ಕಾಂಗ್ರೆಸ್ ಆಚಾರ, ವಿಚಾರಗಳ ಪ್ರಚಾರದ ಹೊಣೆ ಹೊತ್ತ ಎಂ. ಬಿ‌. ಪಾಟೀಲ

ಬೆಂಗಳೂರು: ಮಾಜಿ (Gormernment) ಸಚಿವ(Minister) ಮತ್ತು ಬಬಲೇಶ್ವರ(Babalesgwar) ಕಾಂಗ್ರೆಸ್(Congress) ಶಾಸಕ (MLA)ಎಂ. ಬಿ. ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ‌.

ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಗಾಯತ್ರಿ ವಿಹಾರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರಿಂದ ಕಿಕ್ಕಿರಿದು ತುಂಬಿದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು.

ಕೆಪಿಸಿಸಿ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಧ್ವಜವನ್ನು ಎಂ. ಬಿ. ಪಾಟೀಲ ಅವರಿಗೆ ಮೂಲಕ ಹೊಸ ಜವಾಬ್ದಾರಿ ವಹಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಎಂ. ಬಿ. ಪಾಟೀಲ, ತಮಗೆ ಹೊಸ ಜವಾಬ್ದಾರಿ ನೀಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ, ರಂದೀಪಸಿಂಗ್ ಸುರ್ಜೆವಾಲಾ, ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ ಮತ್ತೀತರರಿಗೆ ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಅನ್ಬ, ಅಕ್ಷರ, ಆರೋಗ್ಯ, ಆಶ್ರಯ ಪಂಚಸೂತ್ರದಡಿ ರಾಜ್ಯಾದ್ಯಂತ ಪ್ರಚಾರ ನಡೆಸಲಾಗುವುದು. ಎಲ್ಲ ನಾಯಕರ ಜೊತೆಗೂಡಿ ಬಿಜೆಪಿ ಜನವಿರೋಧಿ ನೀತಿಯನ್ನು ಜನರಿಗೆ ಮನವರಿಜೆ ಮಾಡಿಕೊಡುತ್ತೇನೆ. ಕಾಂಗ್ರೆಸ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಜನರಿಗೆ ನೀಡಲಿರಯವ ಜನಪರ ಯೋಜನೆಗಳ ಕುರಿತು ಬಗ್ಗೆ ತಿಳುವಳಿಕೆ ನೀಡುತ್ತೇನೆ. ಅಭಿವೃದ್ಸಿಗಾಗಿ ಮತ್ತೆ ಕಾಂಗ್ರೆಸ್ ಅಗತ್ಯ ಎಂಬುದನ್ನು ಪ್ರಚಾರ ಮಾಡುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಪದಗ್ರಗಣದ ಬಳಿಕ ಎಂ. ಬಿ. ಪಾಟೀಲ ಮಾತನಾಡಿದರ

ಈ ಸಂದರ್ಭದಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ, ಶಾಸಕರಾದ ರಾಮಲಿಂಗಾರೆಡ್ಡಿ, ಆರ್. ವಿ. ದೇಶಪಾಂಡೆ, ದಿನೇಶ ಗುಂಡೂರಾವ, ಅಜಯಸಿಂಗ್, ಎಚ್. ಕೆ. ಪಾಟೀಲ, ನಾಗೇಂದ್ರ, ಲಕ್ಷ್ಮಿ ಹೆಬ್ಬಾಳ್ಕರ, ಸೌಮ್ಯ ರೆಡ್ಡಿ, ಸಲೀಂ ಅಹ್ಮದ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಸಚಿವ ಶರಣಪ್ರಕಾಶ ರಾಠೋಡ, ಬಿ. ಎಲ್. ಶಂಕರ, ಎಚ್. ಆಂಜನೇಯ, ಎಚ್. ಎಂ. ರೇವಣ್ಣ, ಮಾಜಿ ಸಂಸದ ಧ್ರುವ ನಾರಾಯಣ, ವಿ. ಎಸ್‌ ಉಗ್ರಪ್ಪ, ಮಾಜಿ ಶಾಸಕರಾದ ಸಿ. ಎಸ್. ನಾಡಗೌಡ, ಪ್ರೊ. ರಾಜು ಆಲಗೂರ, ಶರಣಪ್ಪ ಸುಣಗಾರ, ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರಿಫ್, ಸಂಗಮೇಶ ಬಬಲೇಶ್ವರ, ಸೋಮನಾಥ ಕಳ್ಳಿಮನಿ, ಡಾ. ಗಂಗಾಧರ ಸಂಬಣ್ಣಿ, ಕಾಂತಾ ನಾಯಕ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿಧ್ದ ಜನರಿಗಿಂತ ಎರಡು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಸೇರಿ ಕಾರ್ಯಕ್ರಮ ವೀಕ್ಷಿಸಿದ್ದು ಗಮನ ಸೆಳೆಯಿತು.

Leave a Reply

ಹೊಸ ಪೋಸ್ಟ್‌