ರಾಯಚೂರು ಜಿಲ್ಲೆಯಲ್ಲಿ 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ- ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ಡಿಬಾರ, ಕೇಸ್ ದಾಖಲು, ಹಲವರಿಗೆ ಶಿಕ್ಷೆ
ವಿಜಯಪುರ: ರಾಯಚೂರು+Raichur) ಜಿಲ್ಲೆಯಲ್ಲಿ(District) ಬುಧವಾರ(Wednesday) ಸಮಾಜ ವಿಜ್ಞಾನ(Social Science) ಪ್ರಶ್ನೆ ಪತ್ರಿಕೆ(Question Paper) ಸೋರಿಕೆಯಾಗಿತ್ತು. ಈಗ ಅದರ ಲಿಂಕ್ ವಿಜಯಪುರ ಜಿಲ್ಲೆಯಲ್ಲಿ ಪತ್ತೆಯಾಯ್ತು. ಹೌದು. ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದ್ದು, ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ. ಬುಧವಾರ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಮೊಲೈಲ್ ವಾಟ್ಸಾಪ್ […]
ಎಂ ಎಲ್ ಸಿ ಅರುಣ ಶಹಾಪುರ ಅವರಿಗೆ ಪತ್ರ ಬರೆದ ಶಿಕ್ಷಣ ಸಚಿವರು- ಲೆಟರ್ ನಲ್ಲಿ ಏನಿದೆ ಗೊತ್ತಾ?
ವಿಜಯಪುರ: ಶಿಕ್ಷಣ(Education) ಸಚಿವ(Minister) ಬಿ. ಸಿ. ನಾಗೇಶ(B C Nagesh) ವಿಧಾನ ಪರಿಷತ ಶಿಕ್ಷಕರ ಕ್ಷೇತ್ರದ ಶಾಸಕ(MLC) ಅರುಣ ಶಹಾಪುರ(Arun Shahapur) ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಾನಾ ವಿಚಾರಗಳನ್ನು ಶಿಕ್ಷಣ ಸಚಿವರು ಪ್ರಸ್ತಾಪಿಸಿದ್ದು, ಕೋರಿಕೆಯನ್ನು ಸಲ್ಲಿಸಿದ್ದಾರೆ. ಸಚಿವರ ಪತ್ರದಲ್ಲಿರುವದ ಸಂಪೂರ್ಣ ಸಾರ ಇಲ್ಲಿದೆ. ಆದರಣೀಯ ಜನಪ್ರಿಯ ಶಾಸಕರಾದ ಶ್ರೀ ಅರುಣ್ ಶಹಾಪುರ ಅವರೇ.. ಕೋವಿಡ್-19 ಕಾರಣ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೇ ಕಲಿಕೆಯಲ್ಲಿ ಹಿನ್ನಡೆಯಾಗಿರುವುದು ತಮಗೆ ತಿಳಿದ ಸಂಗತಿಯಾಗಿದೆ. […]
ಧ್ವನಿವರ್ಧಕಗಳ ಬಳಕೆ ಮಾನದಂಡ ಎಲ್ಲ ಸಮುದಾಯದವರಿಗೂ ಒಂದೇ ಆಗಿರಲಿ- ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಆಜಾಂ(Azan) ಹೆಸರಿನಲ್ಲಿ(Name) ಧ್ವನಿವರ್ಧಕಗಳ(Loud Speakers) ಬಳಕೆ(Use) ಕುರಿತು ಸರಕಾರ(Government) ಅನುಸರಿಸುತ್ತಿರುವ ಮಾನದಂಡ ಎಲ್ಲ ಸಮುದಾಯದವರ ಲೌಡ್ ಸ್ಪೀಕರ್ ಬಳಕೆಗೂ ಅನ್ವಯಿಸಬೇಕು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಮುಖಂಡರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು. ಧ್ವನಿವರ್ಧಕಗಳಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದ್ದರೆ ಯಾವುದೇ ಧರ್ಮದವರಾಗಲಿ ಲೌಡ್ ಸ್ಪೀಕರ್ ಧ್ವನಿಯನ್ನು ಕಡಿಮೆ ಮಾಡುವ ಮೂಲಕ ಸಹಬಾಳ್ವೆ […]
ಆಡಳಿತ ವೈಫಲ್ಯ ಮುಚ್ಚಿ ಹಾಕಲು ಬಿಜೆಪಿ ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದ ಎಂ ಬಿ ಪಾಟೀಲ
ವಿಜಯಪುರ: ರಾಜ್ಯ(State) ಸರಕಾರ(Government) ಆಡಳಿತ(Administration) ವೈಫಲ್ಯವನ್ನು(Failure) ಮುಚ್ಚಿ ಹಾಕಲು ಬಿಜೆಪಿ(BJP) ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲವೂ ಅತಿರೇಕವಾಗಿದೆ. ನಿಮ್ಮ ಮತದ ಆಸೆಗಾಗಿ, ಮತಗಳ ಕ್ರೂಢಿಕರಣಕ್ಕಾಗಿ ಹಿಜಾಬು, ಹಲಾಲು, ಆಜಾಂ, ಕಾಶ್ಮೀರಿ ಫೈಲ್ಸ್ ಸೇರಿದಂತೆ ಒಂದೊಂದೆ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಬೆಂಕಿ ಹಚ್ಚುವ ಕೆಲಸ ಬಹಳ ಸರಳವಿದೆ. ಆದರೆ, ಸಾಮಾಜಿಕ ಸಾಮರಸ್ಯ ಕೆಡಿಸಿದರೆ ಇದು ಅವರಿಗೆ […]