ಬಿಜೆಪಿ, ಕಾಂಗ್ರೆಸ್ ಕಚೇರಿಗಳು, ಮಹಿಳಾ ವಿವಿ, ಅಮ್ಮನ ಮಡಿಲು ಟ್ರಸ್ಟ್ ಆಶ್ರಯದಲ್ಲಿ ಪ್ರತ್ಯೇಕವಾಗಿ ಅಂಬೇಡ್ಕರ್ ಜಯಂತಿ ಆಚರಣೆ

ವಿಜಯಪುರ: ಬಿಜೆಪಿ ಕಚೇರಿ(BJP Office), ಕಾಂಗ್ರೆಸ್ ಕಚೇರಿ(Congress Office), ಮಹಿಳಾ ವಿವಿ(Women University) ಮತ್ತು ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್(Ammmana Madilu Charitable Trust) ಆಶ್ರಯದಲ್ಲಿ ಪ್ರತ್ಯೇಕವಾಗಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ವಿಜಯಪುರದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಡಾ. ಅಂಬೇಡ್ಕರ್ ಜಯಂತಿ ಆಚರಣೆ

ಬಿಜೆಪಿ ಕಚೆರಿಯಲ್ಲಿ ಆಚರಣೆ

ಬಿಜೆಪಿ ಎಸ್. ಸಿ. ಮೋರ್ಚಾ ನಗರ ಘಟಕದ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಚೇತನ,  ದೇಶಕ್ಕೆ ಅದ್ಭುತವಾದ ಸಂವಿಧಾನವನ್ನು ನೀಡಿರುವ ಶ್ರೇಯಸ್ಸು ಡಾ. ಬಿ. ಆರ್. ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರವಿಕಾಂತ ಬಗಲಿ, ಗೀತಾ ಕುಗನೂರ, ವಿಠ್ಠಲ ನಡುವಿನಕೇರಿ, ವಿಜಯ ಜೋಶಿ, ಲಕ್ಷ್ಮಿ ಕನ್ನೊಳ್ಳಿ, ಬಸವರಾಜ ಬೈಚಬಾಳ, ಪಾಪುಸಿಂಗ್ ರಜಪೂತ, ಭರತ ಕೋಳಿ, ಭಾರತಿ ಭುಯ್ಯಾರ,ಅಭಿಷೇಕ ಸಾವಂತ, ಸುರೇಶ ಬಿರಾದಾರ,ರಮೇಶ ದೇವಕರ,ಸದಾಶಿವ ಚಲವಾದಿ, ಕಾಂಬಳೆ, ಉಮೇಶ ವೀರಕರ, ಅನೀಲ ಉಪ್ಪಾರ, ಮಹೇಶ ಒಡೆಯರ, ಮಲ್ಲಮ್ಮ ಜೋಗುರ, ರಾಜೇಶ ತವಸೆ, ವಿಕಾಸ ಪದಕಿ, ಸಂಪತ ಕೊಹಳ್ಳಿ, ರಮೇಶ ಶ್ಯಾಪೇಟಿ, ವಿನಾಯಕ ದಹಿಂಡೆ, ಅನೀಲ ಉಪ್ಪಾರ, ಸಂತೋಷ ನಿಂಬರಗಿ, ಸತೀಶ ಡೋಬಳೆ ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಬಿಜೆಪಿ ಕಛೇರಿಯಿಂದ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿನ ಅಂಬೇಡ್ಕರ್ ವೃತ್ತದ ವರೆಗೂ ತೆರಳಿದ ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ

ವಿಜಯಪುರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 131ನೇ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಮಾನವ ಕುಲದ ಶ್ರೇಷ್ಠ ಚಿಂತಕರಾಗಿದ್ದರು.  ದೀನ ಮತ್ತು ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕರಾಗಿದ್ದರು.  ಇಂಥ ಮಹಾನ ಚೇತನ ಈ ಜಗತ್ತಿನಲ್ಲಿ, ಅದರಲ್ಲೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಭಾರತದಲ್ಲಿ ಹುಟ್ಟಿದ್ದೇ ಒಂದು ಮಹಾ ವಿಷ್ಮಯ.  ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಕೇವಲ ದಲಿತರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ ಎನ್ನುವುದು ತಪ್ಪು.  ಡಾ. ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮತ್ತು ನ್ಯಾಯವಾದಿ ಕೆ. ಎಫ್. ಅಂಕಲಗಿ, ಕಾಂಗ್ರೆಸ್ ಮುಖಂಡರಾದ ಡಿ. ಎಚ್. ಕಲಾಲ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್‌ ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಬಾಷ ಕಾಲೇಬಾಗ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನ್ನವರ, ನಾಗಠಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಾಜಹಾನ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ತಮ್ಮಣ್ಣ ಮೇಲಿನಕೇರಿ, ಜಿಲ್ಲಾ ಕಿಸಾನ ಘಟಕದ ಅಧ್ಯಕ್ಷ ಬಾಪುಗೌಡ ಪಾಟೀಲ ವಡವಡಗಿ, ಪರವೇಜ ಚಟ್ಟರಕಿ, ಈರಪ್ಪ ಜಕ್ಕಣ್ಣವರ, ಶರಣಪ್ಪ ಯಕ್ಕುಂಡಿ, ರಾಕೇಶ ಕಲ್ಲೂರ, ಹಾಜಿಲಾಲ ದಳವಾಯಿ, ಸಲೀಮ ಪೀರಜಾದೆ, ಮಲ್ಲನಗೌಡ ಪಾಟೀಲ, ಶಂಕರಸಿಂಗ ಹಜೇರಿ, ಮಂಜುಳಾ ಗಾಯಕವಾಡ, ರುಕ್ಮಿಣಿ ಲಮಾಣಿ, ಎಂ.ಎ. ಬಕ್ಷಿ, ಹಾಜಿ ಪಿಂಜಾರ, ಶ್ರೀಕಾಂತ ದೊಡಮನಿ, ಲಕ್ಷ್ಮಿ ಕ್ಷೀರಸಾಗರ, ಸೈಯ್ಯದ ಮೊಹಸಿನ್ ಇನಾಮದಾರ, ಆಸಿಫ್ ಜುನೇದಿ, ಮಲ್ಲಿಕಾರ್ಜುನ ಪರಸಣ್ಣವರ, ಸಂತೋಷ ಬಾಲಗಾಂವಿ, ಶಫೀಕ ಮನಗೂಳಿ, ಪ್ರಕಾಶ ಕಟ್ಟಿಮನಿ, ಅನ್ನಪೂರ್ಣ ಬೀಳಗಿಕರ, ಮಲ್ಲು ತೊರವಿ, ನಿಂಗಪ್ಪ ಸಂಗಾಪೂರ, ಅಂಬಣ್ಣ ಕಲಮನಿ, ಎಸ್.ಎಸ್. ಪಟೇಲ ಮುಂತಾದವರು ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಚರಣೆ

ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 131ನೆಯ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ, ಅಂಬೇಡ್ಕರ್ ಅವರು ಆಧುನಿಕ ಭಾರತದ ಪಿತಾಮಹ ಎಂದು ಹೇಳಿದರು.

ಕುಲಸಚಿವ ಎಂ. ಎನ್. ಚೋರಗಸ್ತಿ, ಮಾಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ., ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಕಣ್ಣನ, ಸಹಾಯಕ ಪ್ರಾಧ್ಯಾಪಕ ಡಾ.ಸಕ್ಪಾಲ ಹೂವಣ್ಣ ಮಾತನಾಡಿದರು.

ಡಾ. ಬಿ. ಆರ್ .ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ವೆಂಕೋಬ ನಾರಾಯಣಪ್ಪ ಸ್ವಾಗತಿಸಿದರು.  ಸಹಾಯಕ ನಿರ್ದೇಶಕ ಡಾ. ಸುರೇಶ ಕೆ. ಪಿ. ವಂದಿಸಿದರು.  ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನಲ್ಲಿ ಆಚರಣೆ

ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿರುವ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಹಾಗೂ ಜ್ಞಾನ ಜೋಳಿಗೆ ಫೌಂಡೇಶನ್ನಿನ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ, ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ.  ನಾವು ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಜಗತ್ತಿನಲ್ಲಿ ಅದು ನಾವು ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ.  ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ವಿಶ್ವಮಾನ್ಯ ವ್ಯಕ್ತಿಯನ್ನಾಗಿಸಿದ್ದು ಅವರ ಸತತವಾದ ಓದು ಪುಸ್ತಕ ಪ್ರೇಮ.  ಹೀಗಾಗಿ ನಾಳಿನ ಭವಿಷ್ಯದ ಆಶಾಕಿರಣವಾಗಿರುವ ಭಾರತೀಯ ಮಕ್ಕಳಿಗೆ ಬುದ್ಧ, ಬಸವ, ಅಂಬೇಡ್ಕರ ಅವರಂತೆ ಉತ್ಕೃಷ್ಟ ವ್ಯಕ್ತಿಗಳಾಗಿ ಬೆಳೆಯಬೇಕಾದರೆ ಬಾಲ್ಯದಲ್ಲಿಯೇ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಹೇಳಿದರು.

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುಸ್ತಕ ವಿತರಣೆ

ಶುಕ್ರವಾರ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಉದ್ಘಾಟನೆಯಾಗಲಿರುವ ಇಂಚಗೇರಿ ಗ್ರಾಮದ ನಾನಾ ದಲಿತ ಸಂಘಟನೆಗಳು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಊರಿನ ಹಿರಿಯರ ಸಹಕಾರದಿಂದ ಪ್ರಾರಂಭವಾಗಲಿರುವ ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಗ್ರಂಥಾಲಯಕ್ಕೆ ಜ್ಞಾನ ಜೋಳಿಗೆ ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಪರವಾಗಿ 500 ಉತ್ಕೃಷ್ಟ ಪುಸ್ತಕಗಳನ್ನು ಇಂಚಗೇರಿಯಿಂದ ಆಗಮಿಸಿದ್ದ ಯುವಕ ಸಂಘದ ಪದಾಧಿಕಾರಿಗಳಿಗೆ ಮೂಲಕ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೋಲಿಸ್ ಅಧಿಕಾರಿ ಭಗವಂತರಾಯ ಮಾಲಿಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಬೆಳ್ಳೆನವರ, ಮಹಾಂತೇಶ, ಚರಣರಾಜ, ಶಶಿಕುಮಾರ, ಕೃಷ್ಣ ಬಿದರಿ, ಆನಂದ ಕಂಬಾರ, ಮಂಜುನಾಥ ಬಡಿಗೇರ, ರಫೀಕ್ ಯಾದಗಿರಿ, ಅಂಬರೀಶ್ ಬೆಳ್ಳೆನವರ, ಸಂತೋಷ ಇಂಡಿ, ಸತೀಶ ನಡಗಡ್ಡಿ, ದತ್ತು ಹಳ್ಳಿ, ಪ್ರದೀಪ ಲಿಂಗದಳ್ಳಿ, ರವಿಕಿರಣ ಕೆಂಗನಾಳ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ನಾಗಠಾಣ ಮಂಡಲ ವತಿಯಿಂದ ನಡೆದ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಣೆ

ಬಿಜೆಪಿ ನಾಗಠಾಣ ಮಂಡಲ ವತಿಯಿಂದ ರಕ್ತದಾನ ಶಿಬಿರ

ಬಿಜೆಪಿ ನಾಗಠಾಣ ಮಂಡಲ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  100 ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಮತ್ತು ಅಂಗವಿಕಲರೂ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣ ಪತ್ರ ಹಾಗೂ ಗುಲಾಬಿ ಪುಷ್ಪ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.  ಅಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.

ಬಿಜೆಪಿ ನಾಗಠಾಣ ಮಂಡಲ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಯುವಕ

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನವೀನ ಅರಕೇರಿ, ನಾಗಠಾಣ ಮಂಡಲದ ಅಧ್ಯಕ್ಷ ಈಶ್ವರ ಶಿವೂರ, ಕಾರ್ಯಾಲಯ ಕಾರ್ಯದರ್ಶಿ ಶರಣಬಸಪ್ಪ ಕುಂಬಾರ, ನಾಗಠಾಣ ಮಂಡಳಿ ಯುವ ಮೊರ್ಚಾ ಅಧ್ಯಕ್ಷ ರವಿ ಬಿರಾದಾರ, ಓಬಿಸಿ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ (ನಾಗಠಾಣ) ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ನೇತೃತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ಕಾಂಗ್ರೆಸ್ ಕಾರ್ಯಕರ್ತರಿಂದ ಅಂಬೇಡ್ಕರ್ ಜಯಂತಿ ಆಚರಣೆ 

ಅಂಬೇಡ್ಕರರ 131ನೇ ಜಯಂತಿಯ ಅಂಗವಾಗಿ ವಿಜಯಪುರ ನಗರದ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದಿಂದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕ್ರೀಡಾಂಗಣದ ವರೆಗೆ ಪಾದಯಾತ್ರೆ ನಡೆಸಿ ಅಂಬೇಡ್ಕರರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಮೀದ ಮುಶ್ರಿಫ್, ಡಾ. ಬಿ. ಆರ್. ಅಂಬೇಡ್ಕರರು ಕೇವಲ ದಲಿತರಿಗೆ ಮಾತ್ರ ಸೀಮಿತ ಅಲ್ಲ.  ಅವರು ಭಾರತದ ಪ್ರತಿಯೊಬ್ಬ ಪ್ರಜೆಗೂ ಮಹಾನಾಯಕರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಾಥ್ ಪೂಜಾರಿ, ಮೈನುದ್ದಿನ್ ಬಿಳಗಿ, ಇರ್ಫಾನ್ ಶೇಖ, ಇಲಿಯಾಸ್ ಬಗಲಿ, ಅಕ್ರಂ ಮಾಶಾಳಕರ್, ಕಲ್ಲಪ್ಪ ಫಾರಶೆಟ್ಟಿ, ರವುಫ ಮೌಲಾನ, ರಜಾಕ ಭಗವಾನ, ಈರಪ್ಪ ಕುಂಬಾರ, ತಿಪ್ಪಣ್ಣ ಕಮಲದಿನ್ನಿ ಮಹಾದೇವಿ ಗೋಕಾಕ, ಶ್ರೀಕಾಂತ ಛಾಯಾಗೋಳ, ಹೈದರ ನದಾಫ, ಆಬಿದ ಸಂಗಮ, ಶರಣಪ್ಪ ಯಕ್ಕುಂಡಿ, ಡಾ!! ಬಶೀರಅಹ್ಮದ್, ಅಕ್ಷಯ ಅಜ್ಮನಿ, ಆರತಿ ಶಹಪೂರ, ಜಮೀರ ಬಕ್ಷಿ, ಮಲ್ಲು ತೊರವಿ, ಧನರಾಜ್ ಎ, ಅಮೀನ ನದಾಫ, ಶುಕೂರ ಇನಾಂದಾರ, ಇಸಾಕ್ ಗುಲ್ಬರ್ಗ, ಲತೀಫ ಕಲಾದಗಿ, ಅಲ್ಲಭಕ್ಷ ಮುಲ್ಲಾ, ಹಂಜು ಜಮಖಂಡಿ, ಅಲ್ಲಾಭಕ್ಷ ಬಡೆಘರ, ಸೈಯದಭಾಷಾ ಮದಭಾವಿ, ಮಹಬೂಬ ಮಧಬಾವಿ, ಮೀರಸಬ್ ಮುಲ್ಲಾ, ಮಂಜುಳಾ ಜಾದವ, ದೀಪಾ ಕುಂಬಾರ, ಅಕ್ರಮ ಜಹಗೀರದಾರ, ಅಶ್ಫಾಕ್ ಮನಗೂಳಿ, ಅರುಣ ಭಜಂತ್ರಿ, ಹಾಜಿ ನದಾಫ, ಹಸನ ಪಟೇಲ್, ಗೌಸ ಹವಾಲ್ದಾರ್, ಮಂಜುಳಾ ಗಾಯಕ್ವಾಡ, ಸುಜಾತ ಶಿಂಧೆ, ಅಮೀದಾ ಪಟೇಲ್, ಸಂಜು ಹುಬ್ಬಳ್ಳಿ, ಅಜಯ್ ರಜಪೂತ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌