ ಮಾರಾಟಕ್ಕಾಗಿ ತಂದಿದ್ದ 46.50 ಗ್ರಾಂ(METHAMPHETAMINE CRYSTAL METH ) ಮತ್ತು 860 ಗ್ರಾಂ ಒಣಗಿದ ಗಾಂಜಾ ಜಪ್ತಿ ಮಾಡಲಾಗಿದೆ. ಒಟ್ಟು ರೂ ರೂ. 4 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಹಾಗೂ ಸೈಕೋ ಟ್ರೋಫಿಕ್ ಸಬಸ್ಟನ್ಸ್ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎನ್ ಡಿ ಪಿ ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.