ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರಿಂದ ಗುರುವಾರ ಬಬಲೇಶ್ವರ ಮತಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿಜಯಪುರ: ಕೆಪಿಸಿಸಿ(KPCC) ಪ್ರಚಾರ(Campaign) ಸಮಿತಿ(Committee) ಅಧ್ಯಕ್ಷ(Chairman) ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ಅವರು ಏ. 7 ರಂದು ಗುರುವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಶೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. 

ಬೆ.10ಕ್ಕೆ ಬಬಲೇಶ್ವರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 14 ಲಕ್ಷ ವೆಚ್ಚದ ಸುಸಜ್ಜಿತ ಆ್ಯಂಬುಲೇನ್ಸ್ ವಾಹನ ಸಾರ್ವಜನಿಕ ಸೇವೆಗೆ ನೀಡಲಿದ್ದಾರೆ.  ಬೆ. 11ಕ್ಕೆ ಅಗಸನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರೂ. 30.12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ  500 ಮೀ. ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವರು.  ಬೆ. 11.30ಕ್ಕೆ ಯಕ್ಕುಂಡಿಯಲ್ಲಿ ಆರ್ ಡಬ್ಲೂ ಎಸ್ ಜೆ ಜೆ ಯೋಜನೆಯಡಿ ರೂ.71 ಲಕ್ಷ ವೆಚ್ಚದಲ್ಲಿ ಹಾಗೂ ಮ. 12ಕ್ಕೆ ಹಲಗಣಿಯಲ್ಲಿ ರೂ.85 ಲಕ್ಷ ವೆಚ್ಚದಲ್ಲಿ ಗ್ರಾಮಗಳ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಮ.1ಕ್ಕೆ ಜೈನಾಪುರದಲ್ಲಿ ಆರ್ ಡಬ್ಲೂ ಎಸ್‍ ಇಲಾಖೆಯಿಂದ ರೂ.3.17 ಕೋ. ವೆಚ್ಚದಲ್ಲಿ ಜೈನಾಪುರ, ಬೆಳ್ಳುಬ್ಬಿ ಮತ್ತು ಹೊಳೆಹಂಗರಗಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಭೂಮಿ ಪೂಜೆ ಮಾಡಲಿದ್ದಾರೆ.  ನಂತರ ಜೈನಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ರೂ. 1.68 ಕೋ. ವೆಚ್ಚದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಸಂ. 5ಕ್ಕೆ ಹೊಸೂರ ಕೃಷ್ಣಾನಗರ ಜೆಜೆಎಂ ಯೋಜನೆಯಡಿ ರೂ. 89 ಲಕ್ಷ ವೆಚ್ಚದಲ್ಲಿ ಮತ್ತು ಸಂ. 6ಕ್ಕೆ ಚಿಕ್ಕಗಲಗಲಿಯಲ್ಲಿ ರೂ.1.37 ಕೋ. ವೆಚ್ಚದ ಮನೆ-ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಿದ್ದಾರೆ.  ನಂತರ ಲೋಕೋಪಯೋಗಿ ಇಲಾಖೆಯಿಂದ ರೂ. 63.93 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿಕ್ಕಗಲಗಲಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌