ವಿಜಯಪುರ: ವಿಜಯಪುರ(Vijayapura) ನಗರದ ಬಿ. ಎಂ. ಪಾಟೀಲ ರಸ್ತೆಯ(B M Patil Road) ಭೂತ್ನಾಳ ಬೈಪಾಸ್(Bhutnal Bypass) ಹತ್ತಿರ ಇರುವ ನೂತನ ಹಾಮುಲಾಲ ಮಹಾರಾಜರ ಮಂದಿರವನ್ನು(Hamulal Maharaj Temple) ಕಾರ್ಯಕ್ರಮ ಆಯೋಜಿಸಿ ನಾಲ್ಕು ತಿಂಗಳ ನಂತರ ಲೋಕಾರ್ಪಣೆ(Inauguration) ಮಾಡಲಾಗುವುದು ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ದೇವಸ್ಥಾನದ ಬಳಿ ನಡೆದ ಗೋಪುರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಹುದಿನಗಳ ಬೇಡಿಕೆಯಂತೆ ಹಾಮುಲಾಲರ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಅಣ್ಣ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ 11 ಗುಂಟೆ ಜಾಗ ನೀಡಿ ತಮ್ಮ ಅನುದಾನದಲ್ಲಿ ರೂ. 2.50 ಕೋ. ಹಣ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಅಲ್ಲದೇ, ಈಗ ಗೋಪುರ ನಿರ್ಮಾಣಕ್ಕೆ ವೈಯಕ್ತಿಕವಾಗಿ ರೂ. 15 ಲಕ್ಷ ವೆಚ್ಚದಲ್ಲಿ ಗೋಪುರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾಲ್ಕು ತಿಂಗಳಲ್ಲಿ ಈ ಗೋಪುರ ನಿರ್ಮಾಣ ಕಾಮಗಾರಿ ಪೂರ್ಣವಾಗಲಿದ್ದು, ಕಾರ್ಯಕ್ರಮ ಆಯೋಜಿಸಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ತಮಿಳುನಾಡಿನ ಶಿಲ್ಪಿ ಎನ್. ಎಸ್. ಕುಮಾರ ಅವರಿಗೆ ಮುಂಗಡವಾಗಿ ಹಣಕಾಸು ನೆರವನ್ನೂ ಸುನೀಲಗೌಡ ಪಾಟೀಲ ನೀಡಿದರು.
ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ನೆರವು ನೀಡುವ ಮೂಲಕ ಬಂಜಾರಾ ಸಮುದಾಯದ ಧಾರ್ಮಿಕ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಎಂ ಬಿ. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರಿಗೆ ಬಂಜಾರಾ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಮಾತನಾಡಿದರು.
ಸೋಮದೇವರಹಟ್ಟಿ ತಾಂಡಾದ ಶ್ರೀ ಜಗನು ಮಹಾರಾಜ, ತೊರವಿ ಕೆಸರಟ್ಟಿ ತಾಂಡಾದ ಶ್ರೀ ಧನಸಿಂಗ ಮಹಾರಾಜ, ಹಡಲಸಂಗ ಎಲ್ ಟಿ-1ರ ಶ್ರೀ ಪ್ರಕಾಶ ಮಹಾರಾಜ, ಅರಕೇರಿ ಎಲ್ ಟಿ-1ರ ಶ್ರೀ ಬಾಬು ಮಹಾರಾಜ, ಜಾಲಗೇರಿ ಎಲ್ ಟಿ-1ರ ಶ್ರೀ ರೇವು ಮಹಾರಾಜರು, ಇಟ್ಟಂಗಿಹಾಳದ ಶ್ರೀ ಭೀಮಸಿಂಗ್ ಮಹಾರಾಜ, ಜಾಲಗೇರಿಯ ಶ್ರೀ ದೋಂಡಿರಾಮ ಮಹಾರಾಜ, ಯತ್ನಾಳದ ಶ್ರೀ ಪ್ರಕಾಶ ಮಹಾರಾಜ, ಅರಕೇರಿ ಎಲ್ ಟಿ-2ರ ಶ್ರೀ ಜಗನು ಮಹಾರಾಜ, ಹಂಚನಾಳ ಎಲ್ ಟಿಯ ಗುಲಾಬ ಡಿ. ಎಲ್. ಚವ್ಹಾಣ, ಎಸ್. ಆರ್. ನಾಯಕ, ಎಪಿಎಂಸಿ ನಿರ್ದೇಶಕ ವಾಮನ ಚವ್ಹಾಣ, ಬಿ. ಬಿ. ಲಮಾಣಿ, ಶಂಕರ ಚವ್ಹಾಣ, ಎಸ್. ಆರ್. ನಾಯಕ, ಎಂ. ಎಸ್. ನಾಯಕ, ಬಾಬು ಚವ್ಹಾಣ, ರಾಜು ಪವಾರ, ಪದ್ದು ಚವ್ಹಾಣ, ಚಂದ್ರು ರಾಠೋಡ, ಅನಸೂಯಾ ಜಾಧವ, ರಾಜು ಜಾಧವ, ವಾಮನ ಚವ್ಹಾಣ, ಸುರೇಶ ಬಿಜಾಪುರ, ಪ್ರೇಮಸಿಂಗ್ ಚವ್ಹಾಣ, ಸೋಮಶೇಖರ ರಾಠೋಡ, ಡಾ. ರವಿದಾಸ ಜಾಧವ, ರಾಜು ಎಲ್. ಜಾಧವ, ಶೇಖರ ಚವ್ಹಾಣ, ಸತೀಶ ನಾಯಕ, ವಿಜಯ ರಜಪೂತ, ಪ್ರಕಾಶ ಜಾಧವ, ಬಾಬು ನಾಯಕ, ಶಿವಗೊಂಡ. ಬಿರಾದಾರ ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲ ತಾಂಡಾಗಳ ನಾಯಕ, ಕಾರಬಾರಿ, ಡಾವ, ಶಾಣ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತಿರದ್ದರು.
ಬಿ. ಡಿ. ಚವ್ವಾಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.