ವಿಜಯಪುರ: ಬಸವ ನಾಡು(Basava Nadu) ವಿಜಯಪುರದ(Vijayapura) ಬಹು ನಿರೀಕ್ಷಿತ(Expected) ಬುರಣಾಪುರ(Buranapura) ವಿಮಾನ ನಿಲ್ದಾಣ(Airport) ಕಾಮಗಾರಿ ಸ್ಥಗಿತಗೊಂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಹೋರಾಟ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮುಜುಂದಾರ ಸ್ಥಳಕ್ಕೆ ಭೇಟಿ ನೀಡಿದ ಸಮಿತಿಯ ಪದಾಧಿಕಾರಿಗಳಿಗೆ ಯೋಜನೆ ಮತ್ತು ಕಾಮಗಾರಿಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಭೇಟಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಮತ್ತು ಚಿಕ್ಕಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ಸಹ ಸಂಚಾಲಕ ರಾಜು ಗಚ್ಚಿನಮಠ, ಸಮಾಜ ಸೇವಕಿ ಡಾ. ಮಲ್ಲಮ್ಮ ಯಾಳವಾರ, ಕಾಮಗಾರಿ ಪರಿಶೀಲನೆ ನಡೆಸಿದ್ದೇವೆ. ಈ ಯೋಜನೆ ಡಿಸೆಂಬರ್ 2023ರ ವೇಳೆಗೆ ಪೂರ್ಣವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ 1984ರಲ್ಲಿ ಅನುಮೋದನೆ ನೀಡಲಾಗಿತ್ತು. 2008ರಲ್ಲಿ ಶಂಕುಸ್ಥಾಪನೆ ನೆರವೇರಿದ್ದ ಈ ಯೋಜನೆಗೆ ಮಾಜಿ ಸಚಿವ ಎಂ. ಬಿ. ಪಾಟೀಲ ಮತ್ತು ದಿ. ಎಂ. ಸಿ..ಮನಗೂಳಿ ಮತ್ತು ಶ್ರೀ ಎಂ.ಬಿ.ಪಾಟೀಲ ಹಾಗೂ ನಂತರದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹಾಗೂ ಹಾಲಿ ಸಚಿವ ಗೋವಿಂದ ಕಾರಜೋಳ ಅವರ ಸತತ ಪ್ರಯತ್ನದಿಂದ ಈಗ ಒಂದು ಹಂತಕ್ಕೆ ಬಂದಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕುರಿತು ವಿಧಾನ ಸಭೆಯಲ್ಲಿ ಆಗ್ರಹಿಸಿದ್ದರಿಂದ ಹಾಗೂ ಉಳಿದ ಎಲ್ಲ ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಈಗ ATR-320 ಯಿಂದ Airbus 370 ವಿಮಾನ ಸಂಚರಿಸುವ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ತಿಳಿಸಿದರು.
ಈಗ ರನ್ ವೆ ವಿಸ್ತರಣೆಯಾಗುತ್ತಿರುವುದರಿಂದ ಸರಕಾರದಿಂದ ಒಂದು ವಾರದಲ್ಲಿ ಅನುಮೋದನೆ ಸಿಕ್ಕ ನಂತರ ರನ್ ವೆ ಕಾಮಗಾರಿ ಮತ್ತೆ ವೇಗ ಪಡೆಯಲಿದೆ. ಆದರೆ, ಇತರ ಉಳಿದ ಕಾಮಗಾರಿಗಳ ಕೆಲಸ ಭರದಿಂದ ಸಾಗಿವೆ ಎಂದು ಅವರು ತಿಳಿಸಿದರು. ಎಲ್ಲವೂ ಅಂದುಕೊಂಡಂತೆ ನಡೆದರೆ, 2023ರ ಡಿಸೆಂಬರ್ ನಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಲೋಕಾರ್ಪಣೆಯಾಗಲಿದೆ ಎಂದು ಅವರು ತಿಳಿಸಿದರು.
ಈವರೆಗೆ 30 ಮೀಟರ್ ಇದ್ದ ರನ್ ವೆ ಯನ್ನು ಈಗ ನಿಂದ 45 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ. Airbus 370 ಕ್ಕೆ ಕಾಮಗಾರಿ ಮೇಲ್ದರ್ಜೇಗೇ ಏರಿಸಬೇಕಾಗಿರುವ ಹಿನ್ನೆಲೆಯಲ್ಲಿ ಸರಕಾರದ ಅನುಮೋದನೆ ಅಗತ್ಯವಾಗಿದೆ. ಇನ್ನೋಂದು ವಾರದಲ್ಲಿ ಸಂಪೂರ್ಣ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳಿಗಳು ಮಾಹಿತಿ ನೀಡಿದ್ದಾರೆ.
ತಾವ ಭೇಟಿ ನೀಡಿದಾಗ ಕಂಪೌಂಡ್ ವಾಲ್, ಎ.ಟಿ.ಆರ್. ಸಿ.ಎಸ್.ಆರ್., ಇಲೆಕ್ಟಿಕಲ್ ಇಕ್ವಿಪ್ಮೆಂಟ್ಸ್, ಬ್ಯಾಗೇಜಿಸ್, ವಾಚ್ ಟಾವರ್, ಆರ್.ಇ.ಎಸ್.ಎ., ಏರ್ ಟ್ರಾಫಿಕ್ ಬಿಲ್ಡಿಂಗ್, ಕ್ಲಾಸ್ ಫೈರ್ ರೆಸ್ಟೋ ಬಿಲ್ಡಿಂಗ್ ಹಾಗೂ 24×7 ನೀರು ಪೂರೈಕೆ ಹಾಗೂ ಸರಬರಾಜು ಮುಂತಾದ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ಪಡೆದಿರವುದಾಗಿ ಹೋರಾಟಗಾರರು ತಿಳಿಸಿದರು.
2ನೆಯ ಹಂತದ ಕಾಮಗಾರಿಯ ಗುತ್ತಿಗೆಯನ್ನು ಕೆ.ಎಂ.ವಿ ಕನ್‌ಕ್ಷನ್ಸ್, ಹೈದರಾಬಾದ್ ಇವರಿಗೆ ನೀಡಿದ್ದು ಇವರು ಕೂಡಲೇ ಕಾರ್ಯ ಆರಂಭ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಒಟ್ಟು 18 ತಿಂಗಳ ಸಮಯ ನೀಡಲಾಗಿದೆ. ಜೂನ್ 2023ರಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿರುವುದಾಗಿ ಡಾ. ಎಲ್. ಎಚ್. ಬಿದರಿ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ರಾಜು ಬಿಜ್ಜರಗಿ, ಜಾಕೀರ ಬಾಗವಾನ ಮುಂತಾದವರು ಉಪಸ್ಥಿತರಿದ್ದರು.