ಹಿರಿಯ ನಾಗರಿಕರ ಆರೋಗ್ಯ ಕಾಜಳಿ ಕುರಿತು ದಾದಿಯರಿಗೆ ತರಬೇತಿ ಶಿಬಿರ

ವಿಜಯಪುರ: ಹಿರಿಯ(Senior) ನಾಗರಿಕರ(Citizen) ಆರೋಗ್ಯ(Health) ಕಾಳಜಿ(Care) ಕುರಿತು ದಾದಿಯರಿಗೆ(ನರ್ಸ್) ಮೂರು ದಿನಗಳ ತರಬೇತಿ(Training) ಕಾರ್ಯಕ್ರಮ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ನಡೆಯಿತು.

ಆ ತರಬೇತಿ ಶಿಬಿರವನ್ನು ವಿಜಯಪುರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ನೀಡಬೇಕಿರುವ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.  ಇಂಥ ತರಬೇತಿ ಶಿಬಿರಗಳನ್ನು ಆಯೋಜಿಸುವ ಬಿ ಎಲ್ ಡಿ ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರಿನ ಹೆರಿಟೇಜ್ ಫೌಂಡೆಶನ್ ನ ಡಾ. ಕೆ. ಆರ್. ಗಂಗಾಧರ ಮಾತನಾಡಿ, ಹಿರಿಯ ನಾಗರಿಗೆ ನೀಡಬೇಕಿರುವ ಚಿಕಿತ್ಸೆ, ತೋರಬೇಕಿರುವ ಪ್ರೀತಿ, ವಹಿಸಬೇಕಿರುವ ಕಾಳಜಿಯ ಬಗ್ಗೆ ತರಬೇತಿ ಶಿಬಿರದಲ್ಲಿ ಸುದೀರ್ಘವಾಗಿ ತರಬೇತಿ ನೀಡಲಾಗಿದೆ.  ಈ ಶಿಬಿರದಲ್ಲಿ ಪಾಲ್ಗೋಂಡಿರುವ ಎಲ್ಲರೂ ಹಿರಿಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಕರೆ ನೀಡಿದರು.

ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ ಎಂ. ಹೊನ್ನುಟಗಿ ಮಾತನಾಡಿ, ೨೦೦೭ರಲ್ಲಿ ಉತ್ತರ ಕರ್ನಾಟಕದ ಮೊದಲ ಜನರಿಕ್ ಕ್ಲಿನಿಕ್ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆರಂಭವಾಗಿದೆ.  ಅಲ್ಲದೇ, ಅಂದಿನಿಂದ ಇಂದಿನವರೆಗೂ ಹಿರಿಯ ನಾಗರಿಕರಿಗೆ ಅತ್ಯುತ್ತಮ ಆರೋಗ್ಯ ಮತ್ತು ಸಾಮಾಜಿಕ ಸೇವೆಯನ್ನು ಒದಗಿಸುತ್ತಿದೆ.  ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ ೯ ರಿಂದ ಮ. ೧ ಗಂಟೆಯವರೆಗೆ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಓಪಿಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನೈಟಿಂಗೆಲ್ಸ್ ಮೆಡಿಕಲ್ ಟ್ರಸ್ಟ್ ನ ಡಾ. ಸ್ವಾತಿ ಭಂಡಾರಿ ಮಾತನಾಡಿ, ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆಯೋಜಿಸಲಾಗಿರುವ ಈ ತರಬೇತಿ ಶಿಬಿರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮುಂದಿನ ಕಾರ್ಯಕ್ರಮ ಆಯೋಜಿಸಲು ಸ್ಪೂರ್ತಿ ನೀಡಿದೆ ಎಂದು ತಿಳಿಸಿದರು.

ಹಿರಿಯ ನಾಗರಿಕರ ಕ್ಲಿನಿಕ್ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ ಮಾತನಾಡಿ, ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸಲು ಬೇಕಿರುವ ಕಾಳಜಿಯ ಕುರಿತು ಮಾಹಿತಿ ನೀಡಿದರು.
ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಜೆರಿಯಾಟ್ರಿಕ್ ಮೆಡಿಸಿನ್ ವಿಭಾಗ, ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಸೋಶಿಯಲ್ ಡಿಫೆನ್ಸ್ ನ ಮಿನಿಸ್ಟ್ರಿ ಆಫ್ ಜಸ್ಟೀಸ್ ಆ್ಯಂಡ್ ಎಂಪಾವರಮೆಂಟ್, ಬೆಂಗಳೂರಿನ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಈ ತರಬೇತಿ ಶಿಬಿರ ನಡೆಯಿತು.

ಕೇಂದ್ರ ಸರಕಾರದ ರಾಷ್ಟ್ರೀಯ ಕಾರ್ಯಕ್ರಮವೊಂದು ಖಾಸಗಿ ವೈದ್ಯಕೀಯ ಕಾಲೇಜು ಅಥವಾ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ನಡೆದಿರುವುದು ಗಮನಾರ್ಹವಾಗಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಪಾಲು ಶೇ. ೯ ರಷ್ಟಿದೆ.  ಅಲ್ಲದೇ, ೮೦-೯೦ ವಯೋಮಿತಿಯ ಹಿರಿಯ ನಾಗರಿಕರ ಸ%8

ಹೊಸ ಪೋಸ್ಟ್‌