ಎಲೆಮರೆಯ ಕಾಯಿಯಂತಿದ್ದ ಔಂಧ ಪ್ರಧಾನಿ ರಾಮಪ್ಪ ಬಾಳಪ್ಪ ಬಿದರಿ ಕುರಿತ ಪುಸ್ತಕ, ಲೇಖಕರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ವಿಜಯಪುರ: ವಿಜಯಪುರ(Vijatapura) ನಗರದ(City) ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ(BLDEA) ವಚನಪಿತಾಮಹ ಡಾ. ಪ. ಗು. ಹಳಕಟ್ಟಿ(Halakatti) ಸಂಶೋಧನೆ ಕೇಂದ್ರಕ್ಕೆ(Research Center) ಮತ್ತೊಂದು ಗೌರವ ಲಬಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ‌ 2020ನೇ ವರ್ಷದ ಪ್ರಶಸ್ತಿಯನ್ನು ಕೇಂದ್ರದ ನಿರ್ದೇಶಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಘೋಷಿಸಿದೆ.

ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ ಪುಸ್ತಕ ಪ್ರಕಟಿಸಿದೆ. ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಈ ಪುಸ್ತಕದ ಲೇಖಕರಾಗಿದ್ದಾರೆ.

ಕನ್ನಡ ಸಾಹಿತ್ಯ ಅಕಾಡೆಮಿ 2020 ನೇ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು ವಿಭಾಗದಲ್ಲಿ ಜೀವನ ಚರಿತ್ರೆ ಅಥವಾ ಆತ್ಮಕತೆಗೆ ಭಾಗದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ರಚಿಸಿರುವ ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ ಪುಸ್ತಕವನ್ನು ಆಯ್ಜೆ ಮಾಡಿದೆ.

ರಾಮಪ್ಪ ಬಾಳಪ್ಪ ಬಿದರಿ ಕುರಿತ ಪುಸ್ತಕ

ಎಲೆಮರೆಯ ಕಾಯಿಯಂತಿದ್ದ ಬಸವನ ನಾಡು ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದ ಸಾಧಕರಾದ ರಾಮಪ್ಪ ಬಾಲಪ್ಪ ಬಿದರಿ ಅವರು ಔಂಧ ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಧಾನಿಯಾಗಿ ಸಲ್ಲಿಸಿದ ಸೇವೆ ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದಕ್ಕೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ನಿರ್ದೇಶಕರಾದ ಸುನಿಲಗೌಡ ಪಾಟೀಲ, ಬಸನಗೌಡ (ರಾಹುಲ) ಪಾಟೀಲ, ಕೇಂದ್ರದ ಅಧ್ಯಕ್ಷರಾದ ಜಿ. ಕೆ. ಪಾಟೀಲ, ಕಾರ್ಯದರ್ಶಿ ಡಾ. ಎಂ‌. ಎಸ್. ಮದಬಾವಿ, ಸಂಯೋಜಕರಾದ ಡಾ. ವಿ. ಡಿ. ಐಹೊಳ್ಳಿ, ಸದಸ್ಯರಾದ ಡಾ. ಮಹಾಂತೇಶ ಬಿರಾದಾರ, ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌