ಅಗಸನಹಳ್ಳಿ ವಿಠೋಬಾ- ಮಾರುತಿ ದೇವಾಲಯ ಆವರಣದಲ್ಲಿ ಧರ್ಮಸಭೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಕಾಖಂಡಕಿ ಬಳಿ ಇರುವ ಅಗಸನಹಳ್ಳಿ(Agasanahalli) ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ(Vithal-Rukmini) ಮೂರ್ತಿ ಪ್ರತಿಷ್ಛಾಪನೆ(Statue Installation) ಅಂಗವಾಗಿ ಕಳಸಾರೋಹಣ ಹಾಗೂ ಜ್ಞಾನೋಬ, ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಮತ್ತು ಶ್ರೀ ಗ್ರಂಥ ರಾಜ ಜ್ಞಾನೇಶ್ವರ ಪುರಾಣದ ಕಾರ್ಯಕ್ರಮ ನಡೆಯಿತು. 

ಶ್ರೀ ವಿಠ್ಠಲ ಮಂದಿರ ದೇವಾಲಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲಗೂರ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ಮತ್ತು ಬಬಲೇಶ್ವರ ಬ್ರಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿದರು.

ಅಗಸನಹಳ್ಳಿ ಗ್ರಾಮದಲ್ಲಿ ಧರ್ಮಸಭೆ ನಡೆಯಿತು

ಪಂಡರಪುರದ ಶ್ರೀ ವಿಠಲನ ದೇವರ ಸ್ಮರಣೆಯೊಂದಿಗೆ ಅನೇಕ ಸಂತರು ಭಗವಂತನ ದರ್ಶನವನ್ನು ಪಡೆದಿದ್ದಾರೆ.  ಭಗವಂತ ಭಕ್ತರ ಮನೆಯಲ್ಲಿ ಕಾಯಕ ಮಾಡಿರುವುದನ್ನು ನಾವು ಪುರಾಣ ಪ್ರವಚನದಲ್ಲಿ ಕೇಳಿದ್ದೇವೆ.  ಎಲ್ಲರ ಮನದಲ್ಲಿ, ಕಾಯಕದಲ್ಲಿ ಭಗವಂತ ಇದ್ದಾನೆ ಎಂದು ಡಾ. ಮಹಾದೇವ ಶಿವಾಚಾರ್ಯರು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮನಗೂಳಿಯ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನೇಕ ಶರಣರು ಮಾನವನಾಗಿ ಹುಟ್ಟಿ ಜ್ಞಾನ ಭಕ್ತಿಯಿಂದ ಭಗವಂತನ ಸ್ಮರಣೆಯಿಂದ ಹೇಮರೆಡ್ಡಿ ಮಲ್ಲಮ್ಮ. ಗುಡ್ಡಾಪುರ ಶ್ರೀ ದಾನಮ್ಮದೇವಿ .ಕಲಬುರಗಿ ಶ್ರೀ ಶರಣಬಸಪ್ಪ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ. ಉಪ್ಪಲಗಿರಿ ಶ್ರೀ ಸಂಗಮನಾಥ ಸೇರಿದಂತೆ ನಾನಾ ಶರಣುರ ದೇವರ ಸ್ಥಾನ ಪಡೆದಿದ್ದಾರೆ.  ಎಲ್ಲರಿಗೂ ದೇವರ ಜ್ಞಾನ ಬಹಳ ಮುಖ್ಯ,  ಎಲ್ಲರೂ ಜ್ಞಾನ ಸಂಪಾದಿಸಿ ಪುನೀತರಾಗಬೇಕು ಎಂದು ಹೇಳಿದರು.

ಸಾವಯವ ಬೀಜ ಮತ್ತು ಗೊಬ್ಬರ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಾಪುಗೌಡ ಬಿ. ಪಾಟೀಲ, ಉದ್ಯಮಿ ಗುರಲಿಂಗಪ್ಪ ಅಂಗಡಿ, ಬಬಲೇಶ್ವರ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ವಿ  ಎಸ್  ಪಾಟೀಲ ಈ ಸಂದರ್ಭದಲ್ಲಿ ಮಾತನಾಡಿದರು.

ಅಗಸನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಮಾತನಾಡಿದರು

ಬಿ ಎಲ್ ಡಿ ಇ ಸಂಸ್ಥೆಯ ಮಾಜಿ ನಿರ್ದೇಶಕ ಎಂ. ಕೆ. ಪಾಟೀಲ, ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಸಿದ್ದರಾಮಯ್ಯ ಹಿರೇಮಠ, ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ರಜಾಕಸಾಬ ವಾಲಿಕಾರ, ನಿವೃತ್ತಿ ಸಾಳುಂಕೆ, ಶ್ರೀಶೈಲ ಗಲಗಲಿ, ನರಸಪ್ಪ ಹಿರೇಕುರುಬರ, ಕಾಸಪ್ಪ ಕಾರಜೋಳ, ಮಾರುತಿ ಸಾಳುಂಕೆ, ಬಾಬುಲಾಲ ಜುಮನಾಳ, ಕೇದಾರಿ ಚವ್ಹಾಣ, ಸಂಗಪ್ಪ ತೋಟಕರ, ಮಂಗಳೂರು ಸಂತರು ಮುಂತಾದವರು ಉಪಸ್ಥಿತರಿದ್ದರು

ದೇವಾಲಯಕ್ಕೆ ಮೂರ್ತಿಯನ್ನು ನೀಡಿದ ವಿಠ್ಠಲ ಸಾಳುಂಕೆ ಹಾಗೂ ಕಳಸ ನೀಡಿದ ರಾಮಪ್ಪ ಧನ್ಯಳ ಮತ್ತು ವಿಠ್ಠಲ ಛಾಯಾಗೋಳ,  ಹನುಮಂತ ಕಮತಗಿ, ನಾನಾ ಸೇವೆ ಸಲ್ಲಿಸಿದ, ಸಹಾಯ ಮತ್ತು ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಂತರ ಬಸವಕಲ್ಯಾಣ ಶ್ರೀ ಸಂಗಮೇಶ್ವರ ಸ್ವಾಮೀಜಿ ಹಾಗೂ ಸಂಗಡಿಗರಿಂದ ಪ್ರವಚನ ನಡೆಯಿತು.  ಈ ಕಾರ್ಯಕ್ರಮದಲ್ಲಿ ಹರಿಭಕ್ತ ಪಾರಾಯಣ ಸಂತ ಮಂಡಳಿ ಮಹಿಳೆಯರು, ನಾನಾ ಗ್ರಾಮಸ್ಥರು ಪಾಲ್ಗೋಂಡಿದ್ದರು.  ಮಹಾಂತೇಶ ಸಾಳುಂಕೆ ಸ್ವಾಗತಿಸಿದರು.  ಗಣೇಶ ಕೋಲಕಾರ ನಿರೂಪಿಸಿದರು.  ಸೋಮು ಹಿರೇಕುರುಬರ ವಂದಿಸಿದರು.

Leave a Reply

ಹೊಸ ಪೋಸ್ಟ್‌