ಪ್ರಧಾನಿಗೆ ಪತ್ರ ಬರೆದ ಎಂ. ಬಿ. ಪಾಟೀಲ-ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹ

ವಿಜಯಪುರ: ಯುದ್ಧಪೀಡಿತ(War Hit) ಉಕ್ರೇನಿನಿಂದ(Ukraine) ಸ್ವದೇಶಕ್ಕೆ ಹಿಂತಿರುಗಿರುವ(Returned) ವೈದ್ಯಕೀಯ ವಿದ್ಯಾರ್ಥಿಗಳMedical Students) ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Midi) ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಅವರು ಪತ್ರ ಬರೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ.

ಯುದ್ಧ ಪೀಡಿತ ಉಕ್ರೇನಿನಿಂದ ಸ್ವದೇಶಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಮಾನ್ಯ @PMOIndia ಅವರಿಗೆ ಪತ್ರ ಬರೆದಿರುವೆ. ‌ನಮ್ಮ‌ ವಿಜಯಪುರದ ವಿದ್ಯಾರ್ಥಿಗಳಿಗೆ BLDE ಡೀಮ್ಡ್ ವಿವಿ ಯಿಂದ ಉಚಿತ ಪಾಠ, ತರಬೇತಿ, ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವ ಕುರಿತು ಅವರ ಗಮನಕ್ಕೆ ತರಲಾಗಿದೆ.

ಯುದ್ದ ಕೊನೆಗೊಂಡರೂ ಉಕ್ರೇನ್ ನಲ್ಲಿ ಸದ್ಯಕ್ಕೆ ಕಾಲೇಜು ಆರಂಭವಾಗುವ ಸೂಚನೆಗಳಿಲ್ಲ. ‌ಉಕ್ರೇನ್–ರಷ್ಯಾ ಯುದ್ಧದ ನಿಮಿತ್ತ ಇದೊಂದು ಬಾರಿ ಹಾಲಿ ನಿಯಮಗಳಿಗೆ ವಿನಾಯಿತಿ ಕೊಟ್ಟು ಸ್ವದೇಶದಲ್ಲೇ ಎಲ್ಲ ವೈದ್ಯ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸುವ ವಿಶೇಷ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕೆಂದು ಮನವಿ ಮಾಡಿರುವೆ ಎಂದು ಟ್ವೀಟ್ ನಲ್ಲಿ ಅವರು ತಿಳಿಸಿದ್ದಾರೆ.

ಎಂ. ಬಿ. ಪಾಟೀಲ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರ
ಎಂ. ಬಿ. ಪಾಟೀಲ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರ

ಪತ್ರದ ಸಾರಾಂಶ ಇಂತಿದೆ

ಮಾನ್ಯರೇ,

ರಷ್ಯಾ-ಉಕ್ರೇನ್ ಮಧ್ಯೆ ನಡೆದಿರುವ ಯುದ್ಧದ ಬಗ್ಗೆ ತಮಗೆ ತಿಳಿದಿದೆ.‌‌ ಇದರಿಂದಾಗಿ ಭಾರತದ ಹಲವಾರು ವೈದ್ಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸಿ ಉಕ್ರೇನಿನಿಂದ ಭಾರತಕ್ಕೆ ವಾಪಸಾಗಿದ್ದಾರೆ. ಒಂದು ವರದಿಯಂತೆ 18000 ಭಾರತೀಯ ವೈದ್ಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಿದ್ದಾರೆ. ಅಲ್ಲದೆ ಇವರಲ್ಲಿ 840 ವಿದ್ಯಾರ್ಥಿಗಳು ಕರ್ನಾಟಕದವರಿದ್ದಾರೆ.‌‌ ಈಗ ಈಗ ಅವರ ಶಿಕ್ಷಣ ಅತಂತ್ರವಾಗಿದೆ.

ವಿಜಯಪುರದ ಶ್ರೀ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಸಲು ಇಲ್ಲಿನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಉಕ್ರೇನ್ ನಿಂದ ಮರಳಿರುವ ವಿಜಯಪುರ ಜಿಲ್ಲೆಯ 17 ವಿ ವಿದ್ಯಾರ್ಥಿಗಳಿಗೆ ಮುತ್ತು ಚೀನಾದಲ್ಲಿ ಲಾಕಡೌನ್ ನಿಂದಾಗಿ ವಾಪಸಾಗಿದ್ದ ಐದು ಜನ ವಿದ್ಯಾರ್ಥಿಗಳಿಗೂ ಈ ಕಾಲೇಜಿನಲ್ಲಿ ಲೈಬ್ರರಿ ಸೇರಿದಂತೆ ಲಭ್ಯ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಅಲ್ಲದೆ. ‌ಅಲ್ಲದೆ, ಈ ವಿದ್ಯಾರ್ಥಿಗಳಿಗೆ ಬೋಧಿಸಲು ಉಪನ್ಯಾಸಕರನ್ನು ನಿಯೋಜಿಸಲಾಗಿದೆ.

ಯುಕ್ರೇನ್ ಯುದ್ಧ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ. ಈಗಲೇ ಯುದ್ಧ ಮುಗಿದರೂ ಉಕ್ರೇನಿನಲ್ಲಿ ಪರಿಸ್ಥಿತಿ ಸಾಮಾನ್ಯವಾಗಲು ತಿಂಗಳುಗಳು ಬೇಕಾಗುತ್ತದೆ. ಯುಕ್ರೇನ್ ನಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಲು ಮೂಲಭೂತ ಸೌಕರ್ಯಗಳು ನಿರ್ಮಾಣವಾಗಲು ಸಾಕಷ್ಟು ಸಮಯ ಮತ್ತು ಪ್ರಯತ್ನಗಳು ಬೇಕಾಗುತ್ತವೆ. ಅಲ್ಲದೆ ಈ ವಿದ್ಯಾರ್ಥಿಗಳು ಮತ್ತೆ ಯುಕ್ರೇನ್ ಗೆ ಹೋಗಿ ವೈದ್ಯಕೀಯ ಕೋರ್ಸ್ ಮುಗಿಸಲು ಮತ್ತು ಡಿಗ್ರಿ ಪಡೆಯಲು ಇರುವ ಅವಕಾಶಗಳು ಕಡಿಮೆ ಇವೆ.

ಕರ್ನಾಟಕದಲ್ಲಿ ಸರಕಾರ ಈ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಾಕಷ್ಟು ನಿರ್ದೇಶನಗಳನ್ನು ನೀಡಿದೆ. ಆದರೆ ಇವರ ನೋಂದಣಿ ಮತ್ತಿತರ ಪ್ರಕ್ರಿಯೆ ನಡೆಸಲು ಒಂದು ಸಲ ಹಾಲಿ ನಿಯಮಗಳಿಂದ ವಿನಾಯಿತಿ ನೀಡಿ, ಅವರಿರುವ ಪ್ರದೇಶದಲ್ಲಿಯೇ ಎಲ್ಲ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲು ವಿಶೇಷ ನೀತಿಯನ್ನು ಕೇಂದ್ರ ಸರ್ಕಾರ ಸರ್ಕಾರ ರೂಪಿಸಬೇಕೆಂದು ವಿನಂತಿಸುತ್ತೇವೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಂಡರೆ ಉಕ್ರೇನಿನಿಂದ ಮರಳಿರುವ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುತ್ತೇವೆ ಎಂದು ತಮ್ಮ ಗಮನಕ್ಕೆ ತರಲು‌ ಬಯಸುತ್ತೇನೆ.

ಎಂ. ಬಿ. ಪಾಟೀಲ.

ಈಗ ಕೇಂದ್ರ ಸರಕಾರ ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

ಹೊಸ ಪೋಸ್ಟ್‌