ಕತ್ನಳ್ಳಿ ಜಾತ್ರೆಯಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಕ್ರೀಡೆಗಳು ಮಣ್ಣಿನ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡುತ್ತಿವೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ) ಶ್ರೀಗುರು ಚಕ್ರವರ್ತಿ(Shrigugu Chakravarti) ಸದಾಶಿವ ಜಾತ್ರೆಯಲ್ಲಿ(Sadashiva Jatre) ಆಯೋಜಿಸಲಾಗಿರುವ ಗ್ರಾಮೀಣ(Rural) ಕ್ರೀಡೆಗಳು(Sports) ಮಣ್ಣಿನ ಮಕ್ಕಳಿಗೆ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡುತ್ತವೆ.  ಈ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೋಳ್ಳಬೇಕು ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.

ಸುಕ್ಷೇತ್ರ ಕತ್ನಳ್ಳಿಯಲ್ಲಿ ಯುಗಾದಿ ಅಂಗವಾಗಿ ನಡೆಯುತ್ತಿರುವ ಜಾತ್ರೆಯಲ್ಲಿ ಜಾನುವಾರು ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರ ತಾಲೂಕಿನ( ಕತ್ನಳ್ಳಿ) ಕತಕನಹಳ್ಳಿ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ದಿನಾಂಕ01.04 2022 ರಿಂದ 05.04 2022ರವರೆಗೆ ನಡೆಯಲಿರುವ ಪ್ರಯುಕ್ತ ಜಾನುವಾರ ಜಾತ್ರೆಯ  ಉದ್ಘಾಟನಾ ಕಾರ್ಯಕ್ರಮ ನೆರವೇರಿತು

ಜಾನುವಾರ ಜಾತ್ರೆ ಉದ್ಘಾಟನೆ ಬಬಲಾದಿ- ಚಮಕೇರಿ- ಕತಕನಹಳ್ಳಿ ಪೂಜ್ಯರಾದ ಶ್ರೀ ಶಿವಯ್ಯಾ ಮಹಾಸ್ವಾಮಿಗಳು. ಚಕ್ರವರ್ತಿ ಸದಾಶಿವ ಶಿವಯೋಗಿಗಳ ದೇವಾಲಯದ ಆವರಣದಲ್ಲಿ ಗೋಮಾತೆ ಹಾಗೂ ಜಾನುವಾರಗಳ ಪೂಜೆ ಮಾಡುವದರೊಂದಿಗೆ ಚಾಲನೆ ನೀಡಿದರು.

ವರ್ಷ ಪಯರ್ಂತರ ಭೂಮಿಯಲ್ಲಿ ದುಡಿದದ್ದನ್ನು ದಣಿವನ್ನು ಆರಿಸಿಕೊಳ್ಳಲು ಇಂದಿನ ದಿನಗಳಲ್ಲಿ ವಿವಿಧ ಕ್ಷೇತ್ರ ದರ್ಶನ. ಜಾತ್ರೆ.   ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲ ರೈತ ಸಮುದಾಯದ ಭಕ್ತ ಸಮೂಹ ಶ್ರೀ ಸದಾಶಿವ ಅಜ್ಜನವರ ಆಶೀರ್ವಾದ ಪಡೆಯಬೇಕೆಂದು ಹೇಳಿದರು.

ಪ್ರತಿಸಲದಂತೆ ಈ ಬಾರಿಯೂ ಕೃಷಿ ಮೇಳ, ಕೆಸರುಗದ್ದೆ ಓಟ, ಕುಸ್ತಿ, ರಥೋತ್ಸವ .ಪಲ್ಲಕ್ಕಿ ಉತ್ಸವ. ಡೊಳ್ಳಿನ ಪದಗಳು, ನೇಗಿಲ ಜಗ್ಗುವ ಸ್ಪರ್ಧೆ, ಭಾರ ಎತ್ತುವ ಸ್ಪರ್ಧೆ, ಜಂಗಿ ಕುಸ್ತಿಗಳು ಸೇರಿದಂತೆ ನಾನಾ ಸ್ಪರ್ಧೆ ಮತ್ತು ಕಾರ್ಯಕ್ರಮಗಳು ನಡೆಯುತ್ತವೆ.  ಈ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಎಂದು ಸುನೀಗೌಡ ಪಾಟೀಲ ಹೇಳಿದರು.

ಇದಕ್ಕೂ ಮುಂಚೆ ಆರಂಭವಾದ ಜಾತ್ರೆಗೆ ಕತ್ನಳ್ಳಿ ಕಾರ್ಣಿಕ ಮತ್ತು ಮಠಾಧೀಶರಾದ ಶ್ರೀ ಶಿವಯ್ಯಾ ಮಹಾಸ್ವಾಮಿಗಳು ಶ್ರೀಗುರು ಚಕ್ರವರ್ತಿ ಸದಾಶಿವ ಶಿವಯೋಗಿಗಳ ದೇವಾಲಯದ ಆವರಣದಲ್ಲಿ ಗೋಮಾತೆಗೆ ಪೂಜೆ ಮಾಡುವದರೊಂದಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ .ಉದ್ದಮಿ ಡಿ. ಎಸ್. ಗೊಡ್ಡೋಡಗಿ, ಬಾಬುಗೌಡ ಬಿರಾದಾರ, ಉಮೇಶ ಕಾರಜೋಳ. ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಪಾಟೀಲ. ಎಸ್. ಡಿ. ಕುಮಾನಿ, ಸಾಹೇಬಗೌಡ ಬಿರಾದಾರ. ಹೊನಮಲ್ಲ ಸಾರವಾಡ. ಅಶೋಕಗೌಡ ಪಾಟೀಲ, ನಾಗರಾಜ ಲಂಬು .ಸಂಗಮೇಶ ಬಬಲೇಶ್ವರ. ಡಾ. ಗಂಗಾಧರ ಸಂಬಣ್ಣಿ  ಭೀಮಾಶಂಕರ ಹದನೂರ. ಈರಣ್ಣ ಪಟ್ಟಣಶೆಟ್ಟಿ ಗೋಪಾಲ ಘಟಕಾಂಬಳೆ. ರಾಜು ಪಾಟೀಲ ಮತ್ತು ಸುತ್ತಮುತ್ತಲಿನ ನಾನಾ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌