ಎಂ ಎಲ್ ಸಿ ಅರುಣ ಶಹಾಪುರ ಅವರಿಗೆ ಪತ್ರ ಬರೆದ ಶಿಕ್ಷಣ ಸಚಿವರು- ಲೆಟರ್ ನಲ್ಲಿ ಏನಿದೆ ಗೊತ್ತಾ?

ವಿಜಯಪುರ: ಶಿಕ್ಷಣ(Education) ಸಚಿವ(Minister) ಬಿ. ಸಿ. ನಾಗೇಶ(B C Nagesh) ವಿಧಾನ ಪರಿಷತ ಶಿಕ್ಷಕರ ಕ್ಷೇತ್ರದ ಶಾಸಕ(MLC) ಅರುಣ ಶಹಾಪುರ(Arun Shahapur) ಅವರಿಗೆ ಪತ್ರ ಬರೆದಿದ್ದಾರೆ.  ಈ ಪತ್ರದಲ್ಲಿ ನಾನಾ ವಿಚಾರಗಳನ್ನು ಶಿಕ್ಷಣ ಸಚಿವರು ಪ್ರಸ್ತಾಪಿಸಿದ್ದು, ಕೋರಿಕೆಯನ್ನು ಸಲ್ಲಿಸಿದ್ದಾರೆ.

ಸಚಿವರ ಪತ್ರದಲ್ಲಿರುವದ ಸಂಪೂರ್ಣ ಸಾರ ಇಲ್ಲಿದೆ.

ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರು ಎಂ ಎಲ್ ಸಿ ಅರುಣ ಶಹಾಪುರ ಅವರಿಗೆ ಬರೆದಿರುವ ಪತ್ರ
ಆದರಣೀಯ ಜನಪ್ರಿಯ ಶಾಸಕರಾದ ಶ್ರೀ ಅರುಣ್‌ ಶಹಾಪುರ ಅವರೇ..

ಕೋವಿಡ್-19 ಕಾರಣ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೇ ಕಲಿಕೆಯಲ್ಲಿ ಹಿನ್ನಡೆಯಾಗಿರುವುದು ತಮಗೆ ತಿಳಿದ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು 2022-23ನೇ ಶೈಕ್ಷಣಿಕ ವರ್ಷದಲ್ಲಿ ‘ಕಲಿಕಾ ಚೇತರಿಕೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಭವಿಷ್ಯದ ಪ್ರಜೆಗಳ ಬದುಕು ರೂಪಿಸುವ ಶಿಕ್ಷಣ ಕ್ಷೇತ್ರದಲ್ಲಿ ಕಲಿಕಾ ಅಂತರವನ್ನು ಸರಿದೂಗಿಸುವ ಕಲಿಕಾ ಚೇತರಿಕೆ ಕಾರ್ಯಕ್ರಮವು ಮಹತ್ವದ್ದಾಗಿದೆ.

ಈ ಕಾರ್ಯಕ್ರಮದಡಿ 2022-23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕಾ’ ವರ್ಷ ಎಂದು ಘೋಷಿಸಲಾಗಿದೆ. ಇದರಡಿ ವಿದ್ಯಾರ್ಥಿಯ ಹಿಂದಿನ ಎರಡು ತರಗತಿಗಳ ಪ್ರಮುಖ ಕಲಿಕಾಂಶಗಳು, ಓದು, ಬರಹ ಮತ್ತು ಲೆಕ್ಕಾಚಾರಕ್ಕೆ ಸಂಬಂಧಿಸಿದ ಬುನಾದಿ ಕಲಿಕಾ ಅಂಶಗಳ ಜೊತೆ ಆಯಾ ವರ್ಷಕ್ಕೆ ನಿಗದಿಪಡಿಸಿದ ಪ್ರಮುಖ ಮತ್ತು ಅಗತ್ಯವಾದ ಕಲಿಕಾ ಅಂಶಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಸಲು ಕ್ರಮವಹಿಸಲಾಗುವುದು. ಇದಕ್ಕಾಗಿ ಶಿಕ್ಷಕರ ಸಂಪನ್ಮೂಲ ಕೈಪಿಡಿ ಮತ್ತು ವಿದ್ಯಾರ್ಥಿಗಳಿಗೆ ಚಟುವ ಹಾಳೆಗಳನ್ನು ಸಿದ್ದಪಡಿಸಿ, ಪೂರೈಸಲಾಗುತ್ತಿದೆ. ಎಲ್ಲಾ ಶಿಕ್ಷಕರಿಗೆ ಈ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ.

ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮಕ್ಕೆ ನಾನು

ದಿನಾಂಕ: 18.03.2022ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿರುತ್ತೇನೆ. ತಾವು ತಮ್ಮ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆಯುವ ಅಧಿಕಾರಿಗಳು/ಶಿಕ್ಷಕರ ಸಭೆ, ತರಬೇತಿಗಳನ್ನು ಉದ್ಘಾಟಿಸಲು ಕೋರುತ್ತೇನೆ. ತಮ್ಮ ಕ್ಷೇತ್ರದ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪೋಷಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡಲು ಕೋರುತ್ತೇನೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಅಂತರವನ್ನು ಕಡಿಮೆಗೊಳಿಸಲು ತಾವು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಲು ಈ ಮೂಲಕ ತಮ್ಮನ್ನು ಕೋರುತ್ತೇನೆ. ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೆಚ್ಚಿನ ವಿವರವನ್ನು ಈ ಪತ್ರದೊಂದಿಗೆ ತಮ್ಮ ಮಾಹಿತಿಗಾಗಿ ಅಡಕಗೊಳಿಸಲಾಗಿದೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

                                                                                              ಬಿ. ಸಿ. ನಾಗೇಶ.
                                                                      ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರು.

 

ಅರುಣ ಶಹಾಪುರ ಬಿಜೆಪಿ ಶಾಸಕರಾಗಿದ್ದು, ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಶೈಕ್ಷಣಿಕ ಜಿಲ್ಲೆಗಳನ್ನೊಳಗೊಂಡ ವಿಧಾನ ಪರಿಷತ ಶಿಕ್ಷಕರ ಕ್ಷೇತ್ರದ ಸದಸ್ಯರಾಗಿದ್ದಾರೆ.

One Response

  1. Appriciable job

Leave a Reply

ಹೊಸ ಪೋಸ್ಟ್‌