15 ದಿನಗಳಲ್ಲಿ ಹೋಬಳಿಗೊಂದು ಮಾದರಿ ಶಾಲೆ ಪ್ರಾರಂಭ- ಶಿಕ್ಷಣ ಸಚಿವ ಬಿ. ಸಿ. ನಾಗೇಶ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ(Vijayapura and Bagalakote) ಜಿಲ್ಲೆಗಳ ಶೈಕ್ಷಣಿಕ(Education) ಪ್ರಗತಿ ಪರಿಶೀಲನಾ ಸಭೆ(Review Meeting) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ(Primary and Higher and Skal minister) ಸಚಿವ ಬಿ. ಸಿ. ನಾಗೇಶ(B C Nagesh)  ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಕೆ ಬಿ ಜೆ ಎನ್ ಎಲ್ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. 

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಆಯಾ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.  ಶಿಕ್ಷಕರ ಶಾಲೆ ಸಮಯದ ಕುರಿತು ಖುದ್ದು ಪರಿಶೀಲನೆ ಮಾಡಬೇಕು.  ಮುಂಬರುವ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಲಾಗುವದು.  ಇದರಿಂದ ಶಿಕ್ಷಕರ ಸಮಯದ ಬಗ್ಗೆ ನಿಗಾ ವಹಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಆಲಮಟ್ಟಿಯಲ್ಲಿ ವಿಜಯಪುರ- ಬಾಗಲಕೋಟೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಬಿ. ಸಿ. ನಾಗೇಶ

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಮತ್ತು ಸರಕಾರಿ ಶಾಲೆಗಳ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದ ಸಚಿವರು, ಗುಣಮಟ್ಟದ ಶಿಕ್ಷಣದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಹಣಮಂತ ನಿರಾಣಿ, ವಿಜಯಪುರ ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ  ರಾಹುಲ ಶಿಂದೆ ಮತ್ತು ಬಾಗಲಕೋಟ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಭೂಲಾಬಾನ, ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ರವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಲಯದ ಅಪರ ಆಯುಕ್ತ ಎಸ್. ಎಸ್. ಬಿರಾದಾರ, ಸಹನಿರ್ದೇಶಕರು ಗಜಾನನ ಮನ್ನಿಕೇರಿ, ವಿಜಯಪುರ ಡಿಡಿಪಿಐ ಎನ್. ವಿ. ಹೊಸೂರ, ಬಾಗಲಕೋಟೆ ಡಿಡಿಪಿಐ ಎಸ್. ಎಸ್. ಬಿರಾದಾರ, ಡಿಡಿಪಿಐ ಅಭಿವೃದ್ಧಿ ಎಸ್. ಪಿ. ಬಾಡಗಂಡಿ, ಬಿ. ಕೆ. ನಂದನೂರ, ಪಿಯು ಡಿಡಿ ಎಸ್. ಎನ್. ಬಗಲಿ, ರಾಮಕೃಷ್ಣ ಎಂ. ಮತ್ತು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ. ಸಿ. ನಾಗೇಶ, ಶಿಕ್ಷಣ ಇಲಾಖೆಯಲ್ಲಿನ ಕೊರತೆಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವದೆಂದು ಭರವಸೆ ನೀಡಿದರು.

ಸರಕಾರ ಈ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮುಂದಿನ 15 ದಿನಗಳಲ್ಲಿ ಹೋಬಳಿಗೊಂದು ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.  ಅವಶ್ಯವಿದ್ದರೆ ಎರಡು ಕಡೆಗಳಲ್ಲಿ ಮಾದರಿ ಶಾಲೆಗಳನ್ನು ತೆರೆಯಲಾಗುವುದು.  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕಡಿಮೆ ಮಕ್ಕಳಿದ್ದ ಶಾಲೆಯನ್ನು ವಿಲೀನಗೊಳಿಸಿ ಗುಣಮಟ್ಟದ ಶಾಲೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌