ವಿಜಯಪುರ: ರಾಷ್ಟ್ರಭಕ್ತಿ(Patriotism) ಹಾಗೂ ಮೌಲ್ಯಯುತ(Valuable) ರಾಜಕಾರಣಕ್ಕೆ(Politics) ಬಿಜೆಪಿ(BJP) ಹೆಸರು ಅನ್ವರ್ಥಕ ಎಂದು ಬಿಜೆಪಿ ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ(Chandrashekhar Kawatagi) ಹೇಳಿದ್ದಾರೆ.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಬಿಜೆಪಿ ನೂತನ ಕಚೇರಿಯ ಸಭಾಂಗಣದಲ್ಲಿ ನಡೆದ ಬಿಜೆಪಿ ಸಂಸ್ಥಾಪನೆ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಪಕ್ಷ. ಇಲ್ಲಿರುವ ಕಾರ್ಯಕರ್ತರು ಒಂದೇ ವಿಚಾರ ಹೊಂದಿರುವ ಪರಿವಾರ’ದ ಸದಸ್ಯರು. ಬಿಜೆಪಿ ದೇಶಭಕ್ತಿ, ಸ್ವದೇಶಿ ಸಿದ್ಧಾಂತಗಳನ್ನೇ ನೆಚ್ಚಿಕೊಂಡಿದೆ ಎಂದು ಹೇಳಿದರು.
ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಹಿರಿಯ ನಾಯಕರ ಪರಿಶ್ರಮ ತ್ಯಾಗದಿಂದ ಬಿಜೆಪಿ ದೇಶಾದ್ಯಂತ ಬಲಿಷ್ಠವಾಗಿ ಬೆಳೆದು ನಿಂತಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಕೇಂದ್ರ ಸರಕಾರದವರೆಗೆ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ದೇಶ ಪ್ರೇಮ ಹಾಗೂ ಸಿದ್ಧಾಂತದ ತಳಹದಿಯಲ್ಲಿ ಸ್ಥಾಪನೆಯಾದ ಜನಸಂಘದ ಆದರ್ಶದ ಹಾದಿಯಲ್ಲಿ ಬಿಜೆಪಿ ಸಾಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಜಿ ಅವರ ಸಾರಥ್ಯದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿರುವುದು ಹೆಮ್ಮೆಯ ಸಂಗತಿ. ಬಲಿಷ್ಠವಾಗಿರುವ ಪಕ್ಷ ಸಂಘಟನೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಕಾರ್ಯ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸತೀಶ ಢೋಬಳೆ, ರವಿಕಾಂತ ಬಗಲಿ, ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ರಾಕೇಶ ಕುಲಕರ್ಣಿ, ಮಲ್ಲಮ್ಮ ಜೋಗೂರ, ಛಾಯಾ ಮಶಿಯಣ್ಣವರ, ರಾಜಕುಮಾರ ಸಗಾಯಿ, ಅಲ್ತಾಫ್ ಇಟಗಿ, ರಾಜೇಶ್ ತವಸೆ , ಭರತ ಕೋಳಿ, ಪಾಪುಸಿಂಗ ರಜಪೂತ, ಆನಂದ ಮುಚ್ಚಂಡಿ, ಬಸವರಾಜ ಬೈಚಬಾಳ, ಸೋಮು ಮಠ, ಶೇಖರ ಬಾಗಲಕೋಟ, ಅನಿಲ ಉಪ್ಪಾರ, ಅವಿನಾಶ ಹೆರಲಗಿ, ಸಂದೀಪ ಪಾಟೀಲ, ಬಸವರಾಜ ಗೊಳಸಂಗಿ, ಚಂದ್ರು ಚೌದರಿ, ರಮೇಶ್ ವರ್ಕರ, ಬಾಬು ಶಿರಶ್ಯಾಡ, ಪುಟ್ಟು ಸಾವಳಗಿ, ಅಬ್ದುಲ ಸತ್ತಾರ, ಮಂಥನ ಗಾಯಕವಾಡ, ಪ್ರವೀಣ ಹುಡುಗಿ. ರಾಜು ವಾಲಿ. ಸಿದ್ಧರಾಮಯ್ಯ ಮಲ್ಲಿಕಾರ್ಜುಮನಠ, ವಿನಾಯಕ ಗೌಳಿ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.