ಚಲಿಸುತ್ತಿದ್ದ ಅಟೋ ಮೇಲೆ ಮರ ಉರುಳಿ ಬಿದ್ದು ಆರು ಜನರಿಗೆ ಪೆಟ್ಟು- ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ರಸ್ತೆಯಲ್ಲಿ(Road) ಸಂಚರಿಸುತ್ತಿದ್ದ(Travelling) ಅಟೋದ(Auto) ಮೇಲೆ ಮರವೊಂದು(Tree) ಉರುಳಿ(Fall) ಬಿದ್ದ ಪರಿಣಾಮ ಮೂರು ಜನ ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದ ಬಳಿ ಅಟೋ ಮೇಲೆ ಉರುಳಿ ಬಿದ್ದಿರುವ ಮರ

ವಿಜಯಪುರ ನಗರದ ಪೊಲೀಸ್ ಪರೇಡ್ ಗ್ರೌಂಡ್ ಬಳಿ ಈ ಘಟನೆ ನಡೆದಿದೆ.  ಮ. 2.15ರ ಸುಮಾರಿಗೆ ದರ್ಗಾ ಕ್ರಾಸ್ ನಿಂದ ಸೋಲಾಪುರ ರಸ್ತೆಯಲ್ಲಿ ಜೋರಾಪುರ ಕಡೆಗೆ ಅಟೋ ಸಂಚರಿಸುತ್ತಿತ್ತು.  ಆಗ ಏಕಾಏಕಿ ಮರ ಅಟೋ ಮೇಲೆ ಉರುಳಿ ಬಿದ್ದಿದೆ.  ಈ ಘಟನೆಯಲ್ಲಿ ಅಟೋ ಚಲಾಯಿಸುತ್ತಿದ್ದ ಚಾಲಕ ಸೇರಿ ಆರು ಜನ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.  ಈ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಆವರಣದಲ್ಲಿರುವ ಮರ ಉರುಳಿ ಬಿದ್ದಿದೆ.  ಎರಡು ದಿನಗಳ ಹಿಂದೆ ಭಾರಿ ಗಾಳಿ ಬೀಸಿದ್ದರೂ ಇಲ್ಲಿ ಯಾವುದೇ ಮರಗಳು ಉರುಳಿರಲಿಲ್ಲ.  ಆದರೆ, ಮಟಮಟ ಮಧ್ಯಾಹ್ನ ಈ ಮರ ಉರುಳಿ ಬಿದ್ದಿರುವುದು ಪೊಲೀಸರಿಗೂ ದಿಗಿಲು ಉಂಟು ಮಾಡಿದೆ.

ಘಟನೆಯ ಮಾಹಿತಿ ತಿಳಿದ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ ಭೇಟಿ ನೀಡಿದ್ದಾರೆ.  ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿ ಕೊಟ್ಟಿದ್ದಾರೆ.

 

 

ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

ಹೊಸ ಪೋಸ್ಟ್‌