ಕತ್ನಳ್ಳಿ ಜಾತ್ರೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಜಾತ್ರೆಗೆ ಭಕ್ತರನ್ನು ಆಹ್ವಾನಿಸಿದ ಸ್ವಾಮೀಜಿ

ವಿಜಯಪುರ: ಇದು ಭಕ್ತರ(Devotees) ಜಾತ್ರೆ(Fair).  ಭಕ್ತರಿಗಾಗಿ ಇರುವ ಜಾತ್ರೆ. ಭಕ್ತರಿಗೆಗೋಸ್ಕರ ಆಯೋಜಿಸಲಾಗಿರುವ(Organised) ಜಾತ್ರೆ. ಇಲ್ಲಿ ಭಕ್ತರೇ ಸರ್ವಸ್ವ. ಭಕ್ತರೆ ಮಾಲೀಕರು‌‌(Owner). ಈ ಜಾತ್ರೆಗೆ ಬಸವ ನಾಡು(Basava Nadu), ದೇಶ-ವಿದೇಶಗಳ ಎಲ್ಲ ಭಕ್ತರು ಪರಿವಾರದೊಂದಿಗೆ ಬಂದು ಸದಾಶಿವನ ದರ್ಶನ, ಆಶೀರ್ವಾದ ಪಡೆದು ಎಲ್ಲರೂ ಉದ್ಧಾರವಾಗಬೇಕು. ಎಲ್ಲರೂ ಆಶೀರ್ವಾದ ಇರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ ಎಂದೇ ಹೆಸರಾಗಿರುವ ಕತಕನಹಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಆಹ್ಬಾನ ನೀಡಿದ್ದಾರೆ.

ಸುಕ್ಷೇತ್ರ ಕತ್ನಳ್ಳಿ ಶ್ರೀಗುರು ಚಕ್ರವರ್ತಿ ಸದಾಶಿವ ಮಠ

ಕತ್ನಳ್ಳಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಈ ಜಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಅದರಂತೆ ಎಲ್ಲ ನಡೆಯಲಿವೆ ಎಂದು ತಿಳಿಸಿದರು.

ದೇಶದಲ್ಲಿ ಪ್ರತಿಯೊಬ್ಬರಿಗೆ ಕೊರೊನಾ ಎರಡು ಡೋಸ್ ಲಸಿಕೆ ಗಾಕಿಸುವ ಮೂಲಕ ಸರಕಾರ ಕೊರೊನಾವನ್ನು ಉತ್ತಮವಾಗಿ ನಿರ್ವಹಣೆ ಮಾಡಿದೆ. ಜನೇವರಿ ಮತ್ತು ಫೆಬ್ರವರಿಯಲ್ಲಿ ಸ್ವಲ್ಪ ಕೊರೊಬಾ ಸೋಂಕು ಕಾಣಿಸಿಕೊಂಡರು ಹೆಚ್ಚಿಗೆ ಪರಿಣಾಮ ಬೀರಲಿಲ್ಲ. ಪ್ರತಿಯೊಬ್ಬ ಭಾರತೀಯರು ಸರಕಾರದ ಉಪಕಾರವನ್ನು ಸ್ಮರಿಸಬೇಕು ಎಂದು ಸ್ವಾಮೀಜಿ ಹೇಳಿದರು.

ಕತ್ನಳ್ಳಿ ಮಠದ ಶ್ರೀ ಶಿವಯ್ಯ ಸ್ವಾಮೀಜಿ

ಸ್ಚಾಮೀಜಿಗಳಿಗಿಂತಲೂ ಮುಂಚೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಇದು ಭಕ್ತರ ಜಾತ್ರೆ. ಎಲ್ಲ ಊರುಗಳ ಜನ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿಂದೆ ಪ್ರಚಲಿತವಾಗಿದ್ದ ಆರು ಎತ್ತಿನ ನೇಗಿಲ ಸ್ಪರ್ಧೆ ನಡೆಯಲಿದೆ. ಎರಡು ಎತ್ತುಗಳಿಂದ ಎತ್ತುವ ಸ್ಪರ್ಧೆ ಕೂಡ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕುಸ್ತಿ ಪಟುಗಳಿಗೆ, ರಸಪ್ರಶ್ನೆ ಕಾರ್ಯಕ್ರಮ, ರೈತರ ಮಕ್ಕಳಿಗಾಗಿ ನಾನಾ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಮಾಜಿ ಅಚಿವ ಅಪ್ಪು ಪಟ್ಟಣಶೆಟ್ಟಿ

ಏ. 1 ರಂದು ಕತಕನಹಳ್ಳಿ ಶ್ರೀ ಸದಾಶಿವ ಮಠದ ಶ್ರೀ ಶಿವಯ್ಯ ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಜಾನುವಾರು ಜಾತ್ರೆ, ಕೆಸರು ಗದ್ದೆ ಓಟ, ಕೃಷಿ ಮೇಳದ ಉದ್ಘಾಟನೆ ನಡೆಯಲಿದೆ. ಏ. 2 ರಂದು ಕುಂಭಾಭೀಷೆಕ, ರಸಪ್ರಶ್ನೆ ಸ್ಪರ್ಧೆ, ಶ್ರೀ ಚಿದಂಬರ ಮಹಾಗುರು ಪುರಾಣಗಳು ನಡೆಯಲಿವೆ.  ಏ.3  ರಂದು ಪಲ್ಲಕ್ಕಿ ಉತ್ಸವ, ಆರೇತ್ತಿನ ನೇಗಿಲು ಜಗ್ಗುವ ಸ್ಪರ್ಧೆ, ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.  ಏ. 4 ರಂದು ಸರಳ ಸಾಮೂಹಿನ ವಿವಾಹ, ಹೇಳಿಕೆ ನುಡಿಯುವ ಅಂದರೆ ಕಾರ್ಣಿಕ ಭವಿಷ್ಯ ನುಡಿಯುವ ಕಾರ್ಯಕ್ರಮ, ಮಹಾಪ್ರಸಾದ, ನಗೆಹಬ್ಬ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏ. 6ರಂದು ಭಾರ ಎತ್ತುವ ಸ್ಪರ್ಧೆ, ಜಂಗಿ ನಿಕಾಲಿ ಕುಸ್ತಿ, ಚಿತ್ರ-ವಿಚಿತ್ರ ಮದ್ದು ಸುಡುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಜಿ ಸಚಿವ ಮತ್ತು ಮಠದ ಪರಮಭಕ್ತರಾಗಿರುವ ನಾಜಿ ಸಚಿವರು ತಿಳಿಸಿದರು.

ಅಲ್ಲದೇ, ಎರಡು ದಿನಗಳ ಕಾಲ ವಿಜಯಪುರದ ಬಿ ಎಲ್ ಡಿ ಈ ಸಂಸ್ಥೆಯ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಜನರಿಗೆ ಅಗತ್ಯವಾಗಿರುವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಆರೋಗ್ಯ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲ ಭಕ್ತರು ಜಾತ್ರೆಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಅಪ್ಪು ಪಟ್ಟಣಶೆಟ್ಟಿ ಕೂಡ ಭಕ್ತರಿಗೆ ಆಹ್ಚಾನ ನೀಡಿದರು.

Leave a Reply

ಹೊಸ ಪೋಸ್ಟ್‌