ಯುಗಾದಿ ಅಂಗವಾಗಿ ಚರ್ಮರೋಗ ಖ್ಯಾತ ವೈದ್ಯರಾದ ಡಾ. ಅರುಣ ಇನಾಮದಾರ ಅವರು ರಚಿಸಿರುವ ಕವನ ಇಲ್ಲಿದೆ.

ವಿಜಯಪುರ: ನಾಡಿನ ಚರ್ಮರೋಗದ(Dermatoloty) ಕ್ಷೇತ್ರದ ಶ್ರೇಷ್ಠ(Famous) ವೈದ್ಯರಲ್ಲಿ (Doctor)ಬಸವ ನಾಡು ವಿಜಯಪುರ ಜಿಲ್ಲೆಯ ಡಾ. ಅರುಣ ಇನಾಮದಾರ(Dr. Arun Inamadar) ವೈದ್ಯರು ಮುಂಚೂಣಿಯಲ್ಲಿದ್ದಾರೆ.  ಇವರು ಕೇವಲ ಚರ್ಮರೋಗ ತಜ್ಞರಷ್ಟೇ ಅಲ್ಲ, ಶರಣರ ವಚನಗಳನ್ನು ಆಂಗ್ಲಭಾಷೆಗೆ(English) ತರ್ಜುಮೆ ಮಾಡುವಲ್ಲಿಯೂ ಎತ್ತಿದ ಕೈ.  ಅಷ್ಟೇ ಅಲ್ಲ, ಸರಳ ಮತ್ತು ಜನರಿಗೆ ಮುಟ್ಟುವ ರೀತಿಯಲ್ಲಿ ಆಗಾಗ ಕವನಗಳನ್ನೂ ಬರೆಯುತ್ತಾರೆ.

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಚರ್ಮರೋಗ ವಿಭಾಗದ ಮುಖ್ಯಸ್ಖರು ಹಾಗೂ ಅಲೈಡ್ ಸಾಯಿನ್ಸ್ ಡೀನ್ ಕೂಡ ಆಗಿದ್ದಾರೆ.  ಯುಗಾದಿಯ ಅಂಗವಾಗಿ ಡಾ. ಅರುಣ ಇನಾಮದಾರ ಅವರು ರಚಿಸಿರುವ ಕವನ ಇಲ್ಲಿದೆ.

ಡಾ. ಅರುಣ ಇನಾಮದಾರ ರಚಿಸಿರುವ ಕವನ

ಯುಗದ ಆದಿ

ಯುಗಾದಿಯ ಆಗಮನ

‘ಕೋರೋನಾ ಮುಕ್ತ

ಮಾಸ್ಕ್ ಮುಕ್ತ ಜೀವನದ ಆಗಮನ

ನೋವುಂಡ ಮನಗಳಿಗೆ

ನಲಿವಿನ ಸಿಂಚನ

ಹೊಸ ಚಿಗುರು

ಹೊಸ ಕನಸು

ಮೂಡುವ ಸಮಯ

ಮತ್ತೆ ಮತ್ತೆ ಬರಲಿ

ಯುಗಾದಿ ಹರುಷ

ತರಲಿ ನಿರಂತರ.

                -ಅರುಣ ಇನಾಮದಾರ.

 

Leave a Reply

ಹೊಸ ಪೋಸ್ಟ್‌