ಗುಮ್ಮಟ ನಗರಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಟಾಂಗಾ ಸವಾರಿ ಮೂಲಕ ರೂಟ್ ಮ್ಯಾಪ್ ರೂಪಿಸಿದ ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಪಿ. ಸುನೀಲ ಕುಮಾರ(P Sunil Kumar) ರಜಾ ದಿನಗಳಲ್ಲಿಯೂ ಸಕ್ರೀಯರಾಗಿ(Active) ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯೋಚಿಸುವ ಚಿಂತನಾಶೀಲ ಅಧಿಕಾರಿ.  ಸಾರ್ವತ್ರಿಕ ರಜಾ ದಿನಗಳಲ್ಲಿ ನಾನಾ ಕಡೆಗಳಲ್ಲಿ ಸಂಚರಿಸಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅವುಗಳಿಗೊಂದು ರೂಪ ನೀಡುವುದು ಮತ್ತು ಹೊಸ ಯೋಚನೆ(New Plan) ಜಾರಿಗೆ ಯೋಜನೆ ರೂಪಿಸುವಲ್ಲಿ ನಿಸ್ಸೀಮರು.  ಈಗ ಎರಡನೇ ಶನಿವಾರವೂ ಕೂಡ ಅಭಿವೃದ್ಧಿ ಸಂಬಂಧಿಸಿದಂತೆ ಇಂಥದ್ದೆ ಒಂದು ಕಾರ್ಯಕ್ರಮ ಮಾಡುವ ಮೂಲಕ ಮತ್ತೆ ಮತ್ತೆ ಗಮನ ಸೆಳೆದಿದ್ದಾರೆ. 

ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರವಾಸೋದ್ಯಮ ರೂಟ್ ಮ್ಯಾಪ್ ತಯಾರಿಗಾಗಿ ಟಾಂಗಾದಲ್ಲಿ ಸಂಚರಿಸಿದರು

ಈ ಬಾರಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೈಗೊಳ್ಳಬೇಕಿರುವ ಕ್ರಮಗಳತ್ತ ಗಮನ ಹರಿಸಿರುವ ಡಿಸಿ, ಟಾಂಗಾ ಹತ್ತಿ ಅದರಲ್ಲಿ ಕುಳಿತುಕೊಳ್ಳುವ ಮೂಲಕ ಪ್ರವಾಸಿ ತಾಣಗಳ ಸಂಚಾರಕ್ಕೆ ಟೂರ್ ಮ್ಯಾಪ್ ರೂಪಿಸಲು ಪ್ರಯತ್ನಿಸಿದ್ದಾರೆ. ಪ್ರತಿ ತಿಂಗಳು ಮೂರನೇ ವಾರ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಿರುವ ಅವರು, ನಾನಾ ಪ್ರವಾಸಿ ತಾಣಗಳಲ್ಲಿ ಕೈಗೊಳ್ಳಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ 6 ಗಂಟೆಯ ಸುಮಾರಿಗೆ ಪ್ರವಾಸಿ ತಾಣಗಳ ಬಳಿ ಕಾಣಿಸಿಕೊಂಡ ಪಿ. ಸುನೀಲ ಕುಮಾರ, ಹೊರ ಊರುಗಳಿಂದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಟಾಂಗಾ ರೂಟ್ ಮ್ಯಾಪ್ ಸಿದ್ಧಪಡಿಸಲು ತಾವೇ ಖುದ್ದಾಗಿ ಪ್ರವಾಸಿ ತಾಣಗಳ ರಸ್ತೆಗಳಲ್ಲಿ ಸಂಚರಿಸಿದರು.

ಟಾಂಗಾ ರೂಟ್ ಗಾಗಿ ಐತಿಹಾಸಿಕ ಗೋಳಗುಮ್ಮಟದಿಂದ ಟಾಂಗಾದಲ್ಲಿ ಸಂಚಾರ ಅರಂಭಿಸಿದ ಅವರು, ಬಾರಾ ಕಮಾನ್, ಜೋಡಗುಮ್ಮಟ, ದಖನಿ ಈದ್ಗಾ, ಇಬ್ರಾಹಿಂ ರೋಜಾ, ತಾಜಬಾವಡಿ, ಉಪ್ಪಲಿ ಬುರುಜ್, ಜುಮ್ಮಾ ಮಸೀದಿ ಸೇರಿದಂತೆ ನಾನಾ ಪ್ರಾಚೀನ ಸ್ಮಾರಕಗಳ ರಸ್ತೆಯಲ್ಲಿ ಖುದ್ದಾಗಿ ಸಂಚರಿಸಿದರು.

 

ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ನಗರದ ರಸ್ತೆಗಳನ್ನು ದುರಸ್ಥಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಪ್ರವಾಸಿಗರಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿದರು.

ಅಷ್ಟೇ ಅಲ್ಲ, ನಾನಾ ಮಾರ್ಗಮಧ್ಯೆ ಸೂಕ್ತ ಸ್ಥಳಗಳಲ್ಲಿ ಟಾಂಗಾ ರೂಟ್ ಮ್ಯಾಮಪ್ ನಿರ್ಮಿಸಿ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೈಡ್ ಗಳನ್ನು ನಿಯೋಜಿಸಬೇಕು.  ಅಲ್ಲದೇ, ಅವರಿಗೂ ಸೂಕ್ತ ತರಬೇತಿ ನೀಡುವವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:

ಸರಕಾರಿ ರಜೆ ದಿನವೂ ವಿಜಯಪುರದಲ್ಲಿ ತಿರುಗಾಡಿ ನಾನಾ ರಸ್ತೆ ಕಾಮಗಾರಿಗಳ ಪರಿಶೀಲಿಸಿದ ಡಿಸಿ ಪಿ. ಸುನೀಲ ಕುಮಾರ

 

ವಿಜಯಪುರ ನಗರದ ಸೌಂದರೀಕರಣ, ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗಾಗಿ ಕಸದ ಸೂಕ್ತ ವಿಲೇವಾರಿಯ ಜೊತೆಗೆ ಸ್ವಚ್ಛತೆಯೂ ಬಹಳ ಅಗತ್ಯವಾಗಿದೆ ಎಂದು ಪಿ. ಸುನೀಲ ಕುಮಾರ ಹೇಳಿದರು.

ಇದಕ್ಕೂ ಮುನ್ನ ಅವರು ಕರಿಮುದ್ದಿನ್ ಮಸೀದಿ, ಕೋಟೆ ಗೋಡೆ ಆವರಣ ಹಾಗೂ ಇತರೆ ಸ್ಮಾರಕಗಳಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹೆರಿಟೇಜ್ ವಾಕ್‍ನಲ್ಲಿ ಪಾಲ್ಗೋಂಡರು.  ನಗರದಲ್ಲಿ ಅದರಲ್ಲೂ ವಿಶೇಷವಾಗಿ ಸ್ಮಾರಕಗಳು ಹಾಗೂ ಕೋಟೆ ಗೋಡೆ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯಕೈಗೊಳ್ಳುವ ಮೂಲಕ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಮಲೋಚಕ ಅನಿಲಕುಮಾರ ಬಣಜಿಗೇರ, ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ, ವಿಠ್ಠಲ್ ಹೊನ್ನಳ್ಳಿ, ಸಮಾಜ ಸೇವಕ ಪೀಟರ್ ಅಲೆಗ್ಸಾಂಡರ್, ಅಮೀನ್ ಹುಲ್ಲೂರ,  ಮಹಾನಗರ ಪಾಲಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌