ಪಂಚ ಮಹಾಭೂತಗಳಿಂದ ಕೂಡಿರುವ ಪ್ರಕೃತಿಯನ್ನು ಮುಂದಿನ ಪೀಳೆಗೆಗೆ ಸಂರಕ್ಷಿಸಬೇಕಿದೆ- ಡಾ. ಮಹಾಂತೇಶ ಬಿರಾದಾರ

ವಿಜಯಪುರ: ಲಕ್ಷಾಂತರ ವರ್ಷಗಳಿಂದ(Million years) ಮಣ್ಣು(Soil), ನೀರು(Water), ಗಾಳಿ(Air) ಸೇರಿದಂತೆ ಪಂಚ ಮಹಾಭೂತಗಳಿಂದ ಕೂಡಿದ ಈ ಪ್ರಕೃತಿಯನ್ನು(Nature) ಮುಂದಿನ ಪೀಳಿಗೆಯ ಬಳಕೆಗೆ ಸಂರಕ್ಷಿಸಬೇಕಿದೆ ಎಂದು ವಿಜಯಪುರ ಸೈಕ್ಲಿಂಗ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದ್ದಾರೆ. 

ಇಶಾ ಫೌಂಡೇಶನ್“ ಮಣ್ಣು ಉಳಿಸಿ”ಅಭಿಯಾನ ಅಂಗವಾಗಿ ವಿಜಯಪುರ ನಗರದಲ್ಲಿ ಬೆಳಿಗ್ಗೆ ಸೈಕಲ್ ಜಾಥಾ ನಡೆಸಿ, ನಂತರ ಗಾಂಧಿ ಚೌಕ್ ಬಳಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.  ಮಣ್ಣು ಪವಿತ್ರವಾದುದು.  ಮನುಷ್ಯನ ಆಹಾರ ಉತ್ಪಾದನೆಯ ಮೂಲವಾಗಿರುವ ಫಲವತ್ತಾಗಿರುವ ಮಣ್ಣನ್ನು ನಾವು ಹಲವು ರಾಸಾಯನಿಕಗಳನ್ನು ಬಳಸಿ, ಹಾಳು ಮಾಡಿದ್ದೇವೆ.  ಇದರಿಂದ ಮಣ್ಣು ಕಲುಷಿತಗೊಂಡು, ಬೆಳೆಗಳು ವಿಷಯುಕ್ತವಾಗಿ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ.  ನೀರಾವರಿ ಹೆಚ್ಚಿದಂತೆ ಅತೀ ನೀರಿನ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿ ಮಣ್ಣಿನಲ್ಲಿ ಕ್ಷಾರ ಹೆಚ್ಚುತ್ತಿದೆ.  ಅಗವಿದ್ದಾಗ ಮಾತ್ರ ನೀರು ಬಳಸಬೇಕು ಎಂದು ಹೇಳಿದರು.

ವಿಜಯಪುರ ನಗರದ ಗಾಂಧಿಚೌಕಿನಲ್ಲಿ ನಡೆದ ಕಾರ್ಯಕ್ರಮ

ಸದ್ಯ ಪುಣೆಯಲ್ಲಿ ನೆಲೆಸಿರುವ ಸಾಗರ ಅವರು ವೃತ್ತಿಯಲ್ಲಿ ಮರಿನ್ ಎಂಜಿನಿಯರ್ ಆಗಿದ್ದು, ಕೊಯಮುತ್ತೂರಿನಿಂದ ಪುಣೆಯವರೆಗೆ 1500 ಕಿ. ಮೀ. ಸೈಕಲ್ ಜಾಗೃತಿ ಜಾಥಾ ನಡೆಸುತ್ತಿದ್ದಾರೆ.  ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಇಶಾ ಫೌಂಡೇಶನ್‍ನ ಬಸವರಾಜ ಗುರುಜಿ ಬಿರಾದಾರ, ಸೈಕ್ಲಿಂಗ್ ಗ್ರುಪ್ ನ ಶಿವನಗೌಡ ಪಾಟೀಲ, ಸೋಮಶೇಖರಸ್ವಾಮಿ, ಶಿವರಾಜ ಪಾಟೀಲ, ಸೋಮು ಮಠ, ಸಮೀರ ಬಳಗಾರ, ಸಂದೀಪ ಮಡಗೊಂಡ, ಡಿ. ಕೆ. ತಾವಸೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿಪರ ರೈತ ಎಸ್. ಟಿ  ಪಾಟೀಲ ಮಣ್ಣಿನ ಕುರಿತು ಗೀತೆ ಹಾಡಿದರು.  ಬೆಳಿಗ್ಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭನಾದ ಸೈಕಲ್ ಜಾಥಾ ವಿಜಯಪುರ ನಗರದ ಪ್ರಮುಖ ನಗರಗಳಲ್ಲಿ ಸಂಚರಿಸಿ, ಗಾಂಧಿ ಚೌಕಿನಲ್ಲಿ ಮುಕ್ತಾಯವಾಯಿತು.

Leave a Reply

ಹೊಸ ಪೋಸ್ಟ್‌