ಬಸವ ನಾಡಿನಲ್ಲಿ ಮತ್ತೆ ಕಂಪಿಸಿದ ಭೂಮಿ- ಎಲ್ಲಿ? ಎಷ್ಟು ತೀವ್ರತೆ? ಯಾವಾಗ ಗೊತ್ತಾ?

ವಿಜಯಪುರ: ಬಸವ(Basava) (ನಾಡು) ವಿಜಯಪುರ(vijayapura) ಜಿಲ್ಲೆಯಲ್ಲಿ(District) ಮತ್ತೆ ಲಘು(Mild) ಭೂಕಂಪದ(Earthquake) ಅನುಭವವಾಗಿದೆ.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದರ ಅನುಭವವಾಗಿದೆ. ಉಕ್ಕಲಿ ಗ್ರಾಮದ ಬಸವೇಶ್ವರ ನಗರದ ಉತ್ತರಪೂರ್ವ ಭಾಗದಲ್ಲಿ 1.3 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ದಾಖಲಾಗಿದೆ.  ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ.

ಶನಿವಾರ ರಾತ್ರಿ 7.50 ನಿಮಷಕ್ಕೆ ಲಘು ಭೂಕಂಪವಾಗಿದ್ದು, ಭೂಮಯಿ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ಅದರ ಅನುಭವ ಉಕ್ಕಲಿ ಮತ್ತು ಇತರ ಗ್ರಾಮಗಳ ವ್ಯಾಪ್ತಿಯಲ್ಲಿ ವ್ಯಕ್ತವಾಗಿದೆ.  ಇದು ಲಘು ಭೂಕಂಪವಾಗಿದ್ದು, ಬಹುತೇಕರಿಗೆ ಗಮನಕ್ಕೆ ಬಂದಿಲ್ಲ. ಈ ಭೂಕಂಪವನ್ನು ರಾಜ್ಯ ಪೃಕತಿ ವಿಕೋಪ ನಿರ್ವಹಣೆ ಕೇಂದ್ರ ದೃಢಪಡಿಸಿದೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

Leave a Reply

ಹೊಸ ಪೋಸ್ಟ್‌