ಬಾಗಲಕೋಟೆ: ಗುಣಮಟ್ಟದ(Quality) ಬದುಕಿಗೆ(Life) ಹೋಮಿಯೋಪಥಿ(Homeopathy) ಪೂರಕವಾಗಿದೆ(Supportive) ಎಂದು ಕರ್ನಾಟಕ(Karnataka) ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ನಾಡೋಜ ಡಾ. ಬಿ. ಟಿ. ರುದ್ರೇಶ ಹೇಳಿದ್ದಾರೆ.
ಅವರು ಬಾಗಲಕೋಟೆಯಲ್ಲಿ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಶೈಕ್ಷಣಿಕ ವರ್ಷಾರಂಭ ಮತ್ತು ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ಪ್ರಕೃತಿಯ ಅಪಾರ. ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಲು ಸಾಧ್ಯವಿದೆ ಎಂದು ಅವರು ಹೇಳಿದರು.
ಬೆಳಗಾವಿಯ ಭರತೇಶ ಹೋಮಿಯೋಪಥಿಕ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಕೇಂದ್ರಿಯ ಹೋಮಿಯೋಪಥಿ ಪರಿಷತ್ತಿನ ನಿಕಟಪೂರ್ವ ಸದಸ್ಯ ಡಾ. ಶ್ರೀಕಾಂತ ಕೊಂಕಣಿ ಮಾತನಾಡಿ, ಕೇವಲ ಎರಡು ವಷ೯ಗಳಲ್ಲಿ ಈ ಸಂಸ್ಥೆ ಭಾರತದ ಶ್ರೇಷ್ಠ ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಸಾಲಿನಲ್ಲಿ ಹೆಸರು ಪಡೆದದ್ದು ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಶ್ರಮಿಸಿದ ಪ್ರಾಚಾರ್ಯರು, ಅಧ್ಯಾಪಕರು, ಹಾಗೂ ಸಂಸ್ಥೆಯ ಪಧಾಧಿಕಾರಿಗಳು ನೀಡಿದ ಪ್ರೋತ್ಸಾಹ ,ಬೆಂಬಲ, ಕಾಯ೯ ವೈಖರಿಗೆ ಅಭಿನಂದನೆಗಳು ಎಂದು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ ಡಾ. ಅರುಣ ಹೂಲಿ ವಾಷಿ೯ಕ ವರದಿಯ ದಿಕ್ಸೂಚಿ ಭಾಷಣ ಮಾಡಿದರು. ವಿದ್ಯಾಥಿ೯ಗಳು ಪ್ರಥಮ
ವಷ೯ದಲ್ಲಿಯೇ ವಿಶ್ವವಿದ್ಯಾಲಯಕ್ಕೆ ರಾಂಕ ಪಡೆದಿದ್ದಾರೆ. ಅಲ್ಲದೇ, ಶೇ. 100 ರಷ್ಟು ಫಲಿತಾಂಶ ಪಡೆದಿರುವದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕಾಲೇಜನ ಆಡಳಿತದ ಮಂಡಳಿಯ ಅಧ್ಯಕ್ಷ ಮಲ್ಲಿಕಾಜು೯ನ ಸಾಸನೂರ, ಡಾ. ಶಶಿಕುಮಾರ ಇಜೇರಿ ಮುಂತಾದವರು ಉಪಸ್ಥಿತರಿದ್ದರು. ಡಾ. ನಿಧಿ ಎಂ. ಬೆಳಗಾಂವಕರ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರದೀಪ ರೆಡ್ಡಿ ಸ್ವಾಗತಿಸಿದರು. ಡಾ. ರವಿ ಎಸ್. ಕೋಟೆಣ್ಣವರ ವಂದಿಸಿದರು.