ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸಿಎಂಗೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ

ವಿಜಯಪುರ: ಚಿತ್ರದುರ್ಗದ(Chitradurga) ಮುರುಘಾ ಶರಣರು(Murugha Seer) ತಮ್ಮ ಇಡೀ ಜೀವನದುದ್ದಕ್ಕೂ ಬಸವಾದಿ(Basavaadi) ಶರಣರ(Sharanas) ಆದರ್ಶಗಳನ್ನು ಮೈಗೂಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕಾಗಿ ನೊಂದವರ ನೋವಿಗೆ ಮನವರಿಕೆಯಾಗಿ ಕೊರಳ ಧ್ವನಿಯಾಗಿ ತಮ್ಮ ಇಡೀ ಜೀವನವನ್ನು ಬಸವ ಅರ್ಪಿತ ಮಾಡಿಕೊಂಡಿದ್ದಾರೆ.  ಶ್ರೀಗಳ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸರಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಮತ್ತು ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(Sangamesh Babaleshwar) ಹೇಳಿದರು.

ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿರುವ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ನಡೆದ ಮುರುಘಾ ಶರಣರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.”

ರಾಜ್ಯದ ಬಹುತೇಕ ಸಮುದಾಯಗಳಿಗೆ ಜಗದ್ಗುರುಗಳನ್ನು ನೇಮಿಸಿ ಜೊತೆಗೆ ಧನಸಹಾಯ ಹಾಗೂ ಭೂ ದಾನವನ್ನು ಮಾಡಿ ಆ ಪೀಠಗಳನ್ನು ಸಬಲೀಕರಣಗೊಳಿಸಿ ಎಲ್ಲ ಸಮುದಾಯಗಳನ್ನು ಸಮಾಜದ ಮುಂಚೂಣಿಗೆ ತಂದವರು ಮುರುಘಾ ಶರಣರು.  ಅವರ ಜನ್ಮದಿನದಂದೇ ಸಿದ್ಧಗಂಗಾ ಶ್ರೀಗಳು ಕಾಗಿನೆಲೆ ಶ್ರೀಗಳು ಹಾಗೂ ನಾಡಿನ ಪ್ರಮುಖ ಮಠಾಧೀಶರ ಸಮ್ಮುಖದಲ್ಲಿ ಅವರ ಜನ್ಮದಿನವನ್ನು ಸಮಾನತಾ ದಿನವನ್ನಾಗಿ ಆಚರಿಸುವ ಘೋಷಣೆ ಹೊರಬಿದ್ದದ್ದು ನಾಡಿನ ಬಸವಾಭಿಮಾನಿಗಳಿಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ.   ತಾವು ಈ ನಾಡಿಗೆ ನೀಡಿದ ಕೊಡುಗೆಯನ್ನು ಸರಕಾರ ತುಂಬು ಹೃದಯದಿಂದ ಅಭಿನಂದಿಸಿ ಮುರುಘಾ ಶರಣರ ಜನ್ಮದಿನದಂದೇ ಈ ಗೌರವ ಸಲ್ಲಿಸಿರುವುದು ಅತ್ಯಂತ ಅಭಿನಂದನಾರ್ಹವಾಗಿದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಈ ಸಂದರ್ಭದಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಸಂಚಾಲಕರಾದ ಸಂತೋಷ ಇಂಡಿ,  ಅಮೀತ ಬಿರಾದಾರ, ಸತೀಶ ನಡಗಡ್ಡಿ, ಮಂಜುನಾಥ ಪಾಟೀಲ, ಪ್ರದೀಪ್ ಲಿಂಗದಳ್ಳಿ, ರವಿಕುಮಾರ ಕೆಂಗನಾಳ ಮೊದಲಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌