ಬೆಂಗಳೂರು: ದ್ರಾಕ್ಷಿ(Grapes) ಮತ್ತು ಲಿಂಬೆ(Lemon) ಬೆಳೆಗಾರರು(Growers) ಮತ್ತು ಶಾಸಕರು(MLAs) ಬೆಂಗಳೂರಿನಲ್ಲಿ(Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಭೇಟಿ ಮಾಡಿದ್ದರು.
ದ್ರಾಕ್ಷಾರಸ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ ರೂ. 35 ಕೋ. ಅನುದಾನ ನಿಗದಿ ಮಾಡಿದ್ದಕ್ಕಾಗಿ ಸಿಎಂ ಭೇಟಿ ಮಾಡಿದ ಮುಖಂಡರು ಕೃತಜ್ಞತೆಗಳನ್ನು ಸಲ್ಲಿಸಿದರು.
ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ರೂ. 35 ಕೋ. ವೆಚ್ಚದಲ್ಲಿ ದ್ರಾಕ್ಷಿ ಬೆಳೆಯ ಸಂಸ್ಕರಣೆಗೆ ಸಂಬಂಧಪಟ್ಟ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳನ್ನು ಇದೇ ಸಂದರ್ಭದಲ್ಲಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಭೂಸನೂರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೆಕರ್ , ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಸಂಜಯ ಪಾಟೀಲ ಕನಮಡಿ, ಎಂ. ಎಸ್. ರುದ್ರಗೌಡ, ಡಾ. ಬಿ. ಎಸ್. ಪಾಟೀಲ(ನಾಗರಾಳ ಹುಲಿ) ಮುಂತಾದವರು ಉಪಸ್ಥಿತರಿದ್ದರು.