ಆಡಳಿತ ವೈಫಲ್ಯ ಮುಚ್ಚಿ ಹಾಕಲು ಬಿಜೆಪಿ ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದ ಎಂ ಬಿ ಪಾಟೀಲ

ವಿಜಯಪುರ: ರಾಜ್ಯ(State) ಸರಕಾರ(Government) ಆಡಳಿತ(Administration) ವೈಫಲ್ಯವನ್ನು(Failure) ಮುಚ್ಚಿ ಹಾಕಲು ಬಿಜೆಪಿ(BJP) ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲವೂ ಅತಿರೇಕವಾಗಿದೆ.  ನಿಮ್ಮ ಮತದ ಆಸೆಗಾಗಿ, ಮತಗಳ ಕ್ರೂಢಿಕರಣಕ್ಕಾಗಿ ಹಿಜಾಬು, ಹಲಾಲು, ಆಜಾಂ, ಕಾಶ್ಮೀರಿ ಫೈಲ್ಸ್ ಸೇರಿದಂತೆ ಒಂದೊಂದೆ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ.  ಬೆಂಕಿ ಹಚ್ಚುವ ಕೆಲಸ ಬಹಳ ಸರಳವಿದೆ.  ಆದರೆ, ಸಾಮಾಜಿಕ ಸಾಮರಸ್ಯ ಕೆಡಿಸಿದರೆ ಇದು ಅವರಿಗೆ ತಿರುಗುಬಾಣವಾಗಲಿದೆ.  ಇದರಿಂದ ದೇಶ ಮತ್ತು ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ.  ಎಲ್ಲಿ ಇಂಥ ವಾತಾವರಣ ಇರುತ್ತದೆಯೋ, ಎಲ್ಲಿ ಸಾಮರಸ್ಯ ಇರುವುದಿಲ್ಲವೋ ಹೂಡಿಕೆದಾರರು, ಉದ್ದಿಮೆಗಳು ಬರಲು ಹಿಂಜರಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಹೈದರಾಬಾದಿನಲ್ಲಿ ಕೋಮು ಗಲಭೆ ಹೆಚ್ಚಾಗಿವೆ ಎಂದು ಉದ್ದಿಮೆಗಳು ಅಲ್ಲಿಗೆ ಹೋಗುತ್ತಿರಲಿಲ್ಲ.  ಬೆಳಗಾವಿಯಲ್ಲಿ ಗಡಿ ವಿವಾದ ಇದೆ.  ಗಲಭೆ ಆಗುತ್ತದೆ ಎಂಬ ಕಾರಣಕ್ಕೆ ಯಾರೂ ಅಲ್ಲಿಗೆ ಉದ್ದಿಮೆ ಸ್ಥಾಪಿಸುತ್ತಿರಲಿಲ್ಲ.  ಈಗ ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ ಎಂಬ ಕಾರಣಕ್ಕೆ ಸಾಪ್ವೇವೇರ್ ಕಂಪನಿಗಳು ಇಲ್ಲಿಗೆ ಬಂದಿವೆ.  ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕಾರಣಕ್ಕೆ ಹೂಡಿಕೆದಾರರು ಇಲ್ಲಿಗೆ ಬಂದಿದ್ದಾರೆ.  ಆದರೆ, ಈಗ ಯಾರೂ ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.  ಏನೇ ವಿಷಯಗಳು ಬಂದಾಗ ಕುಳಿತುಕೊಂಡು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು.  ಅದನ್ನು ಬಿಟ್ಟು ರಾಜಕೀಯಕರಣಗೊಳಿಸುವುದು ಸರಿಯಲ್ಲ.  ಇದು ಅತೀಯಾಗಿದೆ.  ನಾನೂ ಗೃಹ ಸಚಿವನಾಗಿದ್ದೆ.  ಗೃಹ ಸಚಿವರ ನೀಡುವ ದಿಢೀರ್ ಹೇಳಿಕೆಗಳು ಬಹಳ ಪರಿಣಾಮ ಬಿರುತ್ತವೆ. ಯಾವಾಗಲೂ ಪ್ರಚೋದನೆ ನೀಡುವ ಕೆಲಸ ಆಗಬಾರದು.  ಈ ವಿದ್ಯಮಾನಗಳು ಸರಿಯಲ್ಲ.  ಶಾಲಾಮಟ್ಟದಿಂದಲೇ ಸಾಮರಸ್ಯ ಕೆಡಿಸುತ್ತಿರುವುದು ದುರ್ದೈವ.  ಇದರ ಪರಿಣಾಮ ದೀರ್ಘವಾಗಿರಲಿದೆ ಎಂದು ಅವರು ಆರೋಪಿಸಿದರು.

ಬದುಕು ಕಟ್ಟುವ ಕೆಲಸವಾಗಬೇಕಿದೆ

ಬದುಕನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ.  ಇಲ್ಲಿ ಅಭಿವೃದ್ಧಿಯಾಗುತ್ತಿಲ್ಲ.  ಸರಕಾರದಲ್ಲಿ ಹಣವಿಲ್ಲ.  ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಈಗ ಸಾಮಾಜಿಕ ಸ್ವಾಸ್ತ್ಯ ಹದಗೆಡಿಸುವ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ.  ಹಸಿದವನಿಗೆ ಅನ್ನಬೇಕು.  ರೈತರಿಗೆ ನೀರು ಮತ್ತು ವಿದ್ಯುಚ್ಚಕ್ತಿ ಬೇಕು.  ವ್ಯಾಪಾರಿಗಳೂ ಕೂಡ ಕಂಗಾಲಾಗಿದ್ದಾರೆ.  ಮಧ್ಯಮ ವರ್ಗದವರು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಹೆಚ್ಚಳದಿಂದ ಹೈರಾಣಾಗಿದ್ದಾರೆ.  ಆದರೆ, ಬೆಲೆಏರಿಕೆಗೆ ತಕ್ಕಂತೆ ನೌಕರರ ವೇತನ ಹೆಚ್ಚಾಗಿಲ್ಲ.  ಮಧ್ಯಮವರ್ಗದವರು, ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಬಡವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.  ಇದನ್ನು ಎಲ್ಲರೂ ಗಮನಿಸಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಲ್ಲರೂ ಕೂಡ ಸಹಬಾಳ್ವೆ ಮಾಡಿ ಅಭಿವೃದ್ಧಿಯ ಕಡೆಗೆ ದೇಶ ಸಾಗಿತ್ತು.  ಜವಾಹರಲಾಲ ನೆಹರು ಅವರಿಂದ ಹಿಡಿದು ಲಾಲ್ ಬಹಾದ್ದೂರ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಪಿ. ವಿ. ನರಸಿಂಹರಾವ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ವಿದೇಶಿ ಬಂಡವಾಳ ಹರಿದು ಬರಲು ಭದ್ರ ಬುನಾದಿ ಹಾಕಿದ್ದರು.  ಇದರಿಂದ ವಿದೇಶಿ ಬಂಡವಾಳ ಹರಿದು ಬರುತ್ತಿತ್ತು.  ಆದರೆ, ಬಿಜೆಪಿ ಇದನ್ನು ಹಾಳು ಮಾಡಿದೆ.  ಈಗ ಶ್ರೀಲಂಕಾದ ಪರಿಸ್ಥಿತಿ ಎಲ್ಲಿರಗೂ ಗೊತ್ತಿದೆ.  ಭಾರತ ಶ್ರೀಲಂಕಾ ಆಗಬಾರದು.  ಆ ಪರಿಸ್ಥಿತಿಗೆ ಭಾರತವನ್ನು ಇವರು ನೂಕುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ಆರೋಪಿಸಿದರು.

ಸರಕಾರದ ವಿರುದ್ಧ ವಾಗ್ದಾಳಿ

ಸಚಿವ ಸಂಪುಟ ವಿಸ್ತರಣೆ ಬಿಜೆಪಿ ಆಂತರಿಕ ವಿಚಾರ.  ಇಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೆ, ಸಂಪುಟ ವಿಸ್ತರಣೆಯತ್ತ ಗಮನ ಹರಿಸಿದ್ದಾರೆ.  ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ. ಸಿದ್ಧರಾಮಯ್ಯ ಅವರು ಹೇಳಿದಂತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ರಾಜ್ಯ ಸರಕಾರದ ಸಾಲ ರೂ. 2.50 ಲಕ್ಷ ಕೋ. ಇತ್ತು.  ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ ರೂ. 5 ಲಕ್ಷ ಕೋ. ಗೆ ಹೆಚ್ಚಾಗಿದೆ.  ಇದರ ಪರಿಣಾಮ ನಾನಾ ಇಲಾಖೆಗಳಲ್ಲಿ ಮಂಜೂರಾಗಿರುವ ಶೇ. 40 ರಷ್ಟು ಹುದ್ದೆಗಳು ಖಾಲಿ ಇವೆ.  ಈ ಹುದ್ದೆಗಳನ್ನು ಭರ್ತಿ ಮಾಡಿ ಸಾಲ ಮರುಪಾವತಿಸಿದರೆ ಬೇರೆ ರಾಜ್ಯಗಳ ದುಸ್ಥಿತಿ ಕರ್ನಾಟಕಕ್ಕೂ ಬರಲಿದೆ.  ಸಿಬ್ಬಂದಿಗೆ ವೇತನ ಪಾವತಿ, ಸಾಲದ ಬಡ್ಡಿ ಪಾವತಿಸುವುದಕ್ಕೆ ಹಣ ಖರ್ಚಾಗುತ್ತಿದೆ.  ಇದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.  ಈ ನಿಟ್ಟಿನಲ್ಲಿ ನಮ್ಮ ದೇಶ ಮತ್ತು ರಾಜ್ಯ ಹೋಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಈಗ ಜನರಿಗೆ ಇವರ ವರ್ತನೆ ಗೊತ್ತಾಗಿದೆ.  ಇವರು ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದನ್ನು ಜನ ತಿಳಿದು ಬೇಸರಪಟ್ಟುಕೊಂಡಿದ್ದಾರೆ.  ಇವರು ಮತ ರಾಜಕಾರಣಕ್ಕೆ ಈ ಕೆಲಸ ಮಾಡುತ್ತಿದ್ದಾರೆ.  ರಾಜ್ಯ ಸರಕಾರದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಇದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.  ಇದನ್ನು ನಾವು ಹೇಳಿಲ್ಲ.  ನಾ ಖಾವೂಂಗಾ, ನಾ ಖಾನೆ ದೂಂಗಾ ಎನ್ನುವವರು ಮತ್ತೇಕೆ ಸುಮ್ಮನೆ ಕುಳಿತಿದ್ದೀರಿ? ಮೌನಂ ಸಮ್ಮತಿ ಲಕ್ಷಣಂ ಅಂತಾರೆ.  ಬೇರೆಯವರಿಗಾದರೆ ಸಿಬಿಐ ಇಡಿ ಧಾಳಿ ಮಾಡಿಸುತ್ತೀರಿ? 40 ಪರ್ಸೆಂಟ್ ಭ್ರಷ್ಟಾಚಾರ ನಡೆದಿರುವ ಕಡೆ ಯಾಕೆ ಮೋದಿಯವರು ಸಿಬಿಐ, ಇಡಿ ಧಾಳಿ ನಡೆಸುತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.

ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳಿಗೆ ನೆರವು

ಈ ಮಧ್ಯೆ, ರಷ್ಯಾ ಯುದ್ಧದಲ್ಲಿ ಅನೇಕ ಭಾರತೀಯರು ಉಕ್ರೇನಿನಲ್ಲಿ ವೈದ್ಯಕೀಯ ಮತ್ತೀತರ ಶಿಕ್ಷಣ ಪಡೆದುಕೊಳ್ಳುತ್ತಿದ್ದರವರು ಈಗ ಅತಂತ್ರರಾಗಿದ್ದಾರೆ.  ಉಕ್ರೇನಿನಿಂದ ವಿಜಯಪುರಕ್ಕೆ ಮರಳಿರುವ 17 ಜನ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬುಧವಾರ ನನ್ನನ್ನು ಭೇಟಿ ಮಾಡಿದ್ದರು.  ಮೊದಲನೆಯದಾಗಿ ಈಗಾಗಲೇ ಎಲ್ಲ ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಉಳಿದ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಲ ಮಾತ್ರ ಒಂದು ಸಲ ನೆರವು ಅಂದರೆ ಒನ್ ಟೈಮ್ ಮೀಸರ್, ಓವರ್ ಆ್ಯಂಡ್ ಅಬವ್ ದಿ ಇನ್‌ ಟೆಕ್ ನಡಿ ಈ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಿದೆ.  ರಾಜ್ಯ ಸರಕಾರ ಕೂಡ ಈ ನಿಟ್ಟಿನಲ್ಲಿ ಶಿಫಾರಸು ಮಾಡಬೇಕು.  ಕೇಂದ್ರ ಸರಕಾರ ಕೂಡ ಈ ಕೆಲಸ ಮಾಡಬೇಕು.  ಇಲ್ಲಿ ರಾಜ್ಯ ಸರಕಾರಕ್ಕಿಂತ ಕೇಂದ್ರ ಸರಕಾರದ ಜವಾಬ್ದಾರಿ ಹೆಚ್ಚಾಗಿದೆ.  ನಾನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಲ್ಲರೂ ಒಟ್ಟಾಗಿ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿಯಾಗುವಂತೆ ಹೇಳಿದ್ದೇನೆ.  ಪ್ರಸಂಗ ಬಂದರೆ ಪ್ರಧಾನಿಯನ್ನು ಭೇಟಿ ಮಾಡಿ ನಿಮ್ಮ ಅಳಲಿಗೆ ಸ್ಪಂದಿಸುವಂತೆ ಮನವಿ ಮಾಡಲು ಸಲಹೆ ನೀಡಿದ್ದೇನೆ.  ನಾನೂ ಕೂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಈ ಕುರಿತು ಮಾತನಾಡುವುದಾಗಿ ತಿಳಿಸಿದ್ದೇನೆ.  ಇದು ಒಂದು ಪರಿಹಾರವಾದರದೆ, ಐಎಂಎ ಮತ್ತು ಇನ್ನಿತರರು ಇದನ್ನು ವಿರೋಧಿಸುತ್ತಿದ್ದಾರೆ.  ನೀಟ್ ನಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ.  ಒನ್ ಟೈಮ್ ಮೀಸರ್ ತೆಗೆದುಕೊಂಡಾಗ ನೀಟ್ ರ್ಯಾಂಕಿಂಗ್ ಪ್ರಶ್ನೆ ಬರುವುದಿಲ್ಲ.  ಯುದ್ಧದ ಪರಿಸ್ಥಿತಿಯಲ್ಲಿ ವಿನಾಯಿತಿ ಇರಬೇಕು.  ಇದರಿಂದ ಕಾಲೇಜಿನವರಿಗೂ ಯಾವುದೇ ಭಾರ ಆಗುವುದಿಲ್ಲ.  ಈಗಾಗಲೇ ಈ ವಿದ್ಯಾರ್ಥಿಗಳು ಮತ್ತು ಪೋಷಕರಲು ಸಾಕಷ್ಟು ದುಡ್ಡು ಕಳೆದುಕೊಂಡಿದ್ದಾರೆ.  ಅವರಿಗೆ ಉಚಿತವಾಗಿ ಶಿಕ್ಷಣ ನೀಡಬೇಕಾಗುತ್ತದೆ.  ಇದನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕಿದೆ ಎಂದು ಶಾಸಕರು ತಿಳಿಸಿದರು.

ಇದನ್ನೂ ಓದಿಛ

ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ

 

ವಿದ್ಯಾರ್ಥಿಗಳು ತಾವು ಮನೆಯಲ್ಲಿ ಕುಳಿತುಕೊಂಡಿದ್ದು, ಲೈಬ್ರರಿ ಸೌಲಭ್ಯ ಕೇಳಿದ್ದಾರೆ.  ನಾನು ಈಗಾಗಲೇ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮತ್ತು ಪ್ರಾಚಾರ್ಯ ಅರವಿಂದ ಪಾಟೀಲ ಅವರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಉಚಿತವಾಗಿ ಲೈಬ್ರರಿಯಲ್ಲಿ ಅಧ್ಯಯನ ಮಾಡಲು ಅನುಮತಿ ನೀಡಲು ಸೂಚಿಸಿದ್ದೇನೆ.  ತರಗತಿಗಳಿಗೆ ಹಾಜರಾಗಲು ಹೇಳಿದ್ದೇನೆ.  ಅಲ್ಲಿಯ ಪಠ್ಯಕ್ರಮ ಇಲ್ಲಿಯ ಪಠ್ಯಕ್ರಮ ಪರಿಶೀಲಿಸಿ ಮಾನವೀಯ ನೆಲೆಗಟ್ಟಿನಲ್ಲಿ ಕ್ಲಾಸುಗಳನ್ನು ತೆಗೆದುಕೊಳ್ಳಲು ಹೇಳಿದ್ದೇನೆ.  ಅವರಿಗೆ ಡೆಡಿಕೇಟೆಡ್ ಶಿಕ್ಷಕರನ್ನು ಹಾಕಿ ಪಠ್ಯ ಬೋಧಿಸಲು ಹೇಳಿದ್ದೇನೆ ಎಂದು ಎಂ. ಬಿ. ಪಾಟೀಲ ಅವರು ತಿಳಿಸಿದರು.

Leave a Reply

ಹೊಸ ಪೋಸ್ಟ್‌