ವಿಜಯಪುರ: ಆರೋಗ್ಯ(Health) ಮತ್ತು ಆಯುಷ್ಯLife) ವೃದ್ಧಿಗೆ ಯೋಗYoga), ಧ್ಯಾನ(Meditation) ಮತ್ತು ಪ್ರಾಣಯಾಮಗಳು ಅಗತ್ಯವಾಗಿವೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶರೀರಶಾಸ್ತ್ರ ವಿಭಾಗ ಯೋಗ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ(Dr. Jyoti Khodnapur) ಹೇಳಿದರು.
ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಎನ್. ಎಸ್. ಎಸ್. ಘಟಕ ಮತ್ತು ಕ್ರೀಡಾ ವಿಭಾಗದ ವತಿಯಿಂದ ಒಂದು ವಾರಗಳ ಕಾಲ ಆಯೋಜಿಸಲಾಗಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮ, ಆರೋಗ್ಯ ಮತ್ತು ಆಯುಷ್ಯ ವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೈ. ಖಾಸನೀಸ ಮಾತನಾಡಿ, ಶರೀರ ಮತ್ತು ಆತ್ಮಶುದ್ಧಿಗಾಗಿ ಯೋಗ ದಿವ್ಯಾಸ್ತ್ರವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಯೋಗ ಬಹು ಉಪಯೋಗಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ರೀಡಾ ವಿಭಾಗದ ದೈಹಿಕ ನಿರ್ದೇಶಕ ಡಾ. ಎಂ. ಎಸ್. ಹಿರೇಮಠ, ಎ. ಎಸ್. ಮಸಳಿ, ಡಾ. ಜ್ಯೋತಿ ಪಟ್ಟಣಶೆಟ್ಟಿ, ಡಾ. ಬಿ. ಎಸ್ ಹಿರೇಮಠ, ಪ್ರೊ. ಸುನೀಲ ಪಾಟೀಲ, ಪ್ರೊ. ಮುಲ್ತಾನಿ, ಪ್ರೊ. ಶೇಗುಣಸಿ, ದಾದಾಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ. ಮಂಜುನಾಥ ಕೋರಿ ಕಾರ್ಯಕ್ರಮ ನಿರೂಪಿಸಿದರು.
ಯೋಗ ತರಬೇತಿಗಾರ ಮಡಿವಾಳಪ್ಪ ದೊಡಮನಿ ಪ್ರಾಣಾಯಾಮ ಸೇರಿದಂತೆ ಯೋಗದ ನಾನಾ ಪ್ರಕಾರಗಳ ಕುರಿತು ಒಂದು ವಾರಗಳ ಕಾಲ ತರಬೇತಿ ನೀಡಿದರು.