ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ ಸುಮಾರು ಒಂದು ರೂ. 1 ಲ. ಕೋ. ಅನುದಾನ ಬಂದಿದೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೇಂದ್ರ(Union) ಸರಕಾರದಿಂದ(Government) ವಿಜಯಪುರ ಜಿಲ್ಲೆಯಲ್ಲಿ ನಾನಾ ಯೋಜನೆಗಳಿಗೆ(Various Schemes) ಸುಮಾರು ಒಂದು ಲಕ್ಷ ಕೋಟಿ ರೂಪಾಯಿ(Rs. 1 lakn Crore) ಅನುದಾನ(Grant) ಬಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ದಿ ಇಲಾಖೆ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಿದ ವಸತಿ ಸಮುಚ್ಛಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರೂ. 1560 ಕೋ. ವೆಚ್ಚದಲ್ಲಿ ವಿಜಯಪುರ- ಸೋಲಾಪುರ ರಸ್ತೆ, ರೂ. 1408 ಕೋ. ವೆಚ್ಚದಲ್ಲಿ ರೈಲ್ವೆ ಡಬಲ್ ಲೇನ್, ನಾಲ್ಕು ಕಡೆ ರೈಲ್ವೆ ಓವರ್ ಬ್ರಿಜ್, ವಸತಿ ಯೋಜನೆಗಳು ಸೇರಿದಂತೆ ನಾನಾ ಯೋಜನೆಗಳಡಿ ಕೇಂದ್ರ ಸರಕಾರವು ಬೃಹತ್ ಮೊತ್ತದ ಅನುದಾನ ಒದಗಿಸಿದೆ ಎಂದು ಅವರು ಹೇಳಿದರು.

ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಮುಖಂಡರು

ಉಡಾನ್ ಯೋಜನೆ ಮೂಲಕ ಬಡವರು ಕೂಡ ವಿಮಾನಯಾನ ಸೌಕರ್ಯ ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ತಲಾ ರೂ. 7.50 ಲಕ್ಷ ವೆಚ್ಚದಲ್ಲಿ ಬಡವರಿಗೆ ಮನೆ ಸೌಲಭ್ಯ ಒದಗಿಸಲಾಗಿದೆ. ಬಡವರು, ವ್ಯಾಪಾರಸ್ಥರು, ರೈತರು ನಾನಾ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಪೌರಕಾರ್ಮಿಕರ ಅನುಕೂಲಕ್ಕಾಗಿ ರೂ. 4.06 ಕೋ. ವೆಚ್ಚದಲ್ಲಿ ಜಿ+2 ಮನೆಗಳನ್ನು ನಿರ್ಮಿಸಲಾಗಿದ್ದು, 56 ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ದೈಹಿಕವಾಗಿ ಅಶಕ್ತರಿರುವವರಿಗೆ ನೆಲಮಹಡಿ ಒದಗಿಸಲು ಹಾಗೂ ಪೌರ ಕಾರ್ಮಿಕರು ಸ್ವಚ್ಛ ವಿಜಯಪುರಕ್ಕೆ ಅಧಿಕಾರಿಗಳಿಗೆ ಸಹಕಾರ ಮುಂದುವರೆಸುವಂತೆ ಅವರು ರಮೇಶ ಜಿಗಜಿಣಗಿ ಸಲಹೆ ನೀಡಿದರು.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ವಿಜಯಪುರ ನಗರದ ಜನರ ಆರೋಗ್ಯ ನಿರ್ವಹಣೆಗೆ ಪೌರಕಾರ್ಮಿಕರು ಸ್ವಚ್ಛತೆ ಕಾಪಾಡುತ್ತಿದ್ದಾರೆ. ನಗರ ಸೌಂದರ್ಯೀಕರಣಕ್ಕೆ ಅವರ ಕೊಡುಗೆ ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಪ್ರತಿ ವರ್ಷ ಎರಡು ಬಾರಿ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯಾಗಬೇಕು. ನಗರ ಸೌಂದರ್ಯೀಕರಣದಲ್ಲಿ ಇವರ ಪಾತ್ರ ಅಪಾರವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತನಾಡಿ, ಪೌರಕಾರ್ಮಿಕರಿಗೆ ಮನೆ ಶಾಶ್ವತ ಪರಿಹಾರವಾಗಿದೆ. ಪೌರಕಾರ್ಮಿಕರ ನಿವೇಶನ ಇದ್ದಲ್ಲಿ ಮನೆ ನಿರ್ಮಿಸಿಕೊಡಲಾಗುವುದ. ವಿಶೇಷ ಘಟಕ ಯೋಜನೆಯಡಿ ಅನುದಾನದಿಂದ ಪೌರ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಕೊಡುವ ಉದ್ದೇಶ ಇದೆ. ಸ್ವಚ್ಛ ಸರ್ವೇಕ್ಷಣೆಯಡಿ ನಗರ ಆಯ್ಕೆಯ ಅನುಕೂಲಕ್ಕಾಗಿ ಹೆಚ್ಚಿನ ವೋಟಿಂಗ್ ನಡೆಯಬೇಕಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಓವರ್ ಟೈಮ್ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಗಮನ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇಂದಿನ ದಿನ ಸ್ಮರಣೀಯ. ಪೌರ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರ ವಿತರಣೆ, ಕರ ವಸೂಲಿಯಲ್ಲಿ ನಾನಾ ಅಧಿಕಾರಿಗಳಿಂದ ದಾಖಲೆಯ ಸಾಧನೆಯಾಗಿದೆ. ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಹಿಂಬದಿಯಲ್ಲಿ ವಸತಿ ಗೃಹಗಳು, ಎಸ್ ಸಿ ಎಸ್ ಟಿ ಪೌರ ಕಾರ್ಮಿಕರಿಗೆ ಅನುಕೂಲವಾಗಲು ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರ ,ಸಮವಸ್ತ್ರ, ವಿತರಿಸಲಾಯಿತು. ಕರ ವಸೂಲಿಯಲ್ಲಿ ಸಾಧನೆಗೈದ ಪಾಲಿಕೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರ ಸಿದ್ದು ಭೋಸಗಿ, ಡಿಯುಡಿಸಿ ಕಾರ್ಯಪಾಲಕ ಅಭಿಯಂತರ ಸುರಕೂಡ ಉಪಸ್ಥಿತರಿದ್ದರು.

ಮಹಾನಗರಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸ್ವಾಗತಿಸಿದರು.

Leave a Reply

ಹೊಸ ಪೋಸ್ಟ್‌