ಭಾವೈಕ್ಯೆತೆ ಪ್ರತೀಕ ಈ ಜಾತ್ರೆ- ಯಾವುದೇ ಭೇದಭಾವಿಲ್ಲದೆ ಪಾಲ್ಗೋಳ್ಳವ ಭಕ್ತರ ಜಾತ್ರೆ ಅನೇಕತೆಯಲ್ಲಿ ಏಕತೆಗೆ ಸಾಕ್ಷಿ

ವಿಜಯಪುರ: ರಾಜ್ಯದಲ್ಲಿ(State) ನಾನಾ ವಿಚಾರಗಳು(Subjects) ಈಗ ಚರ್ಚೆಯಲ್ಲಿವೆ.  ವಾದ-ವಿವಾದಗಳು(Argue) ತಾರಕಕ್ಕೇರುತ್ತಿವೆ.  ಆದರೆ, ಇದಾವುದಕ್ಕೂ ಸಂಬಂಧವಿಲ್ಲ ಎಂಬಂತೆ ಪಾರಂಪರಿಕವಾಗಿ(Traditional) ನಡೆದುಕೊಂಡು ಬರುತ್ತಿರುವ ಬಸವ ನಾಡಿನ(Basava Nadu) ಈ ಜಾತ್ರೆ ಈಗ ಎಲ್ಲರ ಗಮನ ಸೆಳೆಯುತ್ತಿವೆ.  ಇಲ್ಲಿ ಯಾವುದೇ ಭೇದಭಾವವಿಲ್ಲದೇ ಎಲ್ಲರೂ ಪಾಲ್ಗೋಳ್ಳುವ ಮೂಲಕ ಮಾದರಿಯಾಗಿದ್ದಾರೆ. 

ಬಸವ ನಾಡು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ) ಶ್ರೀಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರೆ ಕೋಮು ಸಾಮರಸ್ಯ ಮತ್ತು ಭಾವೈಕ್ಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಹಂಗಮವಾಗಿ ಸಾಗಿದೆ.

ಸುಕ್ಷೇತ್ರ ಕತ್ನಳ್ಳಿಯ ಶ್ರೀಗುರು ಚಕ್ರವರ್ತಿ ಸದಾಶಿವ ಮಠ

ಇಲ್ಲಿನ ವಿಶೇಷವೆಂದರೆ ಎಲ್ಲ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.  ಶ್ರೀ ಈ ಮಠದ ಪಕ್ಕವೇ ಪಕ್ಕದಲ್ಲೇ ಹಜರತ್ ಮೈಬೂಬ ಸುಬಾನಿ‌ ದರ್ಗಾ ಹಾಗೂ ಹಾಜಿ ಹಜರತ್ ಸಾಹೇಬರ ದರ್ಗಾ ಇದೆ.  ಇದು ಕೂಡ ಭಾವೈಕ್ಯತೆಯೆ ಸಂಗಮವಾಗಿದೆ.  ರಾಜ್ಯದ ಭಕ್ತರ ಜಾತ್ರೆ ಎಂದೇ ಹೆಸರಾಗಿರುವ ಕತ್ನಳ್ಳಿ ಜಾತ್ರೆ ಈಗ ಜಮನಮ ಸೆಳೆಯುತ್ತಿದೆ.

ಈ ಜಾತ್ರೆಯಲ್ಲಿ ನಡೆಯುವ ಕಾರ್ಣಿಕನ ಹೇಳಿಕೆ ದೇಶಾದ್ಯಂದ ಖ್ಯಾತಿ ಪಡೆದಿದೆ.  ಐದು ದಿನಗಳ ಈ ಜಾತ್ರೆಯ ಕೊನೆಯ ದಿನವಾದ ಸೋಮವಾರ ಹೇಳಿಕೆ ಮುಂದಿನ ವರ್ಷದ ಭವಿಷ್ಯ ಹೇಳಲಾಗುತ್ತದೆ.  ಈ ಗ್ರಾಮದಲ್ಲಿ ಪ್ರತಿ ವರ್ಷ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಜಾತಿ ಬೇಧ ಭಾವ ಮರೆತು ಹಿಂದೂ ಮುಸ್ಲಿಮರ ಎಲ್ಲರೂ ಸೇರಿ ಸದಾಶಿವ ಮುತ್ಯಾನ ಜಾತ್ರೆ ಆಚರಣೆ ಮಾಡುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ ಮಾತ್ರವಲ್ಲ ಏಕತೆಯ ಸಂಕೇತವಾಗಿದೆ ಎನ್ನುತ್ತಾರೆ ಕತ್ನಳ್ಳಿ ಮಠದ ಭಕ್ತ ಬಾಬು ಬಣಜಿಗ.

 

 

ಐದು ದಿನಗಳ ಈ ಜಾತ್ರೆಯಲ್ಲಿ ಗ್ರಾಮೀಣ ಜನರಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ನಾನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.  ಈ ಸ್ಪರ್ದೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಆಯೋಜಕರು ಕೂಡಾ ಅನ್ಯ ಧರ್ಮಿಯರಿರುವುದು ವಿಶೇಷ.  ಕೆಸರು ಗದ್ದೆ ಒಟ. ಆರೆತ್ತಿನ ನೇಗಿಲು ಎಳೆಯುವ ಸ್ಪರ್ಧೆ, ರಸಪ್ರಶ್ನೆ, ಭಾರ ಎತ್ತುವ ಸ್ಪರ್ಧೆಗಳನ್ನು ನಡೆಯುತ್ವೆ.  ಈ ಜಾತ್ರೆಯನ್ನು ಎಲ್ಲ ಸಮುದಾಯದವರೂ ಜಾತ್ಯತೀತವಾಗಿ ತಮ್ಮ ಮನೆಯ ಹಬ್ಬದಂತೆ ಐದು ದಿನಗಳ ಕಾಲ ಅಜ್ಜನ‌ ಜಾತ್ರೆಯಲ್ಲಿ ಸೇವೆ ಮಾಡುವುದು ಗಮನ ಸೆಳೆಯುತ್ತದೆ.  ಅಷ್ಟೇ ಅಲ್ಲ, ಈ ಜಾತ್ರೆಯಲ್ಲಿ ನಾನಾ ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು ಬಂದು ಸೇವೆ ಮಾಡುವುದು ಕೂಡ ವಿಶೇಷವಾಗಿ ಗಮನ ಸೆಳೆಯುತ್ತದೆ.  ಅಲ್ಲದೇ, ಸೋಮವಾರ ನಡೆಯುವ ಸರಳ ಸಾಮೂಹಿಕ ವಿವಾಹ ಮತ್ತು ಕಾರ್ಣಿಕ ನುಡಿಯುವ ಭವಿಷ್ಯ ಕಾರ್ಯಕ್ರಮ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಗಮನಾರ್ಹವಾಗಿದೆ.

 

ದೂರದೂರದ ನಾನಾ ಹಳ್ಳಿಗಳಿಂದ ಬರುವ ಭಕ್ತಾದಿಗಳು ಅಜ್ಜನ ಜಾತ್ರೆಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ.  ಸೌಹಾರ್ಧತೆಗೆ ಹೆಸರಾಗಿರುವ ಈ ಜಾತ್ರೆಯಲ್ಲಿ ಯಾವುದೇ ಭೇದಭಾವ ಇಲ್ಲ.  ಎಲ್ಲರೂ ಒಂದೇ ಒಂಬ ಭಾವೈಕ್ಯತೆ ನಮ್ಮಲ್ಲಿದೆ ಎನ್ನುತ್ತಾರೆ ಇಲ್ಲಿನ ಭಕ್ತರಾದ ಭೀಮಾಶಂಕರ.

ದೇಶಾದ್ಯಂತ ಭಾವೈಕ್ಯತೆಯನ್ನು ಕದಡುವ ಪ್ರಯತ್ನಗಳು ಒಂದೆಡೆ ನಡೆದಿದ್ದರೆ, ಇಲ್ಲಿ ಭಾವೈಕ್ಯತೆಯ ಸಂಗಮವಾಗುತ್ತಿರುವುದು ಕೋಮು ಸೌಹಾರ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.

Leave a Reply

ಹೊಸ ಪೋಸ್ಟ್‌