ನೀರಾವರಿ ಯೋಜನೆಗಳ ಫಲವಾಗಿ ಹಿಂದಿನಂತೆ ಕೃಷಿ, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲ- ಎಂ. ಬಿ. ಪಾಟೀಲ

ವಿಜಯಪುರ: ಜನರು(Public) ಈ ಮುಂಚೆ ಕುಡಿಯುವ ನೀರಿಗಾಗಿ(Drinking Water) ಪರದಾಡುವ ಪರಿಸ್ಥಿತಿ ಇತ್ತು.  ಬೆಳೆಗಳಿಗೆ ನೀರುಣಿಸುವುದಂತೂ ಅಸಾಧ್ಯವಾಗಿತ್ತು.  ಆದರೆ ವಿಜಯಪುರ ಜಿಲ್ಲೆ ನೀರಾವರಿಗೆ(Irrigation) ಒಳಪಟ್ಟಿದ್ದರಿಂದ ಈಗ ಕೃಷಿ(Agriculture) ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ(KPCC Campaign Committee Chairman M. B. Patil) ಹೇಳಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರನ್ನು ನಾನಾ ಗ್ರಾಮಸ್ಥರು ಸನ್ಮಾನಿಸಿದರು

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪೂರ ಎಚ್. ಗ್ರಾಮದಲ್ಲಿ ಜಲಜೀವನ್ ಮಿಷನ್‍ಯೋಜನೆಯಡಿ ರೂ. 16.31 ಕೋ. ಲಕ್ಷ ವೆಚ್ಚದಲ್ಲಿ ಮನೆ-ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಬೆಳೆಗಳಿಗೆ ಅಗತ್ಯವಿರುವಷ್ಟು ನೀರು ದೊರೆತರೆ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ.  ಇದರಿಂದ ಅನ್ನದಾತರು ಆರ್ಥಿಕವಾಗಿಯೂ ಸದೃಢರಾಗುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಆರ್. ಜಿ. ಯರನಾಳ, ಹನಮಂತ ಸಾವಳಸಂಗ, ಯಲ್ಲಪ್ಪ ಕಲಬಳಗಿ, ರವಿ ಬಿದರಿ, ಯಾಸೀನ್ ಸಬಸಾಗರ, ಮಾಡ್ಡೆಪ್ಪ ವಿಜಾಪುರ, ಅಶೋಕ ಸಾವಳಸಂಗ, ಮಾಡ್ದೆಪ್ಪಕುಮಟಗಿ, ಸಿದ್ದಣ್ಣ  ಯರನಾಳ, ಕಾಶಿಬಾಯಿ ನೇರಳೆ, ಮಾಧುರಿ ಮಸೂತಿ, ಯುವ ಕಾರ್ಯಕರ್ತರಾದ ಗುರುರಾಜ ಸವಳಸಂಗ, ಸಾಗರ ಯರನಾಳ, ಬಸವರಾಜ ಪಾಟೀಲ, ರಮೇಶ ಸಾವಳಗಿ, ಸಂತೋಷ ತಿಮಶೆಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಎಂ. ಬಿ. ಪಾಟೀಲ ಅವರು ಅತಾಲಟ್ಟಿ ಹಾಗೂ ಧನ್ಯಾಳ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಲಿಗೆ ಭೂಮಿ ಪೂಜೆ ನೆರವೇರಿಸಿದರು.

Leave a Reply

ಹೊಸ ಪೋಸ್ಟ್‌